Gadget Loka

All about gadgtes in Kannada

ಮೊಬಿಸ್ಟಾರ್ ಎಕ್ಸ್‌ 1 ನೋಚ್

ಕಡಿಮೆ ಬೆಲೆಗೆ ಸುಂದರ ವಿನ್ಯಾಸದ ಫೋನ್ ವಿಯೆಟ್ನಾಂ ಮೂಲದ ಮೊಬಿಸ್ಟಾರ್ ಕಂಪೆನಿ ಭಾರತದಲ್ಲೂ ಫೋನ್‌ಗಳನ್ನು ಮಾರುತ್ತಿದೆ. ಈ ಕಂಪೆನಿಯ ಉತ್ಪನ್ನಗಳು ಕಡಿಮೆ ಬೆಲೆಯವು. ಬಹುತೇಕ ಕಂಪೆನಿಗಳಂತೆ ಮೊಬಿಸ್ಟಾರ್ ಕೂಡ ₹10-15 ಸಾವಿರದ ಒಳಗಿನ ಮಾರುಕಟ್ಟೆಯನ್ನೇ ಗಮನದಲ್ಲಿಟ್ಟುಕೊಂಡಿದೆ. ಯಾಕೆಂದರೆ ಈ ಬೆಲೆಯ ಫೋನ್‌ಗಳೇ ಅತ್ಯಧಿಕ ಮಾರಾಟವಾಗುತ್ತಿರುವವು. ಅವರ ಎಕ್ಸ್‌ 1 ನೋಚ್ (Mobiistar X1 Notch) ಸ್ಮಾರ್ಟ್‌ಫೋನ್ ಬಗ್ಗೆ ನಮ್ಮ ವಿಮರ್ಶಾ ನೋಟ ಇಲ್ಲಿದೆ. ಗುಣವೈಶಿಷ್ಟ್ಯಗಳು ಪ್ರೋಸೆಸರ್ 4 x 2 ಗಿಗಾಹರ್ಟ್ಸ್ ಪ್ರೋಸೆಸರ್ (Mediatek 6761) ಗ್ರಾಫಿಕ್ಸ್ […]

ಏಮ್ ಆಂಡ್ ಶೂಟ್ ಕ್ಯಾಮರ ಕೊಳ್ಳುವುದು ಹೇಗೆ?

ಸುಮ್ಮನೆ ನೋಡುವುದು ಮತ್ತು ಕ್ಲಿಕ್ ಮಾಡುವುದು -ಇಂತಹ ಕ್ಯಾಮರಾಗಳಿಗೆ ಏಮ್ ಆಂಡ್ ಶೂಟ್ ಕ್ಯಾಮರ ಎನ್ನುತ್ತಾರೆ. ಅಂತಹ ಕ್ಯಾಮರಗಳನ್ನೆ ಬಹುಪಾಲು ಜನರು ಕೊಳ್ಳುವುದು. ಇಂತಹ ಕ್ಯಾಮರ ಕೊಳ್ಳುವುದಕ್ಕೊಂದು ಕಿರು ಕೈಪಿಡಿ ನೀಡಲು ಸಣ್ಣ ಪ್ರಯತ್ನ. ಏಮ್ ಆಂಡ್ ಶೂಟ್ ಕ್ಯಾಮರಾಗಳಲ್ಲಿ ಹೆಸರೇ ಸೂಚಿಸುವಂತೆ ಇವುಗಳಲ್ಲಿ ಹೆಚ್ಚು ಆಯ್ಕೆಗಳಿಲ್ಲ. ಸುಮ್ಮನೆ ಕ್ಯಾಮರಾ ಮೂಲಕ ನೋಡುವುದು ಮತ್ತು ಕ್ಲಿಕ್ ಮಾಡುವುದು, ಅಷ್ಟೆ. ಅತಿಯಾದ ಹಾಗೂ ಕ್ಲಿಷ್ಟವಾದ ಆಯ್ಕೆಗಳಿಲ್ಲ. ಜನಸಾಮಾನ್ಯರು ಕೊಳ್ಳುವುದು ಇಂತಹ ಕ್ಯಾಮರಗಳನ್ನೇ. ಅವುಗಳನ್ನು ಕೊಳ್ಳುವಾಗ ಯಾವ್ಯಾವುದರ ಬಗ್ಗೆ ಗಮನ […]

ಐಎಸ್‌ಒ (ISO) ಫಿಲ್ಮ್ ಸ್ಪೀಡ್

ಐಎಸ್‌ಒ (ISO) ಫಿಲ್ಮ್ ಸ್ಪೀಡ್ – ಫೋಟೋಗ್ರಫಿಯಲ್ಲಿ ಬಲಸುವ ಫಿಲ್ಮಿನ ವೇಗವನ್ನು ಅಳೆಯುವ ಮಾನಕ. ಈಗ ಡಿಜಿಟಲ್ ಯುಗದಲ್ಲಿ ಫಿಲ್ಮ್ ಇಲ್ಲ. ಆದರೂ ಈ ಮಾನಕ ಉಳಿದುಕೊಂಡಿದೆ. ಐಎಸ್‌ಒ ಜಾಸ್ತಿಯಿದ್ದಷ್ಟು ಅದು ಅತಿ ಕಡಿಮೆ ಬೆಳಕಿನಲ್ಲೂ ಕೆಲಸ ಮಾಡುತ್ತದೆ ಎಂದು ತಿಳಿಯತಕ್ಕದ್ದು. ಸಾಮಾನ್ಯವಾಗಿ ಇದರ ಸಂಖ್ಯೆ 100ರಿಂದ ಪ್ರಾರಂಭವಾಗುತ್ತದೆ. ಕೊನೆಯ ಸಂಖ್ಯೆ ಹೆಚ್ಚಿದ್ದಷ್ಟು ಕ್ಯಾಮರ ಉತ್ತಮವಾದುದು ಎಂದು ತಿಳಿಯಬಹುದು.

ಬ್ಲೂಟೂತ್ ಸ್ಟೀರಿಯೋ ಮತ್ತು ರಿಮೋಟ್ ಕಂಟ್ರೋಲ್

ಬ್ಲೂಟೂತ್ ಸ್ಟೀರಿಯೋ ಮತ್ತು ರಿಮೋಟ್ ಕಂಟ್ರೋಲ್ – ಬ್ಲೂಟೂತ್ ಹೆಡ್‌ಸೆಟ್‌ಗಳ ಪ್ರೋಟೋಕೋಲ್‌ಗಳಲ್ಲಿ A2DP (Advanced Audio Distribution Profile) ಮತ್ತು AVRCP (Audio/Video Remote Control Profile). ಇವುಗಳು ಕ್ರಮವಾಗಿ ಸ್ಟೀರಿಯೋ ಮತ್ತು ದೂರನಿಯಂತ್ರಣವನ್ನು ಸೂಚಿಸುತ್ತವೆ. A2DP ಇಲ್ಲದಿದ್ದಲ್ಲಿ ಸ್ಟೀರಿಯೋ ಇಲ್ಲ ಎಂದು ತಿಳಿಯತಕ್ಕದ್ದು. ದೂರನಿಯಂತ್ರಣ ಪ್ರೊಟೋಕೋಲ್ ಬಳಸಿ ಸಂಗೀತ ಕೇಳುವಾಗ ಹಿಂದಿನ ಹಾಡು ಅಥವಾ ಮುಂದಿನ ಹಾಡನ್ನು ಆಯ್ಕೆ ಮಾಡಿಕೊಳ್ಳಬಹುದು. ಅಂದರೆ ಗಣಕ ಅಥವಾ ಮೊಬೈಲ್ ಫೋನಿನಲ್ಲಿ ಮುಂದಿನ ಹಾಡನ್ನು ಹುಡುಕಿ ಅದನ್ನು ಆಯ್ಕೆ ಮಾಡಿಕೊಳ್ಳಬೇಕಾಗಿಲ್ಲ. […]

ಬ್ಲೂಟೂತ್ (Bluetooth)

ಬ್ಲೂಟೂತ್ (Bluetooth) – ನಿಸ್ತಂತು (ವಯರ್ಲೆಸ್) ತಂತ್ರಜ್ಞಾನ ಮೂಲಕ ತಂತಿ ಇಲ್ಲದೆ ಸಂಪರ್ಕ ಸಾಧಿಸುವ ಒಂದು ವಿಧಾನ. ಇದನ್ನು ಸಾಮಾನ್ಯವಾಗಿ ಹೆಡ್‌ಫೋನ್‌ಗಳನ್ನು ಮೊಬೈಲ್ ಫೋನಿಗೆ ಜೋಡಿಸಲು ಬಳಸುತ್ತಾರೆ. ಗಣಕದಿಂದ ಸಂಪರ್ಕ ಸಾಧಿಸಲೂ ಬಳಸಬಹುದು. ಇದರ ವ್ಯಾಪ್ತಿ ಮತ್ತು ಮಾಹಿತಿಯ ಸಾರಿಗೆಯ ಶಕ್ತಿ ತುಂಬ ಕಡಿಮೆ. ಒಂದು ಮೊಬೈಲ್ ಫೋನಿನಿಂದ ಇನ್ನೊಂದು ಮೊಬೈಲ್ ಫೋನಿಗೆ ಬ್ಲೂಟೂತ್ ಮೂಲಕ ಒಂದು ಛಾಯಾಚಿತ್ರ ಕಳುಹಿಸಲು ಸುಮಾರು ಎರಡರಿಂದ ಐದಾರು ನಿಮಿಷ ಹಿಡಿಯುವ ಸಾಧ್ಯತೆಗಳಿವೆ. ಕಾರಿನಲ್ಲಿ ಜೋಡಿಸುವ ಸಂಗೀತ ಉಪಕರಣಗಳಲ್ಲೂ ಈ ಸೌಲಭ್ಯ […]

ಅಮೋಲೆಡ್ (AMOLED)

ಅಮೋಲೆಡ್(AMOLED -active-matrix organic light-emitting diode) – ಎಲ್‌ಇಡಿ ಎಂದರೆ ಬೆಳಕು ನೀಡುವ ಡಯೋಡ್‌ಗಳು. ಇವುಗಳನ್ನು ಎಲ್ಲ ಕಡೆ ನೋಡಿಯೇ ಇರುತ್ತೀರಿ. ಅಮೋಲೆಡ್‌ನಲ್ಲಿ ಕ್ರಿಯಾಶೀಲ ಮ್ಯಾಟ್ರಿಕ್ಸ್ ಸಾವಯವ ಎಲ್‌ಇಡಿ ಪರದೆ ಇರುತ್ತದೆ. ಇವು ಲ್ಯಾಪ್‌ಟಾಪ್‌ಗಳಲ್ಲಿ ಬಳಸುವ ಎಲ್‌ಸಿಡಿ ಪರದೆಗಳಿಗಿಂತ ಕಡಿಮೆ ವಿದ್ಯುತ್ ಬಳಸುತ್ತವೆ ಮಾತ್ರವಲ್ಲ ಉತ್ತಮ ಗುಣಮಟ್ಟದ ಚಿತ್ರಗಳನ್ನೂ ನೀಡುತ್ತವೆ.

ಮ್ಯಾಕ್ರೋ ಫೋಟೋಗ್ರಾಫಿ (Macrophotography)

ಮ್ಯಾಕ್ರೋ ಫೋಟೋಗ್ರಾಫಿ (Macrophotography) – ಇದನ್ನು ಕ್ಲೋಸ್‌ಅಪ್ ಫೊಟೋಗ್ರಾಫಿ ಎಂದೂ ಕರೆಯುತ್ತಾರೆ. ಅತಿ ಚಿಕ್ಕ ವಸ್ತುಗಳನ್ನು ಅತಿ ಹತ್ತಿರದಿಂದ ಫೋಟೋ ತೆಗೆಯುವುದು. ಉದಾಹರಣೆಗೆ ನೊಣ. ಚಿಕ್ಕ ವಸ್ತುಗಳನ್ನು ಅವುಗಳ ನಿಜಗಾತ್ರಕ್ಕಿಂತಲೂ ದೊಡ್ಡದಾಗಿ ಫೋಟೋ ತೆಗೆಯುವುದೇ ಮುಖ್ಯವಾಗಿ ಮ್ಯಾಕ್ರೋ ಫೋಟೋಗ್ರಾಫಿಯ ಉದ್ದೇಶ. ಇದರಲ್ಲಿ ಚಿಕ್ಕ ವಸ್ತುಗಳ ಮೇಲ್ಮೈಯ ಚಿಕ್ಕಚಿಕ್ಕ ವಿವರಗಳನ್ನು ದೊಡ್ಡದಾಗಿ ತೋರಿಸಲಾಗುವುದು. ಅಂದರೆ ನೊಣದ ತಲೆಯಲ್ಲಿರುವ ರೋಮಗಳೆಲ್ಲ ಸ್ಪಷ್ಟವಾಗಿ ಕಾಣತಕ್ಕದ್ದು. ಮ್ಯಾಕ್ರೋ ಫೋಟೋಗ್ರಾಫಿ ಸಾಮಾನ್ಯವಾಗಿ ವೈಜ್ಞಾನಿಕ ಅಧ್ಯಯನಗಳಲ್ಲಿ ಹೆಚ್ಚಾಗಿ ಬಳೆಕಯಾಗುತ್ತದೆ. ಆದರೂ ಇತ್ತೀಚೆಗೆ ಬಹುಪಾಲು ಕ್ಯಾಮರಾಗಳಲ್ಲಿ ಈ […]

Gadget Loka © 2018