Gadget Loka

All about gadgtes in Kannada

ಇಮೇಜ್ ಸ್ಟೆಬಿಲೈಸೇಶನ್ (image stabilization)

ಇಮೇಜ್ ಸ್ಟೆಬಿಲೈಸೇಶನ್ (image stabilization) – ಫೋಟೋ ತೆಗೆಯುವಾಗ ಕ್ಯಾಮರ ಅಲ್ಲಾಡಿದರೂ ಅಥವಾ ತಾನಿರುವ ಜಾಗವನ್ನು ಸ್ವಲ್ಪ ಬದಲಾಯಿಸಿದರೂ ಮೂಡಿಬರುವ ಫೋಟೋ ಸ್ಪಷ್ಟವಾಗಿರುವಂತೆ ಮಾಡುವ ಅತ್ಯಾಧುನಿಕ ತಂತ್ರಜ್ಞಾನ. ಈ ತಂತ್ರಜ್ಞಾನ ಅಳವಡಿಸಿರುವ ಲೆನ್ಸ್‌ನ ಒಳಗೆ ಕ್ಯಾಮರಾ ಚಲನೆಯನ್ನು ಅರಿತುಕೊಂಡು ಅದನ್ನು ಋಣಾತ್ಮಗೊಳಿಸಲು ಅಗತ್ಯ ಚಲನೆಯನ್ನು ಮಾಡುವ ಇನ್ನೊಂದು ಕಿರು ಲೆನ್ಸ್ ಅಳವಡಿಸಿರುತ್ತಾರೆ. ಕಾನನ್ ಇದಕ್ಕೆ ಐಎಸ್ (IS) ಎಂದು ಹೆಸರಿಸಿದೆ. ನಿಕಾನ್ ಕಂಪೆನಿಯವರು ಇದನ್ನು ವೈಬ್ರೇಶನ್ ರೆಸಿಸ್ಟೆಂಟ್ (VR – Vibration Resistant) ಎನ್ನುತ್ತಾರೆ. ಕಾನನ್ ಕ್ಯಾಮರಾಗಳಲ್ಲಿ […]

ಮೌಸ್ (mouse)

ಮೌಸ್ (mouse) -ಗಣಕಕ್ಕೆ ಮಾಹಿತಿಯನ್ನು ಊಡಿಸುವ ಸಾಧನ. ಇಲ್ಲಿ ಊಡಿಸುವ ಮಾಹಿತಿ ಅಕ್ಷರ ರೂಪದಲ್ಲಿಲ್ಲ. ಬದಲಿಗೆ ಮೌಸ್ ತಾನು ಇರುವ ಸ್ಥಳದ ನಿರ್ದೇಶನಾಂಕ (coordinates) ವನ್ನು ಗಣಕ್ಕೆ ರವಾನಿಸುತ್ತದೆ. ಈ ಮಾಹಿತಿಯ ಮೂಲಕ ಗಣಕವು ಪರದೆಯ ಮೇಲಿರುವ ಸೂಚಕವನ್ನು (cursor) ಅತ್ತಿತ್ತ ಚಲಿಸುತ್ತದೆ. ಈ ಸೂಚಕವು ಯಾವುದಾದರೊಂದು ತಂತ್ರಾಂಶದ ಲಾಂಛನ ಯಾ ಚಿಹ್ನೆ (icon) ಯ ಮೇಲಿದ್ದಾಗ ಮೌಸ್‌ನ್ನು ಕ್ಲಿಕ್ ಮಾಡಿದರೆ ಆ ತಂತ್ರಾಂಶವು ಚಾಲನೆಗೊಳ್ಳುತ್ತದೆ. ಮೌಸ್‌ನ್ನು ಇನ್ನೂ ಹಲವು ಕಾರ್ಯಗಳಿಗೆ ಬಳಸಲಾಗುತ್ತದೆ. ತಿರುಗುವ ಚಕ್ರವಿರುವ ಮೌಸ್ […]

ಕೆಪಾಸಿಟಿವ್ ಮತ್ತು ರೆಸಿಸ್ಟಿವ್ ಸ್ಪರ್ಶಸಂವೇದಿ ಪರದೆಗಳು (capacitive and resistive touchscreens)

ಕೆಪಾಸಿಟಿವ್ ಮತ್ತು ರೆಸಿಸ್ಟಿವ್ ಸ್ಪರ್ಶಸಂವೇದಿ ಪರದೆಗಳು (capacitive and resistive touchscreens) – ಸಾಮಾನ್ಯವಾಗಿ ಬಳಕೆಯಲ್ಲಿರುವ ಸ್ಪರ್ಶಸಂವೇದಿ ಪರದೆಗಳಲ್ಲಿ ಎರಡು ಬಗೆ. ಕೆಪಾಸಿಟಿವ್ ಮತ್ತು ರೆಸಿಸ್ಟಿವ್. ರೆಸಿಸ್ಟಿವ್ ಪರದೆಗಳನ್ನು ಬಳಸಲು ಒಂದು ಪ್ಲಾಸ್ಟಿಕ್ ಕಡ್ಡಿಯನ್ನು ಬಳಸಬೇಕಾಗುತ್ತದೆ. ಇದನ್ನು ಸ್ಟೈಲಸ್ ಎನ್ನುತ್ತಾರೆ. ಈಗ ಈ ಪರದೆಗಳು ಹಳತಾಗುತ್ತಿವೆ. ಕೆಪಾಸಿಟಿವ್ ಪರದೆಗಳನ್ನು ಬೆರಳಿನಲ್ಲಿ ಒತ್ತಿ ಕೆಲಸ ಮಾಡಬಹದು. ಬ್ಯಾಂಕ್ ಎಟಿಎಂಗಳಲ್ಲಿ ಈ ನಮೂನೆಯ ಪರದೆಗಳನ್ನು ನೀವೆಲ್ಲ ಬಳಸಿಯೇ ಇರುತ್ತೀರಾ.

ಬಾಸ್ ಮತ್ತು ಟ್ರೆಬ್ಲ್ (Bass and treble)

ಬಾಸ್ ಮತ್ತು ಟ್ರೆಬ್ಲ್ (Bass and treble) – ಯಾವುದೇ ಸಂಗೀತದ ಸ್ಥಾಯಿಯನ್ನು ತಿಳಿಸುವ ಮೌಲ್ಯ. ಅತಿ ಕೆಳಗಿನದನ್ನು ಬಾಸ್ ಎನ್ನುತ್ತಾರೆ. ಉದಾಹರಣೆಗೆ ಡೋಲು, ಮೃದಂಗ, ಇತ್ಯಾದಿ. ಅತಿ ಹೆಚ್ಚಿನದನ್ನು ಟ್ರೆಬ್ಲ್ ಎನ್ನುತ್ತಾರೆ. ಉದಾಹರಣೆಗೆ ತಂತಿವಾದ್ಯಗಳು, ಸಂತೂರ್, ಗೆಜ್ಜೆ, ಇತ್ಯಾದಿ. ಅಧಿಕ ಕಂಪನಾಂಕದ (ಹರ್ಟ್ಝ್, Hertz, Hz) ಧ್ವನಿ ಟ್ರೆಬ್ಲ್ ಎನಿಸಿಕೊಳ್ಳುತ್ತದೆ ಹಾಗೂ ಕಡಿಮೆ ಕಂಪನಾಂಕದ ಧ್ವನಿ ಬಾಸ್ ಎನಿಸಿಕೊಳ್ಳುತ್ತದೆ. ಯಾವುದೇ ಸ್ಪೀಕರ್ ಉತ್ತಮ ಅನ್ನಿಸಿಕೊಳ್ಳಬೇಕಾದರೆ ಬಾಸ್ ಮತ್ತು ಟ್ರೆಬ್ಲ್ ಧ್ವನಿಗಳನ್ನು ಉತ್ತಮವಾಗಿ ಪುನರುತ್ಪಾದನೆ ಮಾಡತಕ್ಕದ್ದು. ಸಾಮಾನ್ಯವಾಗಿ […]

ಧ್ಯುತಿರಂಧ್ರ (ಅಪೆರ್ಚರ್ – aperture)

ಧ್ಯುತಿರಂಧ್ರ (ಅಪೆರ್ಚರ್ – aperture) ಕ್ಯಾಮರಾದ ಲೆನ್ಸ್ ಅನ್ನು ಸಾಮಾನ್ಯವಾಗಿ ಸಂಪೂರ್ಣವಾಗಿ ತೆರೆಯಲಾಗುವುದಿಲ್ಲ. ಬೆಳಕಿನ ಪ್ರಖರತೆಯನ್ನು ಅವಲಂಬಿಸಿ ಹೆಚ್ಚು ಯಾ ಕಡಿಮೆ ಮಾಡಲಾಗುತ್ತದೆ. ಇದನ್ನೇ ಅಪೆರ್ಚರ್ ಎನ್ನುತ್ತಾರೆ. ಈ ತೆರೆಯುವಿಕೆ ಅರ್ಥಾತ್ ವ್ಯಾಸವನ್ನು ಮಸೂರದ ನಾಭಿದೂರಕ್ಕೆ (focal length) ಅನುಪಾತ ಮೂಲಕ ಬರೆಯಲಾಗುತ್ತದೆ. ಉದಾ – f/2.8, f/5.6, f/18, ಇತ್ಯಾದಿ. ಮಸೂರದ ನಾಭಿದೂರ 50ಮಿ.ಮೀ. ಇದೆ ಮತ್ತು ಅಪೆರ್ಚರ್ ಸಂಖ್ಯೆ f/5.6 ಎಂದಾದಲ್ಲಿ ಮಸೂರದ ತೆರೆಯುವಿಕೆಯ ವ್ಯಾಸ ಸುಮಾರು 9ಮಿ.ಮೀ. ಎಂದು ಲೆಕ್ಕ ಹಾಕಬಹುದು. ಜಾಸ್ತಿ […]

ಕವಾಟವೇಗ (ಶಟ್ಟರ್ ಸ್ಪೀಡ್ – shutter speed)

ಕವಾಟವೇಗ (ಶಟ್ಟರ್ ಸ್ಪೀಡ್ – shutter speed) – ಫೋಟೋ ತೆಗೆಯಬೇಕಾದರೆ ಮಸೂರ ಮತ್ತು ಚಿತ್ರೀಕರಣದ ಪರದೆ ನಡುವೆ ಇರುವ ಕವಾಟವನ್ನು (ಶಟ್ಟರ್) ಸ್ವಲ್ಪ ಸಮಯದ ಕಾಲ ತೆರೆದು ಮತ್ತೆ ಮುಚ್ಚಬೇಕಾಗುತ್ತದೆ. ಈ ಕವಾಟ ತೆರೆದು ಮುಚ್ಚುವ ಸಮಯವನ್ನು ಶಟ್ಟರ್ ಸ್ಪೀಡ್ ಎನ್ನುತ್ತಾರೆ. ಸಾಮಾನ್ಯವಾಗಿ ಇವನ್ನು ಸೆಕೆಂಡಿನ ಎಷ್ಟನೇ ಪಾಲು ಎಂದು ನಮೂದಿಸುತ್ತಾರೆ. ಉದಾಹರಣೆಗೆ 1/125 ಎಂದರೆ ಒಂದು ಸೆಕೆಂಡಿನ 125ನೆ ಒಂದರಷ್ಟು ಕಾಲದಲ್ಲಿ ಶಟ್ಟರ್ ತೆರೆದು ಮುಚ್ಚಲಾಗುತ್ತದೆ ಎಂದು ಅರ್ಥ. ಹಾರುವ ಹಕ್ಕಿ ಅಥವಾ ಆಟದಂತಹ […]

ಅತಿ ಸಮೀಪ ಸಂವಹನ (NFC)

ಅತಿ ಸಮೀಪ ಸಂವಹನ (Near Field Communication, NFC) ಅಥವಾ ಸಮೀಪ ಕ್ಷೇತ್ರ ಸಂವಹನ ಎಂದರೆ ತುಂಬ ಸಮೀಪದಲ್ಲಿರುವ ಎರಡು ಸಾಧನಗಳ ನಡುವೆ ನಿಸ್ತಂತು (wireless) ಸಂವಹನವನ್ನು ಸಾಧ್ಯವಾಗಿಸುವ ತಂತ್ರಜ್ಞಾನ. ಇತ್ತೀಚೆಗೆ ಮಾರುಕಟ್ಟೆಗೆ ಬರುತ್ತಿರುವ ಹಲವು ಸ್ಮಾರ್ಟ್‌ಫೋನ್‌ಗಳಲ್ಲಿ ಈ ಸೌಲಭ್ಯವಿದೆ. ಇದನ್ನು ಬಳಸಿ ಸ್ಪೀಕರ್ ಜೋಡಣೆ, ಫೋನ್‌ಗಳ ನಡುವೆ ಸಂಪರ್ಕ ಸಾಧಿಸುವುದು, ಅಂಗಡಿಗಳಲ್ಲಿ ಹಣ ವರ್ಗಾವಣೆ ಎಲ್ಲ ಸಾಧ್ಯ.

ಸ್ಮಾರ್ಟ್‌ಫೋನ್

ಸ್ಮಾರ್ಟ್‌ಫೋನ್ (smartphone) ಅರ್ಥಾತ್ ಚತುರವಾಣಿ ಎಂದರೆ ಮೊಬೈಲ್ ಫೋನಿನ ಕೆಲಸಗಳನ್ನೂ ಮಾಡಬಲ್ಲ ಕಿಸೆಗಣಕ. ಈ ಫೋನುಗಳಲ್ಲಿ ಅಂತರಜಾಲ ನೋಡುವುದು, ಇಮೈಲ್ ಮಾಡುವುದು, ಪದಸಂಸ್ಕರಣೆ, ಜಿಪಿಎಸ್ ಬಳಸಿ ತಾನು ಇರುವ ಸ್ಥಾನ ತಿಳಿಯುವುದು, ಇನ್ನೂ ಏನೇನೋ ಮಾಡಬಹುದು. ಇತ್ತೀಚೆಗೆ ಇಂತಹ ಫೋನುಗಳು ಅಗ್ಗವಾಗುತ್ತ ಜನಸಾಮಾನ್ಯರ ಕೈಗೆಟುಕುವಂತಾಗುತ್ತಿವೆ. ಇಂತಹ ಫೋನುಗಳಿಗೆ ಸಹಸ್ರಾರು ತಂತ್ರಾಂಶಗಳು ಅಂತರಜಾಲದಲ್ಲಿ ಲಭ್ಯವಿವೆ. ಇವುಗಳು ಕೆಲಸ ಮಾಡಲು ಆಂಡ್ರೋಯಿಡ್, ವಿಂಡೋಸ್ ಫೋನ್, ಐಓಎಸ್, ಇತ್ಯಾದಿ ಯಾವುದಾದರೊಂದು ಕಾರ್ಯಾಚರಣೆಯ ವ್ಯವಸ್ಥೆ ಅಗತ್ಯ. ಯಾಕೋ ಏನೋ ಸಿಂಬಿಯನ್ ಫೋನ್‌ಗಳು ಸ್ಮಾರ್ಟ್‌ಫೋನ್ […]

ರಿಯಲ್‌ಮಿ ಸಿ1

ಕಡಿಮೆ ಬೆಲೆಗೆ ಉತ್ತಮ ಫೋನ್ ಒಪ್ಪೊ ಕಂಪೆನಿಯ ಸಬ್-ಬ್ರ್ಯಾಂಡ್ ಆಗಿ ಬಂದ ರಿಯಲ್‌ಮಿ ಈಗ ಸ್ವಂತ ಕಂಪೆನಿಯಾಗಿದೆ. ರಿಯಲ್‌ಮಿಯವರು ಅತಿ ಕಡಿಮೆ ಹಣಕ್ಕೆ ಉತ್ತಮ ಗುಣವೈಶಿಷ್ಟ್ಯಗಳ ಫೋನ್ ತಯಾರಿಸಿ ಶಿಯೋಮಿಯವರ ಜೊತೆ ನೇರ ಸ್ಪರ್ಧೆಗೆ ಇಳಿದಿದ್ದಾರೆ. ರಿಯಲ್‌ಮಿ1 ಮತ್ತು ರಿಯಲ್‌ಮಿ 2 ಪ್ರೊ ಎಂಬ ಎರಡು ಫೋನ್‌ಗಳ ವಿಮರ್ಶೆಯನ್ನು ಗ್ಯಾಜೆಟ್‌ಲೋಕ ಅಂಕಣದಲ್ಲಿ ಈ ಹಿಂದೆ ನೀಡಲಾಗಿತ್ತು. ನೀಡುವ ಹಣಕ್ಕೆ ನಿಜಕ್ಕೂ ಉತ್ತಮ ಉತ್ಪನ್ನಗಳು ಎಂದು ಅವುಗಳ ಬಗ್ಗೆ ಬರೆಯಲಾಗಿತ್ತು. ಈ ಸಲ ವಿಮರ್ಶೆ ಮಾಡುತ್ತಿರುವುದು ರಿಯಲ್‌ಮಿ ಸಿ1 […]

ಏಸುಸ್ ಝೆನ್‌ಫೋನ್ ಮ್ಯಾಕ್ಸ್ ಎಂ1

ದೊಡ್ಡ ಬ್ಯಾಟರಿ, ಚಿಕ್ಕ ಗಾತ್ರ ಹಾಗೂ ಕಡಿಮೆ ತೂಕ   ತೈವಾನ್ ದೇಶದ ಏಸುಸ್ ಕಂಪೆನಿ ಭಾರತದ ಗಣಕ, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಮತ್ತು ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಒಂದು ಗಮನಾರ್ಹ ಹೆಸರು. ಈ ಕಂಪೆನಿಯ ಹಲವು ಉತ್ಪನ್ನಗಳನ್ನು ಇದೇ ಅಂಕಣದಲ್ಲಿ ವಿಮರ್ಶಿಸಲಾಗಿತ್ತು. ಏಸುಸ್ ಇತ್ತೀಚೆಗೆ ಕೆಲವು ಆಯ್ದ ಕ್ಷೇತ್ರಗಳಲ್ಲಿ ಈಗಾಗಲೇ ಸ್ಥಾಪಿತರಾದವರನ್ನು ಗುರಿಯಾಗಿಟ್ಟುಕೊಂಡು ಫೋನ್‌ಗಳನ್ನು ಮಾರುಕಟ್ಟೆಗೆ ಬಿಡಲು ಪ್ರಾರಂಭಿಸಿದೆ. ಮೇಲ್ದರ್ಜೆಯ ಫೋನ್‌ಗಳಲ್ಲಿ ವನ್‌ಪ್ಲಸ್‌ಗೆ ಪ್ರತಿಸ್ಪರ್ಧಿಯಾಗಿ ಙೆನ್‌ಫೋನ್ ೫ ಝಡ್ ಅನ್ನು ತಯಾರಿಸಿದೆ. ಕಡಿಮೆ ಬೆಲೆಯ ಫೋನ್‌ಗಳಲ್ಲಿ ಶಿಯೋಮಿಗೆ ಪ್ರತಿಸ್ಪರ್ಧಿಯಾಗಲು […]

Gadget Loka © 2018