360 ಡಿಗ್ರಿ ಲ್ಯಾಪ್‌ಟಾಪ್ ಇತ್ತೀಚೆಗೆ ಬಹುತೇಕ ಜನರು ಮನೆಯಿಂದಲೇ ಕೆಲಸ ಮಾಡುತ್ತಿರುವುದರಿಂದ ಲ್ಯಾಪ್‌ಟಾಪ್‌ಗಳಿಗೆ ಬೇಡಿಕೆ ಏರಿದೆ. ಲ್ಯಾಪ್‌ಟಾಪ್‌ಗಳಲ್ಲಿ ಹಲವು ನಮೂನೆಗಳಿವೆ. ಒಂದು ನಮೂನೆಯ ಲ್ಯಾಪ್‌ಟಾಪ್‌ಗಳಲ್ಲಿ ಸ್ಪರ್ಶಸಂವೇದಿ ಪರದೆ ಇರುತ್ತದೆ. ಇಂತಹವುಗಳಲ್ಲೂ ಕೆಲವು ನಮೂನೆಗಳಲ್ಲಿ ಈ ಪರದೆಯನ್ನು ಪೂರ್ತಿ ಹಿಂದಕ್ಕೆ ತಿರುಗಿಸಿ ಲ್ಯಾಪ್‌ಟಾಪ್ ಅನ್ನು ಟ್ಯಾಬ್ಲೆಟ್ ಆಗಿ ಬದಲಾಯಿಸಬಹುದು. ಅಂತಹ ಒಂದು ಲ್ಯಾಪ್‌ಟಾಪ್ ಏಸುಸ್ ಎಕ್ಸ್‌ಪರ್ಟ್‌ಬುಕ್ ಬಿ5 ಫ್ಲಿಪ್ (Asus ExpertBook B5 Flip). ಈ ಸಂಚಿಕೆಯಲ್ಲಿ ಅದರ ವಿಮರ್ಶೆ ನೋಡೋಣ. ಗುಣವೈಶಿಷ್ಟ್ಯಗಳು ಪ್ರೋಸೆಸರ್ […]
Category: ವಿಮರ್ಶೆ
Review of gadgets
ಏಸುಸ್ ಸಿ223ಎನ್
ಆನ್‌ಲೈನ್ ತರಗತಿಗಳಿಗಾಗಿ ಒಂದು ಕ್ರೋಮ್‌ಬುಕ್ ಕೋವಿಡ್-19 ರಿಂದಾಗಿ ಹಲವು ಕ್ಷೇತ್ರಗಳಲ್ಲಿ ಗಣನೀಯವಾಗಿ ಬದಲಾವಣೆಯಾಗಿದೆ. ಅವುಗಳಲ್ಲಿ ಒಂದು ಪ್ರಮುಖವಾದ ಬದಲಾವಣೆ ಎಂದರೆ ಬಹುತೇಕ ಸಭೆ, ಗೋಷ್ಠಿ, ತರಗತಿಗಳು ಎಲ್ಲ ಆನ್‌ಲೈನ್ ಆಗಿರುವುದು. ಶಿಕ್ಷಣ ಕ್ಷೇತ್ರದಲ್ಲಂತೂ ಇದು ತುಂಬ ದೊಡ್ಡ ಬದಲಾವಣೆಯನ್ನೇ ತಂದಿದೆ. ಆನ್‌ಲೈನ್ ತರಗತಿಗಳಿಂದಾಗಿ ಕಡಿಮೆ ಬೆಲೆಗೆ ದೊರಕಬಹುದಾದ ಲ್ಯಾಪ್‌ಟಾಪ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಲ್ಯಾಪ್‌ಟಾಪ್‌ಗಳಿಗೆ ಹೆಚ್ಚಿನ ಶಕ್ತಿಯ ಅಗತ್ಯವಿಲ್ಲ. ಯಾಕೆಂದರೆ ಇದರ ಕೆಲಸವೆಲ್ಲ ಅಂತರಜಾಲದ ಮೂಲಕವೇ ಆಗುತ್ತದೆ, ಒಂದು ಬ್ರೌಸರ್ ಇದ್ದರೆ ಸಾಕು. ಈ ನಮೂನೆಯ […]
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 22 5G
5ಜಿ ಬೇಕೆನ್ನುವವರಿಗಾಗಿ ಗ್ಯಾಜೆಟ್‌ಲೋಕದಲ್ಲಿ ಸ್ಯಾಮ್‌ಸಂಗ್‌ನವರ ಹಲವಾರು ಫೋನ್‌ಗಳ ವಿಮರ್ಶೆಯನ್ನು ಮಾಡಿದ್ದೇವೆ. ಇತ್ತೀಚೆಗೆ ಅವರು ಸ್ವಲ್ಪ ಕಡಿಮೆ ಬೆಲೆಯ ಶ್ರೇಣಿಯಲ್ಲಿ 5ಜಿ ಸಂಪರ್ಕ ಇರುವ ಫೋನನ್ನು ಬಿಡುಗಡೆ ಮಾಡಿದ್ದಾರೆ. ಅದುವೆ ನಾವು ಈ ಸಲ ವಿಮರ್ಶೆ ಮಾಡುತ್ತಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ22 5ಜಿ (Samsung Galaxy A22 5G) ಫೋನ್. ಗುಣವೈಶಿಷ್ಟ್ಯಗಳು ಪ್ರೋಸೆಸರ್ 8 x 2.2 ಗಿಗಾಹರ್ಟ್ಸ್ ಪ್ರೋಸೆಸರ್ (Dimensity 700 5G) ಗ್ರಾಫಿಕ್ಸ್ ಪ್ರೋಸೆಸರ್ Mali-G57 ಮೆಮೊರಿ 6 + 128 […]
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 32
ಕಡಿಮೆ ಬೆಲೆಯ ಇನ್ನೊಂದು ಫೋನ್ ಸ್ಯಾಮ್‌ಸಂಗ್ ಮೊಬೈಲ್ ಫೋನ್‌ಗಳನ್ನು ಹಲವು ಶ್ರೇಣಿಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ. ಎಲ್ಲಕ್ಕಿಂತ ಮೇಲ್ದರ್ಜೆಯ ಎಸ್ ಶ್ರೇಣಿ, ಸುಂದರ ವಿನ್ಯಾಸಕ್ಕೆ ಹೆಸರಾದ ಎ ಶ್ರೇಣಿ, ಅಂತರಜಾಲ ಮಳಿಗೆಗಳ ಮೂಲಕ ಮಾತ್ರವೇ ದೊರೆಯುವ ಎಂ ಶ್ರೇಣಿ, ಹೀಗೆ ಇವೆ. ಭಾರತದಲ್ಲಿ ಸ್ಯಾಮ್‌ಸಂಗ್‌ಗೆ ಅದರದೇ ಆದ ಗಿರಾಕಿಗಳಿದ್ದಾರೆ. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಮಧ್ಯಮ ದರ್ಜೆಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ32 (Samsung Galaxy M32) ಫೋನ್. ಗುಣವೈಶಿಷ್ಟ್ಯಗಳು ಪ್ರೋಸೆಸರ್ 8 […]
ಕ್ರಾಸ್‌ಬೀಟ್ಸ್ ಇಗ್ನೈಟ್ ಎಸ್2
ಕೈಗೆಟುಕುವ ಬೆಲೆಗೆ ಭಾರತೀಯ ಸ್ಮಾರ್ಟ್‌ವಾಚ್ ಸ್ಮಾರ್ಟ್‌ವಾಚ್ ಅಂದರೆ ಬುದ್ಧಿವಂತ ಕೈಗಡಿಯಾರಗಳು. ಇವು ಮಾಮೂಲಿ ಡಿಜಿಟಲ್ ವಾಚ್‌ಗಳಿಗಿಂತ ಭಿನ್ನ. ಇವು ಸಮಯ, ದಿನ, ವಾರ, ಇತ್ಯಾದಿ ತೋರಿಸುವ ಜೊತೆ ಇನ್ನೂ ಹಲವಾರು ಕೆಲಸಗಳನ್ನು ಮಾಡುತ್ತವೆ. ಮುಖ್ಯವಾಗಿ ಇವು ಕೈಗಡಿಯಾರ ಮತ್ತು ಆರೋಗ್ಯಪಟ್ಟಿ ಇವೆರಡರ ಕೆಲಸಗಳನ್ನೂ ಮಾಡುತ್ತವೆ. ಇಂತಹ ಸ್ಮಾರ್ಟ್‌ವಾಚ್‌ಗಳು ಮಾರುಕಟ್ಟೆಯಲ್ಲಿ ಹಲವಾರಿವೆ. ಅಂತಹ ಒಂದು ಸ್ಮಾರ್ಟ್‌ವಾಚ್ ಕ್ರಾಸ್‌ಬೀಟ್ಸ್ ಇಗ್ನೈಟ್ ಎಸ್2 (Crossbeats Ignite S2). ಇದರ ಒಂದು ಪ್ರಮುಖ ವೈಶಿಷ್ಟ್ಯ ಎಂದರೆ ಇದು ಭಾರತೀಯ ಉತ್ಪನ್ನ. ಈ […]
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 52
ಒಂದು ಸುಂದರ ಫೋನ್ ಸ್ಯಾಮ್‌ಸಂಗ್‌ನವರು ಹಲವು ಶ್ರೇಣಿಗಳಲ್ಲಿ ಫೋನ್‌ಗಳನ್ನು ನಿರಂತರವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ. ಕೆಲವೊಮ್ಮೆ ಒಂದು ಫೋನಿಗೂ ಇನ್ನೊಂದಕ್ಕೂ ಅದರ ಗುಣವೈಶಿಷ್ಟ್ಯದಲ್ಲಿ ಸ್ವಲ್ಪವೇ ವ್ಯತ್ಯಾಸ ಇರುತ್ತದೆ. ಕೊಳ್ಳುವವರಿಗೂ ಈ ರೀತಿ ಫೋನ್‌ಗಳ ಸಾಗರದಲ್ಲಿ ಬೇಕಾದುದನ್ನು ಆಯ್ಕೆ ಮಾಡುವುದು ಕೆಲವರಿಗೆ ಕಷ್ಟವಾಗುತ್ತದೆ. ಸ್ಯಾಮ್‌ಸಂಗ್‌ನವ ಎ ಶ್ರೇಣಿಯ ಫೋನ್‌ಗಳು ಸುಂದರ ವಿನ್ಯಾಸಕ್ಕೆ ಹೆಸರಾಗಿವೆ. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಅಂತಹ ಒಂದು ಪೋನ್. ಅದುವೇ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ52 (Samsung Galaxy A52). ಗುಣವೈಶಿಷ್ಟ್ಯಗಳು ಪ್ರೋಸೆಸರ್ 2 […]
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 12
ನೀಡುವ ಬೆಲೆಗೆ ಉತ್ತಮ ಫೋನ್ ಮೊಬೈಲ್ ಫೋನ್‌ಗಳ ಕ್ಷೇತ್ರದಲ್ಲಿ ಸ್ಯಾಮ್‌ಸಂಗ್‌ಗೆ ತನ್ನದೇ ಸ್ಥಾನವಿದೆ. ಭಾರತದಲ್ಲಿ ಅದು ಯಾವಾಗಲು ಮೊದಲ 5 ಸ್ಥಾನಗಳಲ್ಲಿ ಒಂದಾಗಿರುತ್ತದೆ. ಸುಮಾರು ಸಮಯ ಮೊದಲನೆಯ ಸ್ಥಾನದಲ್ಲಿತ್ತು. ಸ್ಯಾಮ್‌ಸಂಗ್‌ಗೆ ಅದರದೇ ಆದ ಗಿರಾಕಿಗಳಿದ್ದಾರೆ. ಸ್ಮಾಸಂಗ್‌ನವರು ಹಲವು ಬೆಲೆಗಳಲ್ಲಿ ಫೋನ್‌ಗಳನ್ನು ತಯಾರಿಸುತ್ತಿದ್ದಾರೆ. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಮಧ್ಯಮ ದರ್ಜೆಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ12 (Samsung Galaxy M12) ಫೋನ್. ಗುಣವೈಶಿಷ್ಟ್ಯಗಳು ಪ್ರೋಸೆಸರ್ 8 x 2 ಗಿಗಾಹರ್ಟ್ಸ್ ಪ್ರೋಸೆಸರ್ (Exynos […]
ವಿವೊ ವಿ 20
ಸ್ವಂತೀ ಪ್ರಿಯರಿಗೆ ಮತ್ತೊಂದು ಫೋನ್ ಚೀನಾ ದೇಶದ ವಿವೊ ಕಂಪೆನಿಯ ಫೋನ್‌ಗಳು ಉತ್ತಮ ರಚನೆ, ವಿನ್ಯಾಸ ಮತ್ತು ಉತ್ತಮ ಕ್ಯಾಮೆರಗಳಿಗೆ ಹೆಸರುವಾಸಿಯಾಗಿವೆ. ಇವರು ಮಧ್ಯಮ ಬೆಲೆಯ ಕ್ಷೇತ್ರವನ್ನು ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ವಿವೋದವರ ಫೋನ್ ಕ್ಯಾಮೆರಗಳು ಚೆನ್ನಾಗಿವೆ. ನಿಮಗೆ ಉತ್ತಮ ಕ್ಯಾಮೆರ ಮಾತ್ರವೇ ಮುಖ್ಯವಾಗಿದ್ದಲ್ಲಿ ನೀವು ವಿವೊ ಫೋನ್ ಕೊಳ್ಳಬಹುದು. ಅದರಲ್ಲೂ ನೀವು ಸ್ವಂತೀ ಪ್ರಿಯರಾದರೆ ವಿವೋ ಫೋನ್ ನಿಮ್ಮದಾಗಿಸಿಕೊಳ್ಳಬಹುದು. ಈ ಸ್ವಂತೀ ಕೇಂದ್ರಿತ ವಿವೋ ಫೋನ್‌ಗಳ ಪಟ್ಟಿಗೆ ಇನ್ನೊಂದು ಸೇರ್ಪಡೆ ವಿವೊ ವಿ 20. ಈ […]
ವಿವೊ ಎಕ್ಸ್ 50
ಉತ್ತಮ ಕ್ಯಾಮೆರ ಫೋನ್ ಚೀನಾ ದೇಶದ ವಿವೊ ಕಂಪೆನಿ ಭಾರತದಲ್ಲಿ ಹಲವು ಉತ್ತಮ ಕ್ಯಾಮೆರ ಫೋನ್‌ಗಳನ್ನು ಒಂದಾದ ಮೇಲೆ ಒಂದರಂತೆ ಸತತವಾಗಿ ಬಿಡುಗಡೆ ಮಾಡುತ್ತಾ ಬಂದಿದೆ. ವಿವೊ ಕಂಪೆನಿಯ ಫೋನ್‌ಗಳು ಉತ್ತಮ ರಚನೆ, ವಿನ್ಯಾಸ ಮತ್ತು ಉತ್ತಮ ಕ್ಯಾಮೆರಗಳಿಗೆ ಹೆಸರುವಾಸಿಯಾಗಿವೆ. ಆದರೆ ಬಹುತೇಕ ಫೋನ್‌ಗಳು ಸ್ವಲ್ಪ ಮಟ್ಟಿಗೆ ಜಾಸ್ತಿ ಬೆಲೆಯವು ಎನ್ನಬಹುದು. ಅಂದರೆ ಅವರು ಉತ್ತಮ ಕ್ಯಾಮೆರವನ್ನು ನೀಡಲು ತುಂಬ ಪ್ರಯತ್ನ ಮಾಡುತ್ತಿದ್ದಾರೆ. ಆ ಸಮಯದಲ್ಲಿ ಇತರೆ ಕೇತ್ರಗಳ ಕಡೆ, ಮುಖ್ಯವಾಗಿ ಕೆಲಸದ ವೇಗದ ಕಡೆ […]
ಥೋಮ್ಸನ್ ಸ್ಮಾರ್ಟ್ ಟಿವಿ 55 ಓಎಟಿಎಚ್‌ಪಿಆರ್00101
ಉತ್ತಮ ಆಂಡ್ರೋಯಿಡ್ ಟಿವಿ ಮೂಲತಃ ಫ್ರಾನ್ಸ್ ದೇಶದ ಥೋಮ್ಸನ್ ಟಿವಿ ಇತ್ತೀಚೆಗೆ ಭಾರತದಲ್ಲಿ ತಳವೂರುತ್ತಿದೆ. ಅದು ಜನವರಿ 2018ರಲ್ಲಿ ಭಾರತದಲ್ಲಿ ಟಿ.ವಿ. ಮಾರಾಟ ಪ್ರಾರಂಭಿಸಿತ್ತು. ವಿದೇಶೀ ಕಂಪೆನಿಯಾದರೂ ಭಾರತದಲ್ಲೇ ತನ್ನ ಟಿ.ವಿ.ಗಳನ್ನು ತಯಾರಿಸುತ್ತಿದೆ. ಹಲವು ಸ್ಮಾರ್ಟ್ ಟಿ.ವಿ. ಮತ್ತು ಮಾಮೂಲಿ ಫ್ಲಾಟ್ ಟಿ.ವಿ.ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ಥೋಮ್ಸನ್ ಕಂಪೆನಿ ಅಂತರಜಾಲದ ಮೂಲಕ ಮಾರಾಟವಾಗುತ್ತಿರುವ ಬ್ರ್ಯಾಂಡ್‌ಗಳಲ್ಲಿ ಗಣನೀಯವಾದ ಸ್ಥಾನವನ್ನು ಪಡೆದಿದೆ. ಥೋಮ್ಸನ್ ಸ್ಮಾರ್ಟ್‌ಟಿವಿ 55 ಓಎಟಿಎಚ್‌ಪಿಆರ್00101 (Thomson 55 OATHPR 00101) ನಮ್ಮ ಈ ವಾರದ ಗ್ಯಾಜೆಟ್. […]