Gadget Loka

All about gadgtes in Kannada

ವಿಶ್ವವ್ಯಾಪಿ ಜಾಲ ಜನಕ

ಟಿಮ್ ಬರ್ನರ್ಸ್-ಲೀ ನೆಟ್‌ವರ್ಕ್ ಮಾರ್ಕೆಟಿಂಗ್ ಬಗ್ಗೆ ತಿಳಿಯೋಣ ಎಂದು ಅಂತರಜಾಲಕ್ಕೆ (ಇಂಟರ್‌ನೆಟ್‌ಗೆ)  ಲಗ್ಗೆ ಇಡಿ. ಜಗತ್ಪ್ರಸಿದ್ಧ ತಾಣ-ಶೋಧಕ ಗೂಗ್ಲ್‌ನಲ್ಲಿ ನೆಟ್‌ವರ್ಕ್ ಮಾರ್ಕೆಟಿಂಗ್ ಎಂದು ಬೆರಳಚ್ಚಿಸಿ ಮೌಸ್ ಗುಂಡಿಯನ್ನು ಕ್ಲಿಕ್ ಮಾಡಿ. ಈಗ ನೋಡಿ. ನೆಟ್‌ವರ್ಕ್ ಮಾರ್ಕೆಟಿಂಗ್, ನೆಟ್‌ವರ್ಕ್, ಮಾರ್ಕೆಟಿಂಗ್, ಹೀಗೆ ಹಲವು ವಿಷಯಗಳ ತಾಣಗಳ ಸೂಚಿ ದೊರೆಯುತ್ತದೆ. ನೆಟ್‌ವರ್ಕ್ ಬಗ್ಗೆ ನೀಡಿರುವ ತಾಣದ ತಂತು (ಲಿಂಕ್) ಮೇಲೆ ಕ್ಲಿಕ್ ಮಾಡಿ ನೋಡಿ. ಅದು ನಿಮ್ಮನ್ನು ಗಣಕಗಳ ಜಾಲ (ನೆಟ್‌ವರ್ಕ್) ಬಗ್ಗೆ ವಿವರ ನೀಡುವ ತಾಣವಾಗಿರುತ್ತದೆ. ಅಲ್ಲಿರುವ ಇನ್ಯಾವುದಾದರೂ […]

ಪ್ರಾಣಿಗಳ ಅಂತರಜಾಲ

ಇದೇನಿದು ವಿಚಿತ್ರ ಶೀರ್ಷಿಕೆ ಅಂದುಕೊಂಡಿರಾ? ಅದನ್ನು ವಿವರಿಸುವ ಮುನ್ನ ಹಿಂದೊಮ್ಮೆ ಸ್ಮಾರ್ಟ್‌ಸಿಟಿ ಬಗ್ಗೆ ಬರೆಯುವಾಗ ಹೇಳಿದ್ದ ವಸ್ತುಗಳ ಅಂತರಜಾಲ ನೆನಪಿಸಿಕೊಳ್ಳಿ. ಅಂತರಜಾಲದ ಮೂಲಕ ಸಂಪರ್ಕ ಹೊಂದಿರುವಂತಹ ವಸ್ತುಗಳ ಪ್ರಪಂಚಕ್ಕೆ ಇಂಗ್ಲಿಶಿನಲ್ಲಿ Internet of Things ಅಥವಾ ಚುಟುಕಾಗಿ IoT (ಐಓಟಿ) ಎಂಬ ಹೆಸರಿದೆ. ಇದಕ್ಕೆ connected devices ಎಂಬ ಇನ್ನೊಂದು ಹೆಸರೂ ಇದೆ. ಸಾಧನ, ಪರಿಕರ, ಸಂಪರ್ಕಕ್ಕೊಳಪಡಬಹುದಾದ ಗ್ಯಾಜೆಟ್‌ಗಳು, ಗಣಕ, ಸಂವೇದಕ (sensor) ಇವೆಲ್ಲ ಅಂತರಜಾಲದ ಮೂಲಕ ಸಂಪರ್ಕಗೊಂಡು ಅವುಗಳನ್ನು ವೀಕ್ಷಿಸುವುದು, ಅವುಗಳಿಂದ ಮಾಹಿತಿಯನ್ನು ಪಡೆಯುವುದು ಮತ್ತು […]

ಅವಕೆಂಪು ತಾಪಮಾಪಕ

ಇದು ಪಿಸ್ತೂಲಲ್ಲ, ಉಷ್ಣತೆ ಅಳೆಯುವ ಸಾಧನ ಈ ಕೋವಿಡ್-19ರಿಂದಾಗಿ ಜನಜೀವನದ ರೀತಿನೀತಿಗಳೇ ಬದಲಾಗಿವೆ. ಮುಖಗವಸು ಹಾಕದೆ ಮನೆಯಿಂದ ಹೊರಬರುವ ಹಾಗೆಯೇ ಇಲ್ಲ. ಯಾವುದೇ ಅಂಗಡಿ, ಮಾಲ್, ಕಚೇರಿ ಅಥವಾ ಇನ್ಯಾವುದೇ ಸಾರ್ವಜನಿಕ ಸ್ಥಳಕ್ಕೆ  ಹೋದರೆ ಅಲ್ಲಿ ಬಾಗಿಲಿನಲ್ಲಿಯೇ ಒಬ್ಬ ನಿಮ್ಮ ಹಣೆ ಅಥವಾ ಮುಂಗೈಗೆ ಒಂದು ಚಿಕ್ಕ ಪಿಸ್ತೂಲಿನಾಕಾರದ ಸಾಧನವನ್ನು ಹಿಡಿಯುತ್ತಾನೆ. ಅದರಲ್ಲಿ ಮೂಡಿಬರುವ ಸಂಖ್ಯೆಯನ್ನು ನೋಡಿ ನೀವು ಒಳಗೆ ಹೋಗಬಹುದೇ ಬಾರದೇ ಎಂದು ನಿರ್ಧರಿಸುತ್ತಾನೆ. ಏನಿದು ಈ ಸಾಧನ? ಇದು ಚಿಕ್ಕ ಪಿಸ್ತೂಲ್ ಅಥವಾ ಚಿಕ್ಕ […]

ವೈಯಕ್ತಿಕ ದತ್ತಾಂಶ ರಕ್ಷಣಾ ಮಸೂದೆ

ಮಾಹಿತಿ ಕಳ್ಳರಿಗೆ ಕಡಿವಾಣ ನೀವು ನನಗೆ ಹಂಪಿಗೆ ಯಾತ್ರೆ ಹೋಗಬೇಕೆನಿಸುತ್ತಿದೆ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿ ನೋಡಿ. ನಿಮಗೆ ಪ್ರಯಾಣ ಸಂಬಂಧಿ ಜಾಹೀರಾತುಗಳು ಕಾಣಿಸಲು ಪ್ರಾರಂಭವಾಗುತ್ತದೆ. ನನಗೆ ಹೊಟ್ಟೆನೋವು ಆಗುತ್ತಿದೆ ಎಂದು ಪೋಸ್ಟ್ ಹಾಕಿ ನೋಡಿ. ಔಷಧಿ ನೀಡುವ ಆಪ್‌ಗಳ ಜಾಹೀರಾತುಗಳು ಬರಲು ಪ್ರಾರಂಭವಾಗುತ್ತದೆ. ಏನಾಗುತ್ತಿದೆ ಎಂದರೆ ಫೇಸ್‌ಬುಕ್ ನಿಮ್ಮ ಮಾಹಿತಿಯನ್ನು ಇತರೆ ಕಂಪೆನಿ, ಉದ್ಯಮಗಳ ಜೊತೆ ಹಂಚಿಕೊಂಡಿದೆ. ಇದಕ್ಕೆ ನಿಮಗೆ ತಿಳಿಯದೆ ನೀವೇ ಅನುಮತಿಸಿರುತ್ತೀರಿ. ಅದನ್ನು ಸರಿಪಡಿಸಬಹುದು. ಇನ್ನೊಂದು ನಮೂನೆಯ ಪರಿಸ್ಥಿತಿಯನ್ನು ನೋಡೋಣ. ನೀವು ಫೇಸ್‌ಬುಕ್‌ನಿಂದಲೇ […]

ಅರಿವಿನ ಕೌಶಲ್ಯ ಮತ್ತು ವಿಕಿಪೀಡಿಯ ಸಂಪಾದನೆ

“ನನ್ನ ಮಗನಿಗೆ 85% ಅಂಕಗಳಿದ್ದವು. ಅವನ ಸಹಪಾಠಿಗೆ ಕೇವಲ 65% ಅಂಕಗಳಿದ್ದವು. ಆದರೆ ಸಾಫ್ಟ್‌ವೇರ್ ಕಂಪೆನಿಯಲ್ಲಿ ಅವನಿಗೆ ಕೆಲಸ ಸಿಕ್ಕಿತು. ನನ್ನ ಮಗನಿಗೆ ಸಿಗಲಿಲ್ಲ” -ಈ ರೀತಿಯ ಮಾತುಗಳನ್ನು ಆಗಾಗ ಕೇಳುತ್ತೇವೆ. ಇಲ್ಲಿ ಏನಾಗಿರುತ್ತದೆ ಎಂದರೆ 85% ಅಂಕ ತೆಗೆದವನು ಪರೀಕ್ಷೆಗೋಸ್ಕರ ಓದಿರುತ್ತಾನೆ. ನಮ್ಮ ಪರೀಕ್ಷೆ ಪದ್ಧತಿಗಳೂ ಅಷ್ಟೆ. ಆಲೋಚನಾಶಕ್ತಿಯನ್ನು ಪರೀಕ್ಷಿಸುವುದಿಲ್ಲ. ಪಾಠಗಳನ್ನು ಎಷ್ಟು ಬಾಯಿಪಾಠ ಮಾಡಿದ್ದಾನೆ ಎಂದಷ್ಟೆ ಪರೀಕ್ಷಿಸುತ್ತವೆ. ಆದರೆ ಕಂಪೆನಿಗಳಿಗೆ ನಡೆದಾಡುವ ವಿಶ್ವಕೋಶಗಳು ಬೇಡ. ಅವರಿಗೆ ತರ್ಕಬದ್ಧವಾಗಿ ಆಲೋಚಿಸಿ ಸಮಸ್ಯೆಗಳನ್ನು ಪರಿಹರಿಸುವವರು ಬೇಕು. ಇದಕ್ಕೆ […]

ಏಸುಸ್ ಎಕ್ಸ್‌ಪರ್ಟ್‌ಬುಕ್ ಬಿ5 ಫ್ಲಿಪ್

360 ಡಿಗ್ರಿ ಲ್ಯಾಪ್‌ಟಾಪ್   ಇತ್ತೀಚೆಗೆ ಬಹುತೇಕ ಜನರು ಮನೆಯಿಂದಲೇ ಕೆಲಸ ಮಾಡುತ್ತಿರುವುದರಿಂದ ಲ್ಯಾಪ್‌ಟಾಪ್‌ಗಳಿಗೆ ಬೇಡಿಕೆ ಏರಿದೆ. ಲ್ಯಾಪ್‌ಟಾಪ್‌ಗಳಲ್ಲಿ ಹಲವು ನಮೂನೆಗಳಿವೆ. ಒಂದು ನಮೂನೆಯ ಲ್ಯಾಪ್‌ಟಾಪ್‌ಗಳಲ್ಲಿ ಸ್ಪರ್ಶಸಂವೇದಿ ಪರದೆ ಇರುತ್ತದೆ. ಇಂತಹವುಗಳಲ್ಲೂ ಕೆಲವು ನಮೂನೆಗಳಲ್ಲಿ ಈ ಪರದೆಯನ್ನು ಪೂರ್ತಿ ಹಿಂದಕ್ಕೆ ತಿರುಗಿಸಿ ಲ್ಯಾಪ್‌ಟಾಪ್ ಅನ್ನು ಟ್ಯಾಬ್ಲೆಟ್ ಆಗಿ ಬದಲಾಯಿಸಬಹುದು. ಅಂತಹ ಒಂದು ಲ್ಯಾಪ್‌ಟಾಪ್ ಏಸುಸ್‌ ಎಕ್ಸ್‌ಪರ್ಟ್‌ಬುಕ್ ಬಿ5 ಫ್ಲಿಪ್ (Asus ExpertBook B5 Flip). ಈ ಸಂಚಿಕೆಯಲ್ಲಿ ಅದರ ವಿಮರ್ಶೆ ನೋಡೋಣ.   ಗುಣವೈಶಿಷ್ಟ್ಯಗಳು   ಪ್ರೋಸೆಸರ್ […]

ಏಸುಸ್ ಸಿ223ಎನ್

ಆನ್‌ಲೈನ್ ತರಗತಿಗಳಿಗಾಗಿ ಒಂದು ಕ್ರೋಮ್‌ಬುಕ್   ಕೋವಿಡ್-19 ರಿಂದಾಗಿ ಹಲವು ಕ್ಷೇತ್ರಗಳಲ್ಲಿ ಗಣನೀಯವಾಗಿ ಬದಲಾವಣೆಯಾಗಿದೆ. ಅವುಗಳಲ್ಲಿ ಒಂದು ಪ್ರಮುಖವಾದ ಬದಲಾವಣೆ ಎಂದರೆ ಬಹುತೇಕ ಸಭೆ, ಗೋಷ್ಠಿ, ತರಗತಿಗಳು ಎಲ್ಲ ಆನ್‌ಲೈನ್ ಆಗಿರುವುದು. ಶಿಕ್ಷಣ ಕ್ಷೇತ್ರದಲ್ಲಂತೂ ಇದು ತುಂಬ ದೊಡ್ಡ ಬದಲಾವಣೆಯನ್ನೇ ತಂದಿದೆ. ಆನ್‌ಲೈನ್ ತರಗತಿಗಳಿಂದಾಗಿ ಕಡಿಮೆ ಬೆಲೆಗೆ ದೊರಕಬಹುದಾದ ಲ್ಯಾಪ್‌ಟಾಪ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಲ್ಯಾಪ್‌ಟಾಪ್‌ಗಳಿಗೆ ಹೆಚ್ಚಿನ ಶಕ್ತಿಯ ಅಗತ್ಯವಿಲ್ಲ. ಯಾಕೆಂದರೆ ಇದರ ಕೆಲಸವೆಲ್ಲ ಅಂತರಜಾಲದ ಮೂಲಕವೇ ಆಗುತ್ತದೆ, ಒಂದು ಬ್ರೌಸರ್ ಇದ್ದರೆ ಸಾಕು. ಈ ನಮೂನೆಯ […]

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 22 5G

5ಜಿ ಬೇಕೆನ್ನುವವರಿಗಾಗಿ   ಗ್ಯಾಜೆಟ್‌ಲೋಕದಲ್ಲಿ ಸ್ಯಾಮ್‌ಸಂಗ್‌ನವರ ಹಲವಾರು ಫೋನ್‌ಗಳ ವಿಮರ್ಶೆಯನ್ನು ಮಾಡಿದ್ದೇವೆ. ಇತ್ತೀಚೆಗೆ ಅವರು ಸ್ವಲ್ಪ ಕಡಿಮೆ ಬೆಲೆಯ ಶ್ರೇಣಿಯಲ್ಲಿ 5ಜಿ ಸಂಪರ್ಕ ಇರುವ ಫೋನನ್ನು ಬಿಡುಗಡೆ ಮಾಡಿದ್ದಾರೆ. ಅದುವೆ ನಾವು ಈ ಸಲ ವಿಮರ್ಶೆ ಮಾಡುತ್ತಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ22 5ಜಿ (Samsung Galaxy A22 5G) ಫೋನ್.   ಗುಣವೈಶಿಷ್ಟ್ಯಗಳು   ಪ್ರೋಸೆಸರ್ 8 x 2.2 ಗಿಗಾಹರ್ಟ್ಸ್ ಪ್ರೋಸೆಸರ್ (Dimensity 700 5G) ಗ್ರಾಫಿಕ್ಸ್ ಪ್ರೋಸೆಸರ್ Mali-G57 ಮೆಮೊರಿ 6 + 128 […]

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 32

ಕಡಿಮೆ ಬೆಲೆಯ ಇನ್ನೊಂದು ಫೋನ್   ಸ್ಯಾಮ್‌ಸಂಗ್‌ ಮೊಬೈಲ್ ಫೋನ್‌ಗಳನ್ನು ಹಲವು ಶ್ರೇಣಿಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ. ಎಲ್ಲಕ್ಕಿಂತ ಮೇಲ್ದರ್ಜೆಯ ಎಸ್ ಶ್ರೇಣಿ, ಸುಂದರ ವಿನ್ಯಾಸಕ್ಕೆ ಹೆಸರಾದ ಎ ಶ್ರೇಣಿ, ಅಂತರಜಾಲ ಮಳಿಗೆಗಳ ಮೂಲಕ ಮಾತ್ರವೇ ದೊರೆಯುವ ಎಂ ಶ್ರೇಣಿ, ಹೀಗೆ ಇವೆ. ಭಾರತದಲ್ಲಿ ಸ್ಯಾಮ್‌ಸಂಗ್‌ಗೆ ಅದರದೇ ಆದ ಗಿರಾಕಿಗಳಿದ್ದಾರೆ. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಮಧ್ಯಮ ದರ್ಜೆಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ32 (Samsung Galaxy M32) ಫೋನ್.   ಗುಣವೈಶಿಷ್ಟ್ಯಗಳು   ಪ್ರೋಸೆಸರ್ 8 […]

ಆಮ್ಲಜನಕ ಸಾಂದ್ರಕಗಳು

ಉಸಿರಾಡಲು ಕಷ್ಟವಾದವರಿಗೆ ಆಪದ್ಬಾಂಧವ         ಕರೊನಾವೈರಸ್‌ನಿಂದ ಆಗುವ ಕೋವಿಡ್-19 ಕಾಯಿಲೆ ಸಂದರ್ಭದಲ್ಲಿ ಕೇಳಿಬರುತ್ತಿರುವ ಒಂದು ವಿಷಯವೆಂದರೆ ಆಮ್ಲಜನಕದ ಪೂರೈಕೆಯ ಕೊರತೆ. ಕೋವಿಡ್ ರೋಗಿಗಳಿಗೆ ಮಾತ್ರವಲ್ಲ, ಇನ್ನೂ ಹಲವಾರು ಕಾಯಿಲೆಯವರಿಗೆ ಉಸಿರಾಟದ ತೊಂದರೆಯಿದ್ದರೆ ಆಮ್ಲಜನಕವನ್ನು ನೀಡಬೇಕಾಗುತ್ತದೆ. ವಾತಾವರಣದಲ್ಲಿ 78% ಸಾರಜನಕ ಮತ್ತು 21% ಆಮ್ಲಜನಕ ಇರುತ್ತವೆ. ಸಾಮಾನ್ಯವಾದ ಉಸಿರಾಟದಲ್ಲಿ ನಾವು ಉಸಿರಾಡುವಾಗ ಶ್ವಾಸಕೋಶದ ಒಳಹೋಗುವ ಗಾಳಿಯಲ್ಲಿರುವ 21% ಆಮ್ಲಜನಕ ಮನುಷ್ಯರಿಗೆ ಸಾಕಾಗುತ್ತದೆ. ಕೋವಿಡ್ ಮತ್ತು ಇತರೆ ಕೆಲವು ಕಾಯಿಲೆಗಳಲ್ಲಿ ಉಸಿರಾಟದ ತೊಂದರೆಯಿಂದಾಗಿ ಬೇಕಾದಷ್ಟು ಗಾಳಿ ಒಳಹೋಗುವುದಿಲ್ಲ. ಆಗ […]

Gadget Loka © 2018