Gadget Loka

All about gadgtes in Kannada

Tag: app

ಕ್ಲಬ್‌ಹೌಸ್

ವಾಚಾಳಿಗಳಿಗೊಂದು ವೇದಿಕೆ ಮಾನವ ಸಾಮಾಜಿಕ ಪ್ರಾಣಿ, ಸಂಘಜೀವಿ. ಆತನಿಗೆ ಸದಾ ಇನ್ನೊಬ್ಬರೊಡನೆ ಮಾತನಾಡುತ್ತಿರಬೇಕು. ಸದಾ ಸಂಪರ್ಕದಲ್ಲಿರಬೇಕು. ನಮ್ಮ ಸಾಹಿತಿ ಕಲಾವಿದರಿಗೆ ಇದು ಇನ್ನೂ ಸ್ವಲ್ಪ ಜಾಸ್ತಿ. ಅವರಿಗೆ ಯಾವತ್ತೂ ತಮ್ಮ ಮಾತುಗಳನ್ನು ಕೇಳಲು ಜನ ಬೇಕು. ಅದಕ್ಕೇ ಅವರು ಸದಾ ಒಂದಿಲ್ಲೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿರುತ್ತಾರೆ. ಈ ಕೋವಿಡ್-19 ಎಂಬ ಪಿಡುಗು ಇಂತಹವರಿಗೆ ಒಂದು ದೊಡ್ಡ ತೊಂದರೆಯನ್ನು ತಂದಿತ್ತಿದೆ. ಎಲ್ಲರೂ ಮನೆಯ ಒಳಗೇ ಬಂಧಿಯಾಗಿದ್ದಾರೆ. ಸುಮಾರು ಒಂದೂವರೆ ವರ್ಷಗಳಿಂದ ಯಾವ ಕಾರ್ಯಕ್ರಮವೂ ಇಲ್ಲದೆ ತೊಂದರೆಯಾಗಿದೆ. ಇಂತಹವರಿಗೆ ಒಂದು […]

ಸಾಲ ನೀಡುವ ಆಪ್‌ಗಳ ಜಾಲಕ್ಕೆ ಬೀಳದಿರಿ

ಯಾವುದೇ ಕಿರುತಂತ್ರಾಂಶ (ಆಪ್) ತೆರೆದರೂ ಇದ್ದಕ್ಕಿದ್ದಂತೆ ಯಾವುದೋ ಸಾಲ ನೀಡುವ ಕಿರುತಂತ್ರಾಂಶದ ಜಾಹೀರಾತು ಕಂಡುಬರುವುದನ್ನು ನೀವು ಗಮನಿಸಿದ್ದೀರಾ? ಬಹಳ ಆಕರ್ಷಕ ಭಾಷೆಯಲ್ಲಿ ಅವು ಸೆಳೆಯುತ್ತವೆ. ಒಂದು ಜಾಹೀರಾತು ನಾನು ಗಮನಿಸಿದ್ದು ಹೀಗಿತ್ತು – ಈ ಜಾಹೀರಾತನ್ನು ಸ್ಕಿಪ್ ಮಾಡಲು ಪ್ರಯತ್ನಿಸುತ್ತಿದ್ದೀರಾ? ಅದು ಸಾಧ್ಯವಿಲ್ಲ. ಆದರೆ ಸಾಲಕ್ಕಾಗಿ ಓಡಾಡುವುದನ್ನು ಸ್ಕಿಪ್ ಮಾಡಬಹುದು. ಅದಕ್ಕಾಗಿ ಈ ಆಪ್ ಅನ್ನು ಇನ್‌ಸ್ಟಾಲ್ ಮಾಡಿ – ಎಂದು ಅದು ಹೇಳುತ್ತಿತ್ತು. ನಿಮ್ಮ ಆಸ್ತಿ, ಸಂಪಾದನೆ ಬಗ್ಗೆ ಹೆಚ್ಚಿಗೆ ದಾಖಲೆಗಳನ್ನು ಕೇಳದೆ ಸಾಲ ನೀಡುವ […]

ಕೃತಕ ಬುದ್ಧಿಮತ್ತೆಯ ಕಾಲ

2022ರಲ್ಲಿ ಹಾಗೂ 2023ರಲ್ಲಿ ಅತ್ಯಂತ ಸುದ್ಧಿಯಲ್ಲಿರುವ ತಂತ್ರಜ್ಞಾನ ಕೃತಕ ಬುದ್ಧಿಮತ್ತೆ. ಕೃತಕ ಬುದ್ಧಿಮತ್ತೆ (artificial intelligence) ಎನ್ನುವುದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇತ್ತೀಚೆಗೆ ತುಂಬ ಸುದ್ದಿ ಮಾಡುತ್ತಿರುವ ವಿಷಯ. ಇದರಲ್ಲಿ ಯಂತ್ರಗಳು ಅಥವಾ ತಂತ್ರಾಂಶಗಳು ತಾವೇ ವಿಷಯಗಳನ್ನು ಅರ್ಥಮಾಡಿಕೊಂಡು, ಅವುಗಳಿಗೆ ಸ್ಪಂದಿಸಿ, ತಾವೇ ತೀರ್ಮಾನ ತೆಗೆದುಕೊಂಡು ಕೆಲಸ ಮಾಡುತ್ತವೆ. ಕೆಲವು ಪ್ರಮುಖ ಉದಾಹರಣೆಗೆಳು – ಯಂತ್ರಾನುವಾದ, ಪಠ್ಯದಿಂದ ಧ್ವನಿಗೆ ಹಾಗೂ ಧ್ವನಿಯಿಂದ ಪಠ್ಯಕ್ಕೆ ಪರಿವರ್ತನೆ, ಚಿತ್ರದಿಂದ ಪಠ್ಯಕ್ಕೆ, ಪಠ್ಯದ ಪ್ರಕಾರ ಕೃತಕವಾಗಿ ಚಿತ್ರಗಳ ರಚನೆ, ಚಿತ್ರಗಳನ್ನು ಅರ್ಥಮಾಡಿಕೊಳ್ಳುವುದು, […]

Gadget Loka © 2018