ಬ್ಲೂಟೂತ್ (Bluetooth) – ನಿಸ್ತಂತು (ವಯರ್ಲೆಸ್) ತಂತ್ರಜ್ಞಾನ ಮೂಲಕ ತಂತಿ ಇಲ್ಲದೆ ಸಂಪರ್ಕ ಸಾಧಿಸುವ ಒಂದು ವಿಧಾನ. ಇದನ್ನು ಸಾಮಾನ್ಯವಾಗಿ ಹೆಡ್‌ಫೋನ್‌ಗಳನ್ನು ಮೊಬೈಲ್ ಫೋನಿಗೆ ಜೋಡಿಸಲು ಬಳಸುತ್ತಾರೆ. ಗಣಕದಿಂದ ಸಂಪರ್ಕ ಸಾಧಿಸಲೂ ಬಳಸಬಹುದು. ಇದರ ವ್ಯಾಪ್ತಿ ಮತ್ತು ಮಾಹಿತಿಯ ಸಾರಿಗೆಯ ಶಕ್ತಿ ತುಂಬ ಕಡಿಮೆ. ಒಂದು ಮೊಬೈಲ್ ಫೋನಿನಿಂದ ಇನ್ನೊಂದು ಮೊಬೈಲ್ ಫೋನಿಗೆ ಬ್ಲೂಟೂತ್ ಮೂಲಕ ಒಂದು ಛಾಯಾಚಿತ್ರ ಕಳುಹಿಸಲು ಸುಮಾರು ಎರಡರಿಂದ ಐದಾರು ನಿಮಿಷ ಹಿಡಿಯುವ ಸಾಧ್ಯತೆಗಳಿವೆ. ಕಾರಿನಲ್ಲಿ ಜೋಡಿಸುವ ಸಂಗೀತ ಉಪಕರಣಗಳಲ್ಲೂ ಈ ಸೌಲಭ್ಯ ದೊರಕುತ್ತಿದೆ. ಹತ್ತನೆಯ ಶತಮಾನದಲ್ಲಿ ಡೆನ್‌ಮಾರ್ಕ್ ದೇಶದಲ್ಲಿದ್ದ ಒಬ್ಬ ರಾಜನ ಹೆಸರನ್ನು ಈ ತಂತ್ರಜ್ಞಾನಕ್ಕೆ ಇಡಲಾಗಿದೆ. ಇದರಲ್ಲಿ ಹಲವು ಆವೃತ್ತಿಗಳಿವೆ. ಬ್ಲೂಟೂತ್ ಹೆಡ್‌ಸೆಟ್‌ಗಳಲ್ಲದೆ ಸ್ಪೀಕರ್‌ಗಳೂ ಮಾರುಕಟ್ಟೆಯಲ್ಲಿ ದೊರೆಯುತ್ತಿವೆ.