Gadget Loka

All about gadgtes in Kannada

ಬಿ.ಪಿ. ಮೋನಿಟರ್‌ಗಳು

ರಕ್ತದೊತ್ತಡ ಅಳೆಯಿರಿ   ತುಷಾರ ಮಾಸಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ಟೆಕ್ಕಿರಣ ಅಂಕಣದ ಆರನೆಯ ಕಂತು   ರಕ್ತದೊತ್ತಡ ಅಥವಾ ರಕ್ತದ ಏರೊತ್ತಡ ಒಂದು ಸಾಮಾನ್ಯ ಕಾಯಿಲೆಯಾಗುತ್ತಿದೆ. ಹೈ ಬ್ಲಡ್‌ಪ್ರಷರ್ (ಹೈ ಬಿ.ಪಿ.), ಹೈಪರ್‌ಟೆನ್ಶನ್ ಅಥವಾ ಸರಳವಾಗಿ ಬಿ.ಪಿ. ಎಂದೂ ಇದನ್ನು ಕರೆಯುತ್ತಾರೆ. ಭಾರತದಲ್ಲೂ ಇದು ಜನಸಂಖ್ಯೆಯ ಗಣನೀಯ ಭಾಗವನ್ನು ಬಾಧಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ರಕ್ತದ ಏರೊತ್ತಡವನ್ನು “ಶಾಂತಿಯುತ ಕೊಲೆಗಾರ” ಎಂದು ವರ್ಣಿಸಿದೆ. ರಕ್ತದ ಏರೊತ್ತಡಕ್ಕೆ ಅನುವಂಶಿಕ ಮತ್ತು ಜೀವನಶೈಲಿಗಳು ಕಾರಣವೆಂದು ಹೇಳಲಾಗುತ್ತಿದೆ. ರಕ್ತದ ಏರೊತ್ತಡ ಪ್ರಾರಂಭದಲ್ಲಿ ಯಾವ […]

ಆಕ್ಸಿಮೀಟರ್

ರಕ್ತದಲ್ಲಿರುವ ಆಮ್ಲಜನಕವನ್ನು ಅಳೆಯಿರಿ   ಎಪ್ರಿಲ್ ೨೦೨೦ ರಿಂದ ತುಷಾರ ಮಾಸಪತ್ರಿಕೆಯಲ್ಲಿ ಟೆಕ್ಕಿರಣ ಎಂಬ ಹೆಸರಿನ ಅಂಕಣ ಪ್ರಾರಂಭವಾಗಿದೆ. ಇದು ಅದರ ಐದನೆಯ ಕಂತು ಕೊರೋನಾ ಬಂದಿರಬಹುದೇ ಎಂದು ಪರೀಕ್ಷೆ ಮಾಡಿಸಿದಾಗ ಕೊರೋನಾ ವೈರಸ್ ದೇಹದಲ್ಲಿ ಇರುವುದು ಹೌದು ಆದರೆ ಕಾಯಿಲೆ ಲಕ್ಷಣಗಳಿಲ್ಲ ಎಂದಾದರೆ ಅವರಿಗೆ ಮನೆಯಲ್ಲೇ ಇರಲು ಅನುಮತಿ ಸಿಗುತ್ತದೆ. ಆದರೆ ಅವರು ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅದರಲ್ಲಿ ಒಂದು ಅಂಶವೆಂದರೆ ಅವರಲ್ಲಿ ಆಕ್ಸಿಮೀಟರ್ ಇರತಕ್ಕದ್ದು ಮತ್ತು ತಮ್ಮ ದೇಹದಲ್ಲಿರುವ ಆಮ್ಲಜನಕದ (oxygen) ಪ್ರಮಾಣವನ್ನು ಆಗಾಗ […]

ವಿವೊ ವಿ 20

ಸ್ವಂತೀ ಪ್ರಿಯರಿಗೆ ಮತ್ತೊಂದು ಫೋನ್   ಚೀನಾ ದೇಶದ ವಿವೊ ಕಂಪೆನಿಯ ಫೋನ್‌ಗಳು ಉತ್ತಮ ರಚನೆ, ವಿನ್ಯಾಸ ಮತ್ತು ಉತ್ತಮ ಕ್ಯಾಮೆರಗಳಿಗೆ ಹೆಸರುವಾಸಿಯಾಗಿವೆ. ಇವರು ಮಧ್ಯಮ ಬೆಲೆಯ ಕ್ಷೇತ್ರವನ್ನು ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ವಿವೋದವರ ಫೋನ್ ಕ್ಯಾಮೆರಗಳು ಚೆನ್ನಾಗಿವೆ. ನಿಮಗೆ ಉತ್ತಮ ಕ್ಯಾಮೆರ ಮಾತ್ರವೇ ಮುಖ್ಯವಾಗಿದ್ದಲ್ಲಿ ನೀವು ವಿವೊ ಫೋನ್ ಕೊಳ್ಳಬಹುದು. ಅದರಲ್ಲೂ ನೀವು ಸ್ವಂತೀ ಪ್ರಿಯರಾದರೆ ವಿವೋ ಫೋನ್ ನಿಮ್ಮದಾಗಿಸಿಕೊಳ್ಳಬಹುದು. ಈ ಸ್ವಂತೀ ಕೇಂದ್ರಿತ ವಿವೋ ಫೋನ್‌ಗಳ ಪಟ್ಟಿಗೆ ಇನ್ನೊಂದು ಸೇರ್ಪಡೆ ವಿವೊ ವಿ 20. ಈ […]

ನ್ಯಾನೋರೋಬೋಟ್‌ಗಳು

ವೈದ್ಯರನ್ನೇ ನುಂಗಬಹುದು! ಎಪ್ರಿಲ್ ೨೦೨೦ ರಿಂದ ತುಷಾರ ಮಾಸಪತ್ರಿಕೆಯಲ್ಲಿ ಟೆಕ್ಕಿರಣ ಎಂಬ ಹೆಸರಿನ ಅಂಕಣ ಪ್ರಾರಂಭವಾಗಿದೆ. ಇದು ಅದರ ನಾಲ್ಕನೆಯ ಕಂತು ದೇವಿಮಹಾತ್ಮೆ ಯಕ್ಷಗಾನದ ಪ್ರಾರಂಭದಲ್ಲಿ ಒಂದು ಪ್ರಸಂಗ ಇದೆ. ಅದರ ಪ್ರಕಾರ ವಿಷ್ಣು ಮತ್ತು ಬ್ರಹ್ಮರಿಗೆ ತಮ್ಮಿಬ್ಬರಲ್ಲಿ ಯಾರು ಶ್ರೇಷ್ಠ ಎಂಬ ಚರ್ಚೆ ಆಗುತ್ತದೆ. ಕೊನೆಗೆ ಒಬ್ಬರ ದೇಹದೊಳಗ್ಗೆ ಇನ್ನೊಬ್ಬರು ಹೋಗಿ ಹೊರ ಬರುವ ಪಂಥ ಏರ್ಪಡಿಸಿಕೊಳ್ಳುತ್ತಾರೆ. ಮೊದಲು ವಿಷ್ಣು ಬ್ರಹ್ಮನ ಹೊಟ್ಟೆಯೊಳಗೆ ಹೋಗುತ್ತಾನೆ. ಅಲ್ಲಿಂದಲೇ ತನಗೆ ಕಂಡದ್ದನ್ನು ವರ್ಣಿಸುತ್ತಾನೆ. ಅಲ್ಲಿ ಚಿನ್ನ ಕಂಡು ಬ್ರಹ್ಮನಿಗೆ […]

ಲೆನ್ಸ್ ಬದಲಿಸಬಹುದಾದ ಕನ್ನಡಿರಹಿತ ಕ್ಯಾಮೆರ

ಎಪ್ರಿಲ್ ೨೦೨೦ ರಿಂದ ತುಷಾರ ಮಾಸಪತ್ರಿಕೆಯಲ್ಲಿ ಟೆಕ್ಕಿರಣ ಎಂಬ ಹೆಸರಿನ ಅಂಕಣ ಪ್ರಾರಂಭವಾಗಿದೆ. ಇದು ಅದರ ಮೂರನೆಯ ಕಂತು ಕ್ಯಾಮೆರ ಯಾರಿಗೆ ಗೊತ್ತಿಲ್ಲ? ಈಗ ಹಳೆಯ ಫಿಲ್ಮ್ ಕ್ಯಾಮೆರಗಳು ಕಾಣಿಸುತ್ತಿಲ್ಲ. ಎಲ್ಲವೂ ಡಿಜಿಟಲ್‌ಮಯ. ಕ್ಯಾಮೆರಗಳಲ್ಲಿ ಹಲವು ನಮೂನೆಗಳು. ಮುಖ್ಯವಾಗಿ ಎರಡು ನಮೂನೆ -ಸುಮ್ಮನೆ ನೋಡಿ ಕ್ಲಿಕ್ ಮಾಡುವಂತಹದ್ದು (aim and shoot) ಮತ್ತು ಏಕಮಸೂರ ಪ್ರತಿಫಲನ (single lens reflex –SLR). ಏಮ್ ಅಂಡ್ ಶೂಟ್ ಕ್ಯಾಮೆರಗಳು ಈಗ ಮಾರುಕಟ್ಟೆಯಿಂದ ಬಹುತೇಕ ಮಾಯವಾಗಿವೆ. ಇದಕ್ಕೆ ಕಾರಣ ಶಕ್ತಿಶಾಲಿಯಾದ […]

ವಿವೊ ಎಕ್ಸ್ 50

ಉತ್ತಮ ಕ್ಯಾಮೆರ ಫೋನ್   ಚೀನಾ ದೇಶದ ವಿವೊ ಕಂಪೆನಿ ಭಾರತದಲ್ಲಿ ಹಲವು ಉತ್ತಮ ಕ್ಯಾಮೆರ ಫೋನ್‌ಗಳನ್ನು ಒಂದಾದ ಮೇಲೆ ಒಂದರಂತೆ ಸತತವಾಗಿ ಬಿಡುಗಡೆ ಮಾಡುತ್ತಾ ಬಂದಿದೆ. ವಿವೊ ಕಂಪೆನಿಯ ಫೋನ್‌ಗಳು ಉತ್ತಮ ರಚನೆ, ವಿನ್ಯಾಸ ಮತ್ತು ಉತ್ತಮ ಕ್ಯಾಮೆರಗಳಿಗೆ ಹೆಸರುವಾಸಿಯಾಗಿವೆ. ಆದರೆ ಬಹುತೇಕ ಫೋನ್‌ಗಳು ಸ್ವಲ್ಪ ಮಟ್ಟಿಗೆ ಜಾಸ್ತಿ ಬೆಲೆಯವು ಎನ್ನಬಹುದು. ಅಂದರೆ ಅವರು ಉತ್ತಮ ಕ್ಯಾಮೆರವನ್ನು ನೀಡಲು ತುಂಬ ಪ್ರಯತ್ನ ಮಾಡುತ್ತಿದ್ದಾರೆ. ಆ ಸಮಯದಲ್ಲಿ ಇತರೆ ಕೇತ್ರಗಳ ಕಡೆ, ಮುಖ್ಯವಾಗಿ ಕೆಲಸದ ವೇಗದ ಕಡೆ […]

ಗ್ಲೂಕೋಮೀಟರ್

ಮನೆಯಲ್ಲೇ ರಕ್ತ ಪರೀಕ್ಷೆ ಮಾಡಿರಿ ಎಪ್ರಿಲ್ ೨೦೨೦ ರಿಂದ ತುಷಾರ ಮಾಸಪತ್ರಿಕೆಯಲ್ಲಿ ಟೆಕ್ಕಿರಣ ಎಂಬ ಹೆಸರಿನ ಅಂಕಣ ಪ್ರಾರಂಭವಾಗಿದೆ. ಇದು ಅದರ ಎರಡನೆಯ ಕಂತು ಭಾರತದಲ್ಲಿ ಡಯಾಬಿಟೀಸ್ ಅರ್ಥಾತ್ ಮಧುಮೇಹ ಅಥವಾ ಸಕ್ಕರೆ ಕಾಯಿಲೆಯ ಪ್ರಮಾಣ ಹೆಚ್ಚುತ್ತಲೇ ಇದೆ. ನಗರ ಪ್ರದೇಶದಲ್ಲಿ ಸುಮಾರು 10 ರಿಂದ 14 ಶೇಕಡ ಜನರಿಗೆ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಸುಮಾರು 3 ರಿಂದ 8 ಶೇಕಡ ಜನರಿಗೆ ಸಕ್ಕರೆ ಕಾಯಿಲೆ ಇದೆ ಎಂದು ಒಂದು ಸಮೀಕ್ಷೆ ತಿಳಿಸುತ್ತದೆ. ಸಕ್ಕರೆ ಕಾಯಿಲೆ ಇರುವವರ […]

ಥೋಮ್ಸನ್ ಸ್ಮಾರ್ಟ್‌ ಟಿವಿ 55 ಓಎಟಿಎಚ್‌ಪಿಆರ್00101

ಉತ್ತಮ ಆಂಡ್ರೋಯಿಡ್ ಟಿವಿ ಮೂಲತಃ ಫ್ರಾನ್ಸ್ ದೇಶದ ಥೋಮ್ಸನ್ ಟಿವಿ ಇತ್ತೀಚೆಗೆ ಭಾರತದಲ್ಲಿ ತಳವೂರುತ್ತಿದೆ. ಅದು ಜನವರಿ 2018ರಲ್ಲಿ ಭಾರತದಲ್ಲಿ ಟಿ.ವಿ. ಮಾರಾಟ ಪ್ರಾರಂಭಿಸಿತ್ತು. ವಿದೇಶೀ ಕಂಪೆನಿಯಾದರೂ ಭಾರತದಲ್ಲೇ ತನ್ನ ಟಿ.ವಿ.ಗಳನ್ನು ತಯಾರಿಸುತ್ತಿದೆ. ಹಲವು ಸ್ಮಾರ್ಟ್ ಟಿ.ವಿ. ಮತ್ತು ಮಾಮೂಲಿ ಫ್ಲಾಟ್ ಟಿ.ವಿ.ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ಥೋಮ್ಸನ್ ಕಂಪೆನಿ ಅಂತರಜಾಲದ ಮೂಲಕ ಮಾರಾಟವಾಗುತ್ತಿರುವ ಬ್ರ್ಯಾಂಡ್‌ಗಳಲ್ಲಿ ಗಣನೀಯವಾದ ಸ್ಥಾನವನ್ನು ಪಡೆದಿದೆ. ಥೋಮ್ಸನ್ ಸ್ಮಾರ್ಟ್‌ಟಿವಿ 55 ಓಎಟಿಎಚ್‌ಪಿಆರ್00101 (Thomson 55 OATHPR 00101) ನಮ್ಮ ಈ ವಾರದ ಗ್ಯಾಜೆಟ್. […]

ವಿಡಿಯೋಮೀಟ್

ಜಾಲಗೋಷ್ಠಿ ನಡೆಸಲು ಅಪ್ಪಟ ಭಾರತೀಯ ಉತ್ಪನ್ನ   ಕೊರೋನಾ ಪಿಡುಗಿನಿಂದಾಗಿ ಹಲವು ಸಭೆಗಳು, ಪಾಠಗಳು, ವಿಚಾರಗೋಷ್ಠಿಗಳನ್ನು ಅಂತರಜಾಲದ ಮೂಲಕ ಜರುಗಿಸಲಾಗುತ್ತಿದೆ. ಸಹಜವಾಗಿಯೇ ಇಂತಹವುಗಳನ್ನು ನಡೆಸಲು ಅನುಕೂಲ ಮಾಡಿಕೊಡುವ ತಂತ್ರಾಂಶಗಳು, ಕಿರುತಂತ್ರಾಂಶಗಳು (ಆಪ್), ಜಾಲತಾಣಗಳಿಗೆ ಬೇಡಿಕೆ ಜಾಸ್ತಿಯಾಗಿದೆ. ಈ ಕ್ಷೇತ್ರದಲ್ಲಿ ಈಗಾಗಲೇ ಹಲವು ಉತ್ಪನ್ನಗಳಿವೆ. ಅವುಗಳಲ್ಲಿ ಕೆಲವು – ವೆಬ್‌ಎಕ್ಸ್, ಝೂಮ್, ಮೈಕ್ರೋಸಾಫ್ಟ್ ಟೀಮ್ಸ್, ಗೂಗ್ಲ್ ಮೀಟ್. ಇವುಗಳಲ್ಲಿ ಉಚಿತ ಮತ್ತು ಚಂದಾ ನೀಡಬೇಕಾದವು ಎಂಬ ಆವೃತ್ತಿಗಳಿವೆ. ಹಣ ನೀಡಬೇಕಾದ ಆವೃತ್ತಿಗಳಲ್ಲಿ ಹಲವು ಉತ್ತಮ ಸವಲತ್ತುಗಳಿರುತ್ತವೆ. ಉಚಿತ ಆವೃತ್ತಿಗಳಿಗೆ […]

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 21

ನೀಡುವ ಬೆಲೆಗೆ ಉತ್ತಮ ಫೋನ್   ದಕ್ಷಿಣ ಕೊರಿಯ ಮೂಲದ  ಸ್ಯಾಮ್‌ಸಂಗ್ ಕಂಪೆನಿ ಇಲೆಕ್ಟ್ರಾನಿಕ್ಸ್ ಕೇತ್ರದಲ್ಲಿ  ತುಂಬ ಜನಪ್ರಿಯ ಖ್ಯಾತ ಹೆಸರು. ಸ್ಯಾಮ್‌ಸಂಗ್‌ಗೆ ಅದರದೇ ಆದ ಗಿರಾಕಿಗಳಿದ್ದಾರೆ. ಕೆಲವು ವರ್ಷಗಳ ಹಿಂದೆ ಇತರೆ ಫೋನ್‌ಗಳಿಗೆ ಹೋಲಿಕೆಯಲ್ಲಿ ಇವುಗಳ ಬೆಲೆ ಜಾಸ್ತಿಯಾಗಿತ್ತು. ಆದರೆ ಇತ್ತೀಚೆಗೆ ಅವರು ಎಲ್ಲ ಬೆಲೆಯ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಮಧ್ಯಮ ದರ್ಜೆಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ21 (Samsung Galaxy M21) ಫೋನ್.   ಗುಣವೈಶಿಷ್ಟ್ಯಗಳು ಪ್ರೋಸೆಸರ್ 4 […]

Gadget Loka © 2018