Gadget Loka

All about gadgtes in Kannada

ಕವಾಟವೇಗ (ಶಟ್ಟರ್ ಸ್ಪೀಡ್ – shutter speed)

ಕವಾಟವೇಗ (ಶಟ್ಟರ್ ಸ್ಪೀಡ್ – shutter speed) – ಫೋಟೋ ತೆಗೆಯಬೇಕಾದರೆ ಮಸೂರ ಮತ್ತು ಚಿತ್ರೀಕರಣದ ಪರದೆ ನಡುವೆ ಇರುವ ಕವಾಟವನ್ನು (ಶಟ್ಟರ್) ಸ್ವಲ್ಪ ಸಮಯದ ಕಾಲ ತೆರೆದು ಮತ್ತೆ ಮುಚ್ಚಬೇಕಾಗುತ್ತದೆ. ಈ ಕವಾಟ ತೆರೆದು ಮುಚ್ಚುವ ಸಮಯವನ್ನು ಶಟ್ಟರ್ ಸ್ಪೀಡ್ ಎನ್ನುತ್ತಾರೆ. ಸಾಮಾನ್ಯವಾಗಿ ಇವನ್ನು ಸೆಕೆಂಡಿನ ಎಷ್ಟನೇ ಪಾಲು ಎಂದು ನಮೂದಿಸುತ್ತಾರೆ. ಉದಾಹರಣೆಗೆ 1/125 ಎಂದರೆ ಒಂದು ಸೆಕೆಂಡಿನ 125ನೆ ಒಂದರಷ್ಟು ಕಾಲದಲ್ಲಿ ಶಟ್ಟರ್ ತೆರೆದು ಮುಚ್ಚಲಾಗುತ್ತದೆ ಎಂದು ಅರ್ಥ. ಹಾರುವ ಹಕ್ಕಿ ಅಥವಾ ಆಟದಂತಹ ವೇಗವಾಗಿ ನಡೆಯುತ್ತಿರುವ ಕ್ರಿಯೆಯನ್ನು ಚಿತ್ರೀಕರಿಸುವಾಗ 1/250, 1/400, 1/1000 ಇತ್ಯಾದಿ ವೇಗದ ಶಟ್ಟರ್ ಸ್ಪೀಡ್ ಬಳಸಬೇಕಾಗುತ್ತದೆ.

Leave a Reply

Your email address will not be published. Required fields are marked *

Gadget Loka © 2018