Gadget Loka

All about gadgtes in Kannada

ಮೌಸ್ (mouse)

ಮೌಸ್ (mouse) -ಗಣಕಕ್ಕೆ ಮಾಹಿತಿಯನ್ನು ಊಡಿಸುವ ಸಾಧನ. ಇಲ್ಲಿ ಊಡಿಸುವ ಮಾಹಿತಿ ಅಕ್ಷರ ರೂಪದಲ್ಲಿಲ್ಲ. ಬದಲಿಗೆ ಮೌಸ್ ತಾನು ಇರುವ ಸ್ಥಳದ ನಿರ್ದೇಶನಾಂಕ (coordinates) ವನ್ನು ಗಣಕ್ಕೆ ರವಾನಿಸುತ್ತದೆ. ಈ ಮಾಹಿತಿಯ ಮೂಲಕ ಗಣಕವು ಪರದೆಯ ಮೇಲಿರುವ ಸೂಚಕವನ್ನು (cursor) ಅತ್ತಿತ್ತ ಚಲಿಸುತ್ತದೆ. ಈ ಸೂಚಕವು ಯಾವುದಾದರೊಂದು ತಂತ್ರಾಂಶದ ಲಾಂಛನ ಯಾ ಚಿಹ್ನೆ (icon) ಯ ಮೇಲಿದ್ದಾಗ ಮೌಸ್‌ನ್ನು ಕ್ಲಿಕ್ ಮಾಡಿದರೆ ಆ ತಂತ್ರಾಂಶವು ಚಾಲನೆಗೊಳ್ಳುತ್ತದೆ. ಮೌಸ್‌ನ್ನು ಇನ್ನೂ ಹಲವು ಕಾರ್ಯಗಳಿಗೆ ಬಳಸಲಾಗುತ್ತದೆ. ತಿರುಗುವ ಚಕ್ರವಿರುವ ಮೌಸ್ ಹಲವು ವರ್ಷಗಳ ಹಿಂದೆ ಬಳಕೆಯಲ್ಲಿತ್ತು. ಇದರ ತೊಂದರೆಯೆಂದರೆ ಚಕ್ರಗಳಲ್ಲಿ ಕಸ ಧೂಳು ಸಿಕ್ಕಿಕೊಂಡು ಕೆಲಸಕ್ಕೆ ಅಡಚಣೆಯಾಗುವುದು. ಒಪ್ಟಿಕಲ್ (ದ್ಯುತಿ) ಮೌಸ್‌ನಲ್ಲಿ ಈ ತೊಂದರೆಯಿಲ್ಲ. ಈಗ ಸಾಮಾನ್ಯವಾಗಿ ಎಲ್ಲರೂ ಒಪ್ಟಿಕಲ್ ಮೌಸ್ ಬಳಸುತ್ತಿದ್ದಾರೆ.

Leave a Reply

Your email address will not be published. Required fields are marked *

Gadget Loka © 2018