Gadget Loka

All about gadgtes in Kannada

ಧ್ಯುತಿರಂಧ್ರ (ಅಪೆರ್ಚರ್ – aperture)

ಧ್ಯುತಿರಂಧ್ರ (ಅಪೆರ್ಚರ್ – aperture) ಕ್ಯಾಮರಾದ ಲೆನ್ಸ್ ಅನ್ನು ಸಾಮಾನ್ಯವಾಗಿ ಸಂಪೂರ್ಣವಾಗಿ ತೆರೆಯಲಾಗುವುದಿಲ್ಲ. ಬೆಳಕಿನ ಪ್ರಖರತೆಯನ್ನು ಅವಲಂಬಿಸಿ ಹೆಚ್ಚು ಯಾ ಕಡಿಮೆ ಮಾಡಲಾಗುತ್ತದೆ. ಇದನ್ನೇ ಅಪೆರ್ಚರ್ ಎನ್ನುತ್ತಾರೆ. ಈ ತೆರೆಯುವಿಕೆ ಅರ್ಥಾತ್ ವ್ಯಾಸವನ್ನು ಮಸೂರದ ನಾಭಿದೂರಕ್ಕೆ (focal length) ಅನುಪಾತ ಮೂಲಕ ಬರೆಯಲಾಗುತ್ತದೆ. ಉದಾ – f/2.8, f/5.6, f/18, ಇತ್ಯಾದಿ. ಮಸೂರದ ನಾಭಿದೂರ 50ಮಿ.ಮೀ. ಇದೆ ಮತ್ತು ಅಪೆರ್ಚರ್ ಸಂಖ್ಯೆ f/5.6 ಎಂದಾದಲ್ಲಿ ಮಸೂರದ ತೆರೆಯುವಿಕೆಯ ವ್ಯಾಸ ಸುಮಾರು 9ಮಿ.ಮೀ. ಎಂದು ಲೆಕ್ಕ ಹಾಕಬಹುದು. ಜಾಸ್ತಿ ಬೆಳಕಿದ್ದಲ್ಲಿ ಕಡಿಮೆ ಅಪೆರ್ಚರ್ ಬಳಸಬೇಕಾಗುತ್ತದೆ. ಕಡಿಮೆ ಬೆಳಕಿದ್ದಲ್ಲಿ ಜಾಸ್ತಿ ಅಪೆರ್ಚರ್ ಬಳಸಬೇಕಾಗುತ್ತದೆ. ಉದಾಹರಣೆಗೆ ಪ್ರಖರ ಬಿಸಿಲಿನಲ್ಲಿ f/18 ಮತ್ತು ಕಡಿಮೆ ಬೆಳಕಿನಲ್ಲಿ (ನೆರಳಿನಲ್ಲಿ ಅಥವಾ ಮನೆಯ ಒಳಗೆ) f/2.8.

Leave a Reply

Your email address will not be published. Required fields are marked *

Gadget Loka © 2018