ಐಎಸ್‌ಒ (ISO) ಫಿಲ್ಮ್ ಸ್ಪೀಡ್ – ಫೋಟೋಗ್ರಫಿಯಲ್ಲಿ ಬಲಸುವ ಫಿಲ್ಮಿನ ವೇಗವನ್ನು ಅಳೆಯುವ ಮಾನಕ. ಈಗ ಡಿಜಿಟಲ್ ಯುಗದಲ್ಲಿ ಫಿಲ್ಮ್ ಇಲ್ಲ. ಆದರೂ ಈ ಮಾನಕ ಉಳಿದುಕೊಂಡಿದೆ. ಐಎಸ್‌ಒ ಜಾಸ್ತಿಯಿದ್ದಷ್ಟು ಅದು ಅತಿ ಕಡಿಮೆ ಬೆಳಕಿನಲ್ಲೂ ಕೆಲಸ ಮಾಡುತ್ತದೆ ಎಂದು ತಿಳಿಯತಕ್ಕದ್ದು. ಸಾಮಾನ್ಯವಾಗಿ ಇದರ ಸಂಖ್ಯೆ 100ರಿಂದ ಪ್ರಾರಂಭವಾಗುತ್ತದೆ. ಕೊನೆಯ ಸಂಖ್ಯೆ ಹೆಚ್ಚಿದ್ದಷ್ಟು ಕ್ಯಾಮರ ಉತ್ತಮವಾದುದು ಎಂದು ತಿಳಿಯಬಹುದು.
Category: ಗ್ಯಾಜೆಟ್ ಪದ
ಬ್ಲೂಟೂತ್ ಸ್ಟೀರಿಯೋ ಮತ್ತು ರಿಮೋಟ್ ಕಂಟ್ರೋಲ್
ಬ್ಲೂಟೂತ್ ಸ್ಟೀರಿಯೋ ಮತ್ತು ರಿಮೋಟ್ ಕಂಟ್ರೋಲ್ – ಬ್ಲೂಟೂತ್ ಹೆಡ್‌ಸೆಟ್‌ಗಳ ಪ್ರೋಟೋಕೋಲ್‌ಗಳಲ್ಲಿ A2DP (Advanced Audio Distribution Profile) ಮತ್ತು AVRCP (Audio/Video Remote Control Profile). ಇವುಗಳು ಕ್ರಮವಾಗಿ ಸ್ಟೀರಿಯೋ ಮತ್ತು ದೂರನಿಯಂತ್ರಣವನ್ನು ಸೂಚಿಸುತ್ತವೆ. A2DP ಇಲ್ಲದಿದ್ದಲ್ಲಿ ಸ್ಟೀರಿಯೋ ಇಲ್ಲ ಎಂದು ತಿಳಿಯತಕ್ಕದ್ದು. ದೂರನಿಯಂತ್ರಣ ಪ್ರೊಟೋಕೋಲ್ ಬಳಸಿ ಸಂಗೀತ ಕೇಳುವಾಗ ಹಿಂದಿನ ಹಾಡು ಅಥವಾ ಮುಂದಿನ ಹಾಡನ್ನು ಆಯ್ಕೆ ಮಾಡಿಕೊಳ್ಳಬಹುದು. ಅಂದರೆ ಗಣಕ ಅಥವಾ ಮೊಬೈಲ್ ಫೋನಿನಲ್ಲಿ ಮುಂದಿನ ಹಾಡನ್ನು ಹುಡುಕಿ ಅದನ್ನು ಆಯ್ಕೆ ಮಾಡಿಕೊಳ್ಳಬೇಕಾಗಿಲ್ಲ. […]
ಬ್ಲೂಟೂತ್ (Bluetooth)
ಬ್ಲೂಟೂತ್ (Bluetooth) – ನಿಸ್ತಂತು (ವಯರ್ಲೆಸ್) ತಂತ್ರಜ್ಞಾನ ಮೂಲಕ ತಂತಿ ಇಲ್ಲದೆ ಸಂಪರ್ಕ ಸಾಧಿಸುವ ಒಂದು ವಿಧಾನ. ಇದನ್ನು ಸಾಮಾನ್ಯವಾಗಿ ಹೆಡ್‌ಫೋನ್‌ಗಳನ್ನು ಮೊಬೈಲ್ ಫೋನಿಗೆ ಜೋಡಿಸಲು ಬಳಸುತ್ತಾರೆ. ಗಣಕದಿಂದ ಸಂಪರ್ಕ ಸಾಧಿಸಲೂ ಬಳಸಬಹುದು. ಇದರ ವ್ಯಾಪ್ತಿ ಮತ್ತು ಮಾಹಿತಿಯ ಸಾರಿಗೆಯ ಶಕ್ತಿ ತುಂಬ ಕಡಿಮೆ. ಒಂದು ಮೊಬೈಲ್ ಫೋನಿನಿಂದ ಇನ್ನೊಂದು ಮೊಬೈಲ್ ಫೋನಿಗೆ ಬ್ಲೂಟೂತ್ ಮೂಲಕ ಒಂದು ಛಾಯಾಚಿತ್ರ ಕಳುಹಿಸಲು ಸುಮಾರು ಎರಡರಿಂದ ಐದಾರು ನಿಮಿಷ ಹಿಡಿಯುವ ಸಾಧ್ಯತೆಗಳಿವೆ. ಕಾರಿನಲ್ಲಿ ಜೋಡಿಸುವ ಸಂಗೀತ ಉಪಕರಣಗಳಲ್ಲೂ ಈ ಸೌಲಭ್ಯ […]
ಅಮೋಲೆಡ್ (AMOLED)
ಅಮೋಲೆಡ್(AMOLED -active-matrix organic light-emitting diode) – ಎಲ್‌ಇಡಿ ಎಂದರೆ ಬೆಳಕು ನೀಡುವ ಡಯೋಡ್‌ಗಳು. ಇವುಗಳನ್ನು ಎಲ್ಲ ಕಡೆ ನೋಡಿಯೇ ಇರುತ್ತೀರಿ. ಅಮೋಲೆಡ್‌ನಲ್ಲಿ ಕ್ರಿಯಾಶೀಲ ಮ್ಯಾಟ್ರಿಕ್ಸ್ ಸಾವಯವ ಎಲ್‌ಇಡಿ ಪರದೆ ಇರುತ್ತದೆ. ಇವು ಲ್ಯಾಪ್‌ಟಾಪ್‌ಗಳಲ್ಲಿ ಬಳಸುವ ಎಲ್‌ಸಿಡಿ ಪರದೆಗಳಿಗಿಂತ ಕಡಿಮೆ ವಿದ್ಯುತ್ ಬಳಸುತ್ತವೆ ಮಾತ್ರವಲ್ಲ ಉತ್ತಮ ಗುಣಮಟ್ಟದ ಚಿತ್ರಗಳನ್ನೂ ನೀಡುತ್ತವೆ.
ಮ್ಯಾಕ್ರೋ ಫೋಟೋಗ್ರಾಫಿ (Macrophotography)
ಮ್ಯಾಕ್ರೋ ಫೋಟೋಗ್ರಾಫಿ (Macrophotography) – ಇದನ್ನು ಕ್ಲೋಸ್‌ಅಪ್ ಫೊಟೋಗ್ರಾಫಿ ಎಂದೂ ಕರೆಯುತ್ತಾರೆ. ಅತಿ ಚಿಕ್ಕ ವಸ್ತುಗಳನ್ನು ಅತಿ ಹತ್ತಿರದಿಂದ ಫೋಟೋ ತೆಗೆಯುವುದು. ಉದಾಹರಣೆಗೆ ನೊಣ. ಚಿಕ್ಕ ವಸ್ತುಗಳನ್ನು ಅವುಗಳ ನಿಜಗಾತ್ರಕ್ಕಿಂತಲೂ ದೊಡ್ಡದಾಗಿ ಫೋಟೋ ತೆಗೆಯುವುದೇ ಮುಖ್ಯವಾಗಿ ಮ್ಯಾಕ್ರೋ ಫೋಟೋಗ್ರಾಫಿಯ ಉದ್ದೇಶ. ಇದರಲ್ಲಿ ಚಿಕ್ಕ ವಸ್ತುಗಳ ಮೇಲ್ಮೈಯ ಚಿಕ್ಕಚಿಕ್ಕ ವಿವರಗಳನ್ನು ದೊಡ್ಡದಾಗಿ ತೋರಿಸಲಾಗುವುದು. ಅಂದರೆ ನೊಣದ ತಲೆಯಲ್ಲಿರುವ ರೋಮಗಳೆಲ್ಲ ಸ್ಪಷ್ಟವಾಗಿ ಕಾಣತಕ್ಕದ್ದು. ಮ್ಯಾಕ್ರೋ ಫೋಟೋಗ್ರಾಫಿ ಸಾಮಾನ್ಯವಾಗಿ ವೈಜ್ಞಾನಿಕ ಅಧ್ಯಯನಗಳಲ್ಲಿ ಹೆಚ್ಚಾಗಿ ಬಳೆಕಯಾಗುತ್ತದೆ. ಆದರೂ ಇತ್ತೀಚೆಗೆ ಬಹುಪಾಲು ಕ್ಯಾಮರಾಗಳಲ್ಲಿ ಈ […]
ಇಮೇಜ್ ಸ್ಟೆಬಿಲೈಸೇಶನ್ (image stabilization)
ಇಮೇಜ್ ಸ್ಟೆಬಿಲೈಸೇಶನ್ (image stabilization) – ಫೋಟೋ ತೆಗೆಯುವಾಗ ಕ್ಯಾಮರ ಅಲ್ಲಾಡಿದರೂ ಅಥವಾ ತಾನಿರುವ ಜಾಗವನ್ನು ಸ್ವಲ್ಪ ಬದಲಾಯಿಸಿದರೂ ಮೂಡಿಬರುವ ಫೋಟೋ ಸ್ಪಷ್ಟವಾಗಿರುವಂತೆ ಮಾಡುವ ಅತ್ಯಾಧುನಿಕ ತಂತ್ರಜ್ಞಾನ. ಈ ತಂತ್ರಜ್ಞಾನ ಅಳವಡಿಸಿರುವ ಲೆನ್ಸ್‌ನ ಒಳಗೆ ಕ್ಯಾಮರಾ ಚಲನೆಯನ್ನು ಅರಿತುಕೊಂಡು ಅದನ್ನು ಋಣಾತ್ಮಗೊಳಿಸಲು ಅಗತ್ಯ ಚಲನೆಯನ್ನು ಮಾಡುವ ಇನ್ನೊಂದು ಕಿರು ಲೆನ್ಸ್ ಅಳವಡಿಸಿರುತ್ತಾರೆ. ಕಾನನ್ ಇದಕ್ಕೆ ಐಎಸ್ (IS) ಎಂದು ಹೆಸರಿಸಿದೆ. ನಿಕಾನ್ ಕಂಪೆನಿಯವರು ಇದನ್ನು ವೈಬ್ರೇಶನ್ ರೆಸಿಸ್ಟೆಂಟ್ (VR – Vibration Resistant) ಎನ್ನುತ್ತಾರೆ. ಕಾನನ್ ಕ್ಯಾಮರಾಗಳಲ್ಲಿ […]
ಮೌಸ್ (mouse)
ಮೌಸ್ (mouse) -ಗಣಕಕ್ಕೆ ಮಾಹಿತಿಯನ್ನು ಊಡಿಸುವ ಸಾಧನ. ಇಲ್ಲಿ ಊಡಿಸುವ ಮಾಹಿತಿ ಅಕ್ಷರ ರೂಪದಲ್ಲಿಲ್ಲ. ಬದಲಿಗೆ ಮೌಸ್ ತಾನು ಇರುವ ಸ್ಥಳದ ನಿರ್ದೇಶನಾಂಕ (coordinates) ವನ್ನು ಗಣಕ್ಕೆ ರವಾನಿಸುತ್ತದೆ. ಈ ಮಾಹಿತಿಯ ಮೂಲಕ ಗಣಕವು ಪರದೆಯ ಮೇಲಿರುವ ಸೂಚಕವನ್ನು (cursor) ಅತ್ತಿತ್ತ ಚಲಿಸುತ್ತದೆ. ಈ ಸೂಚಕವು ಯಾವುದಾದರೊಂದು ತಂತ್ರಾಂಶದ ಲಾಂಛನ ಯಾ ಚಿಹ್ನೆ (icon) ಯ ಮೇಲಿದ್ದಾಗ ಮೌಸ್‌ನ್ನು ಕ್ಲಿಕ್ ಮಾಡಿದರೆ ಆ ತಂತ್ರಾಂಶವು ಚಾಲನೆಗೊಳ್ಳುತ್ತದೆ. ಮೌಸ್‌ನ್ನು ಇನ್ನೂ ಹಲವು ಕಾರ್ಯಗಳಿಗೆ ಬಳಸಲಾಗುತ್ತದೆ. ತಿರುಗುವ ಚಕ್ರವಿರುವ ಮೌಸ್ […]
ಕೆಪಾಸಿಟಿವ್ ಮತ್ತು ರೆಸಿಸ್ಟಿವ್ ಸ್ಪರ್ಶಸಂವೇದಿ ಪರದೆಗಳು (capacitive and resistive touchscreens)
ಕೆಪಾಸಿಟಿವ್ ಮತ್ತು ರೆಸಿಸ್ಟಿವ್ ಸ್ಪರ್ಶಸಂವೇದಿ ಪರದೆಗಳು (capacitive and resistive touchscreens) – ಸಾಮಾನ್ಯವಾಗಿ ಬಳಕೆಯಲ್ಲಿರುವ ಸ್ಪರ್ಶಸಂವೇದಿ ಪರದೆಗಳಲ್ಲಿ ಎರಡು ಬಗೆ. ಕೆಪಾಸಿಟಿವ್ ಮತ್ತು ರೆಸಿಸ್ಟಿವ್. ರೆಸಿಸ್ಟಿವ್ ಪರದೆಗಳನ್ನು ಬಳಸಲು ಒಂದು ಪ್ಲಾಸ್ಟಿಕ್ ಕಡ್ಡಿಯನ್ನು ಬಳಸಬೇಕಾಗುತ್ತದೆ. ಇದನ್ನು ಸ್ಟೈಲಸ್ ಎನ್ನುತ್ತಾರೆ. ಈಗ ಈ ಪರದೆಗಳು ಹಳತಾಗುತ್ತಿವೆ. ಕೆಪಾಸಿಟಿವ್ ಪರದೆಗಳನ್ನು ಬೆರಳಿನಲ್ಲಿ ಒತ್ತಿ ಕೆಲಸ ಮಾಡಬಹದು. ಬ್ಯಾಂಕ್ ಎಟಿಎಂಗಳಲ್ಲಿ ಈ ನಮೂನೆಯ ಪರದೆಗಳನ್ನು ನೀವೆಲ್ಲ ಬಳಸಿಯೇ ಇರುತ್ತೀರಾ.
ಬಾಸ್ ಮತ್ತು ಟ್ರೆಬ್ಲ್ (Bass and treble)
ಬಾಸ್ ಮತ್ತು ಟ್ರೆಬ್ಲ್ (Bass and treble) – ಯಾವುದೇ ಸಂಗೀತದ ಸ್ಥಾಯಿಯನ್ನು ತಿಳಿಸುವ ಮೌಲ್ಯ. ಅತಿ ಕೆಳಗಿನದನ್ನು ಬಾಸ್ ಎನ್ನುತ್ತಾರೆ. ಉದಾಹರಣೆಗೆ ಡೋಲು, ಮೃದಂಗ, ಇತ್ಯಾದಿ. ಅತಿ ಹೆಚ್ಚಿನದನ್ನು ಟ್ರೆಬ್ಲ್ ಎನ್ನುತ್ತಾರೆ. ಉದಾಹರಣೆಗೆ ತಂತಿವಾದ್ಯಗಳು, ಸಂತೂರ್, ಗೆಜ್ಜೆ, ಇತ್ಯಾದಿ. ಅಧಿಕ ಕಂಪನಾಂಕದ (ಹರ್ಟ್ಝ್, Hertz, Hz) ಧ್ವನಿ ಟ್ರೆಬ್ಲ್ ಎನಿಸಿಕೊಳ್ಳುತ್ತದೆ ಹಾಗೂ ಕಡಿಮೆ ಕಂಪನಾಂಕದ ಧ್ವನಿ ಬಾಸ್ ಎನಿಸಿಕೊಳ್ಳುತ್ತದೆ. ಯಾವುದೇ ಸ್ಪೀಕರ್ ಉತ್ತಮ ಅನ್ನಿಸಿಕೊಳ್ಳಬೇಕಾದರೆ ಬಾಸ್ ಮತ್ತು ಟ್ರೆಬ್ಲ್ ಧ್ವನಿಗಳನ್ನು ಉತ್ತಮವಾಗಿ ಪುನರುತ್ಪಾದನೆ ಮಾಡತಕ್ಕದ್ದು. ಸಾಮಾನ್ಯವಾಗಿ […]
ಧ್ಯುತಿರಂಧ್ರ (ಅಪೆರ್ಚರ್ – aperture)
ಧ್ಯುತಿರಂಧ್ರ (ಅಪೆರ್ಚರ್ – aperture) ಕ್ಯಾಮರಾದ ಲೆನ್ಸ್ ಅನ್ನು ಸಾಮಾನ್ಯವಾಗಿ ಸಂಪೂರ್ಣವಾಗಿ ತೆರೆಯಲಾಗುವುದಿಲ್ಲ. ಬೆಳಕಿನ ಪ್ರಖರತೆಯನ್ನು ಅವಲಂಬಿಸಿ ಹೆಚ್ಚು ಯಾ ಕಡಿಮೆ ಮಾಡಲಾಗುತ್ತದೆ. ಇದನ್ನೇ ಅಪೆರ್ಚರ್ ಎನ್ನುತ್ತಾರೆ. ಈ ತೆರೆಯುವಿಕೆ ಅರ್ಥಾತ್ ವ್ಯಾಸವನ್ನು ಮಸೂರದ ನಾಭಿದೂರಕ್ಕೆ (focal length) ಅನುಪಾತ ಮೂಲಕ ಬರೆಯಲಾಗುತ್ತದೆ. ಉದಾ – f/2.8, f/5.6, f/18, ಇತ್ಯಾದಿ. ಮಸೂರದ ನಾಭಿದೂರ 50ಮಿ.ಮೀ. ಇದೆ ಮತ್ತು ಅಪೆರ್ಚರ್ ಸಂಖ್ಯೆ f/5.6 ಎಂದಾದಲ್ಲಿ ಮಸೂರದ ತೆರೆಯುವಿಕೆಯ ವ್ಯಾಸ ಸುಮಾರು 9ಮಿ.ಮೀ. ಎಂದು ಲೆಕ್ಕ ಹಾಕಬಹುದು. ಜಾಸ್ತಿ […]