ಕವಾಟವೇಗ (ಶಟ್ಟರ್ ಸ್ಪೀಡ್ – shutter speed) – ಫೋಟೋ ತೆಗೆಯಬೇಕಾದರೆ ಮಸೂರ ಮತ್ತು ಚಿತ್ರೀಕರಣದ ಪರದೆ ನಡುವೆ ಇರುವ ಕವಾಟವನ್ನು (ಶಟ್ಟರ್) ಸ್ವಲ್ಪ ಸಮಯದ ಕಾಲ ತೆರೆದು ಮತ್ತೆ ಮುಚ್ಚಬೇಕಾಗುತ್ತದೆ. ಈ ಕವಾಟ ತೆರೆದು ಮುಚ್ಚುವ ಸಮಯವನ್ನು ಶಟ್ಟರ್ ಸ್ಪೀಡ್ ಎನ್ನುತ್ತಾರೆ. ಸಾಮಾನ್ಯವಾಗಿ ಇವನ್ನು ಸೆಕೆಂಡಿನ ಎಷ್ಟನೇ ಪಾಲು ಎಂದು ನಮೂದಿಸುತ್ತಾರೆ. ಉದಾಹರಣೆಗೆ 1/125 ಎಂದರೆ ಒಂದು ಸೆಕೆಂಡಿನ 125ನೆ ಒಂದರಷ್ಟು ಕಾಲದಲ್ಲಿ ಶಟ್ಟರ್ ತೆರೆದು ಮುಚ್ಚಲಾಗುತ್ತದೆ ಎಂದು ಅರ್ಥ. ಹಾರುವ ಹಕ್ಕಿ ಅಥವಾ ಆಟದಂತಹ […]
Category: ಗ್ಯಾಜೆಟ್ ಪದ
ಅತಿ ಸಮೀಪ ಸಂವಹನ (NFC)
ಅತಿ ಸಮೀಪ ಸಂವಹನ (Near Field Communication, NFC) ಅಥವಾ ಸಮೀಪ ಕ್ಷೇತ್ರ ಸಂವಹನ ಎಂದರೆ ತುಂಬ ಸಮೀಪದಲ್ಲಿರುವ ಎರಡು ಸಾಧನಗಳ ನಡುವೆ ನಿಸ್ತಂತು (wireless) ಸಂವಹನವನ್ನು ಸಾಧ್ಯವಾಗಿಸುವ ತಂತ್ರಜ್ಞಾನ. ಇತ್ತೀಚೆಗೆ ಮಾರುಕಟ್ಟೆಗೆ ಬರುತ್ತಿರುವ ಹಲವು ಸ್ಮಾರ್ಟ್‌ಫೋನ್‌ಗಳಲ್ಲಿ ಈ ಸೌಲಭ್ಯವಿದೆ. ಇದನ್ನು ಬಳಸಿ ಸ್ಪೀಕರ್ ಜೋಡಣೆ, ಫೋನ್‌ಗಳ ನಡುವೆ ಸಂಪರ್ಕ ಸಾಧಿಸುವುದು, ಅಂಗಡಿಗಳಲ್ಲಿ ಹಣ ವರ್ಗಾವಣೆ ಎಲ್ಲ ಸಾಧ್ಯ.
ಸ್ಮಾರ್ಟ್‌ಫೋನ್
ಸ್ಮಾರ್ಟ್‌ಫೋನ್ (smartphone) ಅರ್ಥಾತ್ ಚತುರವಾಣಿ ಎಂದರೆ ಮೊಬೈಲ್ ಫೋನಿನ ಕೆಲಸಗಳನ್ನೂ ಮಾಡಬಲ್ಲ ಕಿಸೆಗಣಕ. ಈ ಫೋನುಗಳಲ್ಲಿ ಅಂತರಜಾಲ ನೋಡುವುದು, ಇಮೈಲ್ ಮಾಡುವುದು, ಪದಸಂಸ್ಕರಣೆ, ಜಿಪಿಎಸ್ ಬಳಸಿ ತಾನು ಇರುವ ಸ್ಥಾನ ತಿಳಿಯುವುದು, ಇನ್ನೂ ಏನೇನೋ ಮಾಡಬಹುದು. ಇತ್ತೀಚೆಗೆ ಇಂತಹ ಫೋನುಗಳು ಅಗ್ಗವಾಗುತ್ತ ಜನಸಾಮಾನ್ಯರ ಕೈಗೆಟುಕುವಂತಾಗುತ್ತಿವೆ. ಇಂತಹ ಫೋನುಗಳಿಗೆ ಸಹಸ್ರಾರು ತಂತ್ರಾಂಶಗಳು ಅಂತರಜಾಲದಲ್ಲಿ ಲಭ್ಯವಿವೆ. ಇವುಗಳು ಕೆಲಸ ಮಾಡಲು ಆಂಡ್ರೋಯಿಡ್, ವಿಂಡೋಸ್ ಫೋನ್, ಐಓಎಸ್, ಇತ್ಯಾದಿ ಯಾವುದಾದರೊಂದು ಕಾರ್ಯಾಚರಣೆಯ ವ್ಯವಸ್ಥೆ ಅಗತ್ಯ. ಯಾಕೋ ಏನೋ ಸಿಂಬಿಯನ್ ಫೋನ್‌ಗಳು ಸ್ಮಾರ್ಟ್‌ಫೋನ್ […]