Gadget Loka

All about gadgtes in Kannada

ಸತ್ತ ಜೇಡನಿಂದ ರೋಬೋಟ್

ಜೇಮ್ಸ್ ಬಾಂಡ್ ಸಿನಿಮಾವೊಂದರಲ್ಲಿ ಒಂದು ದೃಶ್ಯ. ಜೇಮ್ಸ್ ಬಾಂಡ್ ಮಲಗಿರುತ್ತಾನೆ. ಮೇಲಿನಿಂದ ಒಂದು ಜೇಡವನ್ನು ಆತನ ಮೇಲಕ್ಕೆ ನಿಧಾನವಾಗಿ ಇಳಿಸುತ್ತಾರೆ. ಅದು ಭಯಂಕರ ವಿಷಪೂರಿತ ಜೇಡ ಆಗಿರುತ್ತದೆ. ಜೇಮ್ಸ್ ಬಾಂಡ್ ಎಂದಿನಂತೆ ಸಾಯದೆ ಬಚಾವಾಗುತ್ತಾನೆ. ಆ ಸಿನಿಮಾದಲ್ಲಿ ಜೇಡವನ್ನು ದೂರ ನಿಯಂತ್ರಣದ ಮೂಲಕ ಕಳುಹಿಸಿರಲಿಲ್ಲ. ಬದಲಿಗೆ ಮೇಲಿನಿಂದ ಒಂದು ದಾರದ ಮೂಲಕ ಕಳುಹಿಸಿರುತ್ತಾರೆ. ಈಗ ಆ ವಿಷಯ ಯಾಕೆ ಅಂತೀರಾ? ನಾನೀಗ ಹೇಳಹೊರಟಿರುವುದು ಸತ್ತ ಜೇಡವನ್ನು ರೋಬೋಟ್ ಆಗಿ ಪರಿವರ್ತಿಸುವ ಬಗ್ಗೆ. ಅಮೆರಿಕಾದ ರೈಸ್ ವಿಶ್ವ ವಿದ್ಯಾಲಯದ […]

ಡಿಜಿಟಲ್ ಜಗತ್ತಿನ ಮುಕ್ತ ಮಾರುಕಟ್ಟೆ

ಅಮೆಝಾನ್, ಫ್ಲಿಪ್‌ಕಾರ್ಟ್ ಎಲ್ಲರಿಗೂ ಗೊತ್ತು. ಈ ಎರಡು ಕಂಪೆನಿಗಳು ಜಾಲಮಳಿಗೆಗಗಳ ಕ್ಷೇತ್ರವನ್ನು ಬಹುಮಟ್ಟಿಗೆ ಸಂಪೂರ್ಣವಾಗಿ ಆಕ್ರಮಿಸಿವೆ ಎನ್ನಬಹುದು. ಸಣ್ಣಪುಟ್ಟ ಜಾಲಮಳಿಗೆಗಳು ಯಾವಾಗಲೋ ಬಾಗಿಲು ಹಾಕಿವೆ. ಅದರಿಂದ ನಮಗೇನು ಎನ್ನುತ್ತೀರಾ? ಈ ಎರಡೂ ಕಂಪೆನಿಗಳ ಒಡೆತನ ಭಾರತೀಯವಲ್ಲ. ಭಾರತದ ಅಮೆಝಾನ್‌ನ ಒಡೆತನ ಅಮೆರಿಕದ ಅಮೆಝಾನ್ ಕಂಪೆನಿಯದು. ಫ್ಲಿಪ್‌ಕಾರ್ಟ್ ಮೊದಲು ಭಾರತೀಯವಾಗಿದ್ದರೂ ಈಗ ಅದರ ಒಡೆತನ ಭಾರತೀಯರದ್ದಲ್ಲ. ಮಾಹಿತಿಯು ಈಗ ಹೊಸ ಎಣ್ಣೆ ಎಂಬ ಮಾತಿದೆ. ಅಂದರೆ ಈ ಜಾಲಮಳಿಗೆಗಗಳು ತಮ್ಮ ಲಕ್ಷಾಂತರ ಗ್ರಾಹಕರ ಮಾಹಿತಿಗಳನ್ನು ಸಂಗ್ರಹಿಸಿಟ್ಟುಕೊಂಡಿವೆ. ಈ ಮಾಹಿತಿಯ […]

ವೇಪರ್‌ವೇರ್

ಆವಿಯಾದ ಯಂತ್ರಾಂಶ – ತಂತ್ರಾಂಶ ಅತಿ ಕಡಿಮೆ ಬೆಲೆಗೆ ಅತಿ ಹೆಚ್ಚು ಗುಣವೈಶಿಷ್ಟ್ಯಗಳನ್ನು ಒಳಗೊಂಡ ಒಂದು ಹೊಸ ಸಾಧನವನ್ನು ಅಥವಾ ಗ್ಯಾಜೆಟ್ ಅನ್ನು ಯಾವುದೋ ಒಂದು ಕಂಪೆನಿ ಘೋಷಿಸುತ್ತದೆ. ಎಲ್ಲರೂ ಅದಕ್ಕೆ ಕಾಯುತ್ತಿರುತ್ತಾರೆ. ಕೆಲವು ಸಂದರ್ಭಗಳಲ್ಲಿ ಮುಂಗಡ ಬುಕಿಂಗ್ ಕೂಡ ಆಗಿರುತ್ತದೆ. ಅಂತಿಮವಾಗಿ ಆ ಉತ್ಪನ್ನ ಮಾರುಕಟ್ಟೆಗೆ ಬರುವುದೇ ಇಲ್ಲ. ಇಂತಹ ಹಲವು ಘಟನೆಗಳನ್ನು ಕಂಡಿರಬಹುದು, ಕೇಳಿರಬಹುದು ಅಥವಾ ಸ್ವತಃ ಅನುಭವಿಸಿರಬಹುದು. ಮಾಹಿತಿ ತಂತ್ರಜ್ಞಾನ ಕೇತ್ರದಲ್ಲಿ ಇಂತಹವುಗಳಿಗೆ vapourware ಎಂಬ ಹೆಸರಿದೆ. vapour ಅಂದರೆ ಆವಿ. ನೀಡಲು […]

ದುರಸ್ತಿಯ ಹಕ್ಕು

ನಿಮ್ಮಲ್ಲಿ ಐಫೋನ್ ಇದೆಯೆಂದಿಟ್ಟುಕೊಳ್ಳಿ. ಅದರ ಬ್ಯಾಟರಿಯ ಆಯುಸ್ಸು ಮುಗಿದಾಗ ಏನು ಮಾಡುತ್ತೀರಿ? ಐಫೋನ್ ಮಾತ್ರವಲ್ಲ ಈಗಿನ ಯಾವುದೇ ಫೋನಿನ ಬ್ಯಾಟರಿಯನ್ನು ನಾವೇ ಬದಲಿಸುವಂತಿಲ್ಲ ಎಂಬುದನ್ನು ಗಮನಿಸಿದ್ದೀರಾ? ಒಂದು ಕಾಲದಲ್ಲಿ ಫೋನ್ ಬಿಚ್ಚಿ ನಾವೇ ಬ್ಯಾಟರಿ ಬದಲಿಸಬಹುದಿತ್ತು. ಐಫೋನ್ ಹೊರತಾಗಿ ಬೇರೆ ಯಾವುದಾದರೂ ಫೋನ್ ಆದಲ್ಲಿ ಅದರ ಗ್ಯಾರಂಟಿ ಸಮಯ ಕಳೆದ ನಂತರ ಯಾವುದಾದರೂ ಅಂಗಡಿಗೆ ಹೋಗಿ ಅವರ ಮೂಲಕ ಬ್ಯಾಟರಿ ಬದಲಿಸಬಹುದು. ಆದರೆ ಐಫೋನ್‌ಗೆ ಹಾಗಲ್ಲ. ಅವರ ಸರ್ವಿಸ್ ಸೆಂಟರಿಗೇ ಹೋಗಿ ಅವರ ಮೂಲಕವೇ ಮಾಡಿಸಬೇಕು. ನೀವು […]

ಅಂತರಜಾಲದಲ್ಲೊಂದು ಕತ್ತಲ ಲೋಕ

ನೀವು ಬಳಸುವ ಅಂತರಜಾಲದಲ್ಲಿ ನಿಮ್ಮ ಕಣ್ಣಿಗೆ ಬೀಳದ ಒಂದು ಭೂಗತ ಜಗತ್ತಿದೆ. ಅದರಲ್ಲಿ ಬಹುತೇಕ ಕ್ರಿಮಿನಲ್ ಚಟುವಟಿಕೆಗಳೇ ನಡೆಯುತ್ತಿವೆ. ಅದು ನಿಮ್ಮ ಮಾಮೂಲಿ ಶೋಧಕ ತಂತ್ರಾಂಶಗಳ ಕಣ್ಣಿಗೆ ಬೀಳುವುದಿಲ್ಲ. ಬನ್ನಿ. ಅಂತರಜಾಲದಲ್ಲಿರುವ ಕತ್ತಲ ಲೋಕವನ್ನು ತಿಳಿಯೋಣ. ಅಂತರಜಾಲದಲ್ಲಿ ನೀವು ಏನು ಮಾಡಿದರೂ ಗೂಗ್ಲ್‌ಗೆ ಗೊತ್ತಾಗುತ್ತದೆ. ಅಂದರೆ ಬಹುತೇಕ ಎಲ್ಲ ಕೆಲಸಗಳೂ ಅದಕ್ಕೆ ಗೊತ್ತಾಗುತ್ತದೆ. ಅದಕ್ಕೆ ಮಾತ್ರವಲ್ಲ. ಫೇಸ್‌ಬುಕ್ ಕೂಡ ನಿಮ್ಮನ್ನು ಅಂತರಜಾಲದಲ್ಲಿ ಹಿಂಬಾಲಿಸುತ್ತದೆ. ನೀವು ಸಿಗ್ನಲ್‌ಗೆ ಕಾಯುತ್ತಿರುವಾಗ ನಿಮ್ಮ ವಾಹನವನ್ನು ಯಾವುದೋ ಬಾರ್ ಮುಂದೆ ಎರಡು ನಿಮಿಷ […]

ಹಿರಿಯ ನಾಗರಿಕರಿಗೆ ತಂತ್ರಜ್ಞಾನದ ವರದಾನ

ಆನಂದ ಪಾಟೀಲ ಇಂಗ್ಲೆಂಡಿನಲ್ಲಿದ್ದಾರೆ. ಅವರ ತಾಯಿ ಬೆಂಗಳೂರಿನ ಅವರ ಮನೆಯಲ್ಲಿ ಒಬ್ಬರೇ ಇರುತ್ತಾರೆ. ಅವರಿಗೆ ವಯಸ್ಸಾಗಿದೆ. ಓಡಾಡಲು ಅಷ್ಟೇನೂ ತೊಂದರೆಯಿಲ್ಲ. ಆದರೂ ಇದ್ದಕ್ಕಿಂದ್ದಂತೆ ಬಿದ್ದರೆ? ಮನೆಯೊಳಗೆ ಯಾರಾದರೂ ನುಸುಳಿದರೆ? ಆನಂದ ಪಾಟೀಲ ಇದಕ್ಕೆಲ್ಲ ಪರಿಹಾರ ಕಂಡುಕೊಂಡಿದ್ದಾರೆ. ಅವರ ಮನೆಯಲ್ಲಿ ಸಿಸಿಟಿವಿ ಅಳವಡಿಸಿದ್ದಾರೆ. ಅವು ಮಾಮೂಲಿ ಸಿಸಿಟಿವಿ ಕ್ಯಾಮೆರಾಗಳಲ್ಲ. ಅವುಗಳು motion sensing ನಮೂನೆಯವು ಮತ್ತು ಅಂತರಜಾಲಕ್ಕೆ ಸಂಪರ್ಕಹೊಂದಿದವು. ಅಂದರೆ ಅವುಗಳ ವೀಕ್ಷಣೆಯ ವ್ಯಾಪ್ತಿಯಲ್ಲಿ ಯಾವುದೇ ವ್ಯಕ್ತಿ ನಡೆದಾಡಿದರೆ ಅವು ಪತ್ತೆ ಹಚ್ಚಿ ಅಂತರಜಾಲದ ಮೂಲಕ ಸಂಬಂಧಪಟ್ಟವರಿಗೆ ಎಚ್ಚರಿಸುತ್ತವೆ. […]

ಚಾಲಕರಹಿತ ಕಾರು

ಕಾರು ಅಥವಾ ಯಾವುದೇ ವಾಹನ ಚಲಾಯಿಸಲು ಚಾಲಕನೊಬ್ಬನಿರಲೇಬೇಕಲ್ಲ? ಹಾಗೆಂದು ನೀವಂದುಕೊಂಡಿದ್ದರೆ ಅದು ಬದಲಾಗುವ ಕಾಲ ಬರುತ್ತಿದೆ ಎನ್ನಬಹುದು. ಈಗ ಚಾಲಕನಿಲ್ಲದೆಯೂ ಕಾರು ತನ್ನಷ್ಟಕ್ಕೇ ಚಲಿಸಬಲ್ಲುದು. ಅರ್ಥಾತ್ ಚಾಲಕನಿಲ್ಲದೆಯೇ ಸ್ವಯಂಚಾಲಿತವಾಗಿ ಚಲಿಸಬಲ್ಲ ಕಾರುಗಳು ತಯಾರಾಗಿವೆ. ಅವು ಇನ್ನೂ ಭಾರತಕ್ಕೆ ಪ್ರವೇಶಿಸಿಲ್ಲ. ಈ ಕಾರುಗಳು ಹೇಗಿವೆ? ಅವುಗಳಲ್ಲಿ ಎಷ್ಟು ನಮೂನೆಗಳಿವೆ. ಅವುಗಳನ್ನು ಯಾರು ತಯಾರಿಸುತ್ತಿದ್ದಾರೆ? ಈ ಪ್ರಶ್ನೆಗಳಿಗೆ ಉತ್ತರವನ್ನು ಈ ಸಂಚಿಕೆಯಲ್ಲಿ ಕಂಡುಕೊಳ್ಳೋಣ. ಚಾಲಕರಹಿತ ಕಾರು, ಸ್ವಯಂಚಾಲಿತ ಕಾರು, ತಾನೇ ನಡೆಸಿಕೊಂಡು ಹೋಗುವ ಕಾರು, ರೋಬೋಟಿಕ್ ಕಾರು ಎಂದೆಲ್ಲ ಕರೆಯಲ್ಪಡುವ […]

ಆರು ಜನರಷ್ಟು ದೂರ ಸಿದ್ಧಾಂತ

ನಿಮಗೆ ಯಾರಿಂದಲೋ ಏನೋ ಸಹಾಯ ಆಗಬೇಕಾಗಿದೆ. ಆ ವ್ಯಕ್ತಿಯ ಪರಿಚಯ ನಿಮಗಿಲ್ಲ. ಆಗ ಏನು ಮಾಡುತ್ತೀರಿ? ಆ ವ್ಯಕ್ತಿಯ ಪರಿಚಯ ಯಾರಿಗೆ ಇರಬಹುದೋ ಅವರನ್ನು ಹುಡುಕುತ್ತೀರಿ. ನಿಮಗೆ ಪರಿಚಯವಿರುವ ಯಾವುದೋ ಒಬ್ಬ ವ್ಯಕ್ತಿಗೆ ನಿಮಗೆ ಬೇಕಾದ ವ್ಯಕ್ತಿಯ ಪರಿಚಯ ಇರುವ ಇನ್ನೊಬ್ಬ ವ್ಯಕ್ತಿಯ ಪರಿಚಯ ಇರುತ್ತದೆ. ಇದನ್ನು ಹೀಗೆ ಬರೆಯೋಣ. ನಿಮಗೆ ಬೇಕಾದ ವ್ಯಕ್ತಿ “ಕ”. ನಿಮಗೆ ಪರಿಚಯ ಇರುವ ವ್ಯಕ್ತಿ “ಬ”. ಈ ಇಬ್ಬರಿಗೂ ಪರಿಚಯ ಇರುವ ವ್ಯಕ್ತಿಯೊಬ್ಬ ಇದ್ದಾನೆ. ಆತ “ಚ”. ಈಗ ನೀವು […]

ಗರ್ಭಕ್ಕೂ ಗ್ಯಾಜೆಟ್

ಮಹಾಭಾರತದಲ್ಲಿ ಒಂದು ಆಖ್ಯಾನ ಇದೆ. ಕೃಷ್ಣ ತನ್ನ ತಂಗಿ ಸುಭದ್ರೆಗೆ ಚಕ್ರವ್ಯೂಹವನ್ನು ಭೇದಿಸುವ ಉಪಾಯವನ್ನು ಹೇಳುತ್ತಿರುತ್ತಾನೆ. ಆಗ ಆಕೆ ಗರ್ಭಿಣಯಾಗಿರುತ್ತಾಳೆ. ಆಕೆಯ ಗರ್ಭದಲ್ಲಿ ಅಭಿಮನ್ಯು ಇರುತ್ತಾನೆ. ಆತ ಅದನ್ನು ಗರ್ಭದಲ್ಲಿದ್ದಾಗಲೇ ಕೇಳಿಸಿಕೊಳ್ಳುತ್ತಾನೆ. ಸುಭದ್ರೆ ನಿದ್ರೆಗೆ ಜಾರಿದಳು ಎಂದು ಕೃಷ್ಣ ಹೇಳುವುದನ್ನು ನಿಲ್ಲಿಸುತ್ತಾನೆ. ಆದುದರಿಂದ ಅಭಿಮನ್ಯುವಿಗೆ ಚಕ್ರವ್ಯೂಹವನ್ನು ಭೇದಿಸಿ ಒಳಕ್ಕೆ ಹೋಗುವುದು ಮಾತ್ರ ಗೊತ್ತಿರುತ್ತದೆ. ವಾಪಾಸು ಹಿಂದಕ್ಕೆ ಬರುವುದು ತಿಳಿದಿರುವುದಿಲ್ಲ. ಮುಂದಕ್ಕೆ ಕುರುಕ್ಷೇತ್ರ ಯುದ್ಧದಲ್ಲಿ ಆತ ಚಕ್ರವ್ಯೂಹದೊಳಕ್ಕೆ ನುಗ್ಗಿ ಸಾಯುತ್ತಾನೆ. ಇದು ಬಹುತೇಕ ಭಾರತೀಯರಿಗೆ ತಿಳಿದಿರುವ ಕಥೆ.   […]

ಕೃತಕ ಬುದ್ಧಿಮತ್ತೆಯ ಕಾಲ

2022ರಲ್ಲಿ ಹಾಗೂ 2023ರಲ್ಲಿ ಅತ್ಯಂತ ಸುದ್ಧಿಯಲ್ಲಿರುವ ತಂತ್ರಜ್ಞಾನ ಕೃತಕ ಬುದ್ಧಿಮತ್ತೆ. ಕೃತಕ ಬುದ್ಧಿಮತ್ತೆ (artificial intelligence) ಎನ್ನುವುದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇತ್ತೀಚೆಗೆ ತುಂಬ ಸುದ್ದಿ ಮಾಡುತ್ತಿರುವ ವಿಷಯ. ಇದರಲ್ಲಿ ಯಂತ್ರಗಳು ಅಥವಾ ತಂತ್ರಾಂಶಗಳು ತಾವೇ ವಿಷಯಗಳನ್ನು ಅರ್ಥಮಾಡಿಕೊಂಡು, ಅವುಗಳಿಗೆ ಸ್ಪಂದಿಸಿ, ತಾವೇ ತೀರ್ಮಾನ ತೆಗೆದುಕೊಂಡು ಕೆಲಸ ಮಾಡುತ್ತವೆ. ಕೆಲವು ಪ್ರಮುಖ ಉದಾಹರಣೆಗೆಳು – ಯಂತ್ರಾನುವಾದ, ಪಠ್ಯದಿಂದ ಧ್ವನಿಗೆ ಹಾಗೂ ಧ್ವನಿಯಿಂದ ಪಠ್ಯಕ್ಕೆ ಪರಿವರ್ತನೆ, ಚಿತ್ರದಿಂದ ಪಠ್ಯಕ್ಕೆ, ಪಠ್ಯದ ಪ್ರಕಾರ ಕೃತಕವಾಗಿ ಚಿತ್ರಗಳ ರಚನೆ, ಚಿತ್ರಗಳನ್ನು ಅರ್ಥಮಾಡಿಕೊಳ್ಳುವುದು, […]

Gadget Loka © 2018