Gadget Loka

All about gadgtes in Kannada

Category: ಲೇಖನ

Article about gadgets

ಬಿ.ಪಿ. ಮೋನಿಟರ್‌ಗಳು

ರಕ್ತದೊತ್ತಡ ಅಳೆಯಿರಿ   ತುಷಾರ ಮಾಸಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ಟೆಕ್ಕಿರಣ ಅಂಕಣದ ಆರನೆಯ ಕಂತು   ರಕ್ತದೊತ್ತಡ ಅಥವಾ ರಕ್ತದ ಏರೊತ್ತಡ ಒಂದು ಸಾಮಾನ್ಯ ಕಾಯಿಲೆಯಾಗುತ್ತಿದೆ. ಹೈ ಬ್ಲಡ್‌ಪ್ರಷರ್ (ಹೈ ಬಿ.ಪಿ.), ಹೈಪರ್‌ಟೆನ್ಶನ್ ಅಥವಾ ಸರಳವಾಗಿ ಬಿ.ಪಿ. ಎಂದೂ ಇದನ್ನು ಕರೆಯುತ್ತಾರೆ. ಭಾರತದಲ್ಲೂ ಇದು ಜನಸಂಖ್ಯೆಯ ಗಣನೀಯ ಭಾಗವನ್ನು ಬಾಧಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ರಕ್ತದ ಏರೊತ್ತಡವನ್ನು “ಶಾಂತಿಯುತ ಕೊಲೆಗಾರ” ಎಂದು ವರ್ಣಿಸಿದೆ. ರಕ್ತದ ಏರೊತ್ತಡಕ್ಕೆ ಅನುವಂಶಿಕ ಮತ್ತು ಜೀವನಶೈಲಿಗಳು ಕಾರಣವೆಂದು ಹೇಳಲಾಗುತ್ತಿದೆ. ರಕ್ತದ ಏರೊತ್ತಡ ಪ್ರಾರಂಭದಲ್ಲಿ ಯಾವ […]

ಆಕ್ಸಿಮೀಟರ್

ರಕ್ತದಲ್ಲಿರುವ ಆಮ್ಲಜನಕವನ್ನು ಅಳೆಯಿರಿ   ಎಪ್ರಿಲ್ ೨೦೨೦ ರಿಂದ ತುಷಾರ ಮಾಸಪತ್ರಿಕೆಯಲ್ಲಿ ಟೆಕ್ಕಿರಣ ಎಂಬ ಹೆಸರಿನ ಅಂಕಣ ಪ್ರಾರಂಭವಾಗಿದೆ. ಇದು ಅದರ ಐದನೆಯ ಕಂತು ಕೊರೋನಾ ಬಂದಿರಬಹುದೇ ಎಂದು ಪರೀಕ್ಷೆ ಮಾಡಿಸಿದಾಗ ಕೊರೋನಾ ವೈರಸ್ ದೇಹದಲ್ಲಿ ಇರುವುದು ಹೌದು ಆದರೆ ಕಾಯಿಲೆ ಲಕ್ಷಣಗಳಿಲ್ಲ ಎಂದಾದರೆ ಅವರಿಗೆ ಮನೆಯಲ್ಲೇ ಇರಲು ಅನುಮತಿ ಸಿಗುತ್ತದೆ. ಆದರೆ ಅವರು ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅದರಲ್ಲಿ ಒಂದು ಅಂಶವೆಂದರೆ ಅವರಲ್ಲಿ ಆಕ್ಸಿಮೀಟರ್ ಇರತಕ್ಕದ್ದು ಮತ್ತು ತಮ್ಮ ದೇಹದಲ್ಲಿರುವ ಆಮ್ಲಜನಕದ (oxygen) ಪ್ರಮಾಣವನ್ನು ಆಗಾಗ […]

ನ್ಯಾನೋರೋಬೋಟ್‌ಗಳು

ವೈದ್ಯರನ್ನೇ ನುಂಗಬಹುದು! ಎಪ್ರಿಲ್ ೨೦೨೦ ರಿಂದ ತುಷಾರ ಮಾಸಪತ್ರಿಕೆಯಲ್ಲಿ ಟೆಕ್ಕಿರಣ ಎಂಬ ಹೆಸರಿನ ಅಂಕಣ ಪ್ರಾರಂಭವಾಗಿದೆ. ಇದು ಅದರ ನಾಲ್ಕನೆಯ ಕಂತು ದೇವಿಮಹಾತ್ಮೆ ಯಕ್ಷಗಾನದ ಪ್ರಾರಂಭದಲ್ಲಿ ಒಂದು ಪ್ರಸಂಗ ಇದೆ. ಅದರ ಪ್ರಕಾರ ವಿಷ್ಣು ಮತ್ತು ಬ್ರಹ್ಮರಿಗೆ ತಮ್ಮಿಬ್ಬರಲ್ಲಿ ಯಾರು ಶ್ರೇಷ್ಠ ಎಂಬ ಚರ್ಚೆ ಆಗುತ್ತದೆ. ಕೊನೆಗೆ ಒಬ್ಬರ ದೇಹದೊಳಗ್ಗೆ ಇನ್ನೊಬ್ಬರು ಹೋಗಿ ಹೊರ ಬರುವ ಪಂಥ ಏರ್ಪಡಿಸಿಕೊಳ್ಳುತ್ತಾರೆ. ಮೊದಲು ವಿಷ್ಣು ಬ್ರಹ್ಮನ ಹೊಟ್ಟೆಯೊಳಗೆ ಹೋಗುತ್ತಾನೆ. ಅಲ್ಲಿಂದಲೇ ತನಗೆ ಕಂಡದ್ದನ್ನು ವರ್ಣಿಸುತ್ತಾನೆ. ಅಲ್ಲಿ ಚಿನ್ನ ಕಂಡು ಬ್ರಹ್ಮನಿಗೆ […]

ಲೆನ್ಸ್ ಬದಲಿಸಬಹುದಾದ ಕನ್ನಡಿರಹಿತ ಕ್ಯಾಮೆರ

ಎಪ್ರಿಲ್ ೨೦೨೦ ರಿಂದ ತುಷಾರ ಮಾಸಪತ್ರಿಕೆಯಲ್ಲಿ ಟೆಕ್ಕಿರಣ ಎಂಬ ಹೆಸರಿನ ಅಂಕಣ ಪ್ರಾರಂಭವಾಗಿದೆ. ಇದು ಅದರ ಮೂರನೆಯ ಕಂತು ಕ್ಯಾಮೆರ ಯಾರಿಗೆ ಗೊತ್ತಿಲ್ಲ? ಈಗ ಹಳೆಯ ಫಿಲ್ಮ್ ಕ್ಯಾಮೆರಗಳು ಕಾಣಿಸುತ್ತಿಲ್ಲ. ಎಲ್ಲವೂ ಡಿಜಿಟಲ್‌ಮಯ. ಕ್ಯಾಮೆರಗಳಲ್ಲಿ ಹಲವು ನಮೂನೆಗಳು. ಮುಖ್ಯವಾಗಿ ಎರಡು ನಮೂನೆ -ಸುಮ್ಮನೆ ನೋಡಿ ಕ್ಲಿಕ್ ಮಾಡುವಂತಹದ್ದು (aim and shoot) ಮತ್ತು ಏಕಮಸೂರ ಪ್ರತಿಫಲನ (single lens reflex –SLR). ಏಮ್ ಅಂಡ್ ಶೂಟ್ ಕ್ಯಾಮೆರಗಳು ಈಗ ಮಾರುಕಟ್ಟೆಯಿಂದ ಬಹುತೇಕ ಮಾಯವಾಗಿವೆ. ಇದಕ್ಕೆ ಕಾರಣ ಶಕ್ತಿಶಾಲಿಯಾದ […]

ಗ್ಲೂಕೋಮೀಟರ್

ಮನೆಯಲ್ಲೇ ರಕ್ತ ಪರೀಕ್ಷೆ ಮಾಡಿರಿ ಎಪ್ರಿಲ್ ೨೦೨೦ ರಿಂದ ತುಷಾರ ಮಾಸಪತ್ರಿಕೆಯಲ್ಲಿ ಟೆಕ್ಕಿರಣ ಎಂಬ ಹೆಸರಿನ ಅಂಕಣ ಪ್ರಾರಂಭವಾಗಿದೆ. ಇದು ಅದರ ಎರಡನೆಯ ಕಂತು ಭಾರತದಲ್ಲಿ ಡಯಾಬಿಟೀಸ್ ಅರ್ಥಾತ್ ಮಧುಮೇಹ ಅಥವಾ ಸಕ್ಕರೆ ಕಾಯಿಲೆಯ ಪ್ರಮಾಣ ಹೆಚ್ಚುತ್ತಲೇ ಇದೆ. ನಗರ ಪ್ರದೇಶದಲ್ಲಿ ಸುಮಾರು 10 ರಿಂದ 14 ಶೇಕಡ ಜನರಿಗೆ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಸುಮಾರು 3 ರಿಂದ 8 ಶೇಕಡ ಜನರಿಗೆ ಸಕ್ಕರೆ ಕಾಯಿಲೆ ಇದೆ ಎಂದು ಒಂದು ಸಮೀಕ್ಷೆ ತಿಳಿಸುತ್ತದೆ. ಸಕ್ಕರೆ ಕಾಯಿಲೆ ಇರುವವರ […]

ಕಿರಿಕಿರಿಯಿಲ್ಲದ ಕರೆಗಳಿಗಾಗಿ

ವಿಓವೈಫೈ ಅಥವಾ ವೈಫೈ ಕಾಲಿಂಗ್ ಎಪ್ರಿಲ್ ೨೦೨೦ ರಿಂದ ತುಷಾರ ಮಾಸಪತ್ರಿಕೆಯಲ್ಲಿ ಟೆಕ್ಕಿರಣ ಎಂಬ ಹೆಸರಿನ ಅಂಕಣ ಪ್ರಾರಂಭವಾಗಿದೆ. ಇದು ಅದರ ಮೊದಲ ಕಂತು “ಹಲೋ” “ಹಲೋ” “ಹಲೋ, ಸರಿಯಾಗಿ ಕೇಳಿಸುತ್ತಿಲ್ಲ” “ಸ್ವಲ್ಪ ತಾಳಿ. ಮನೆಯೊಳಗೆ ಸಿಗ್ನಲ್ ಸರಿಯಿಲ್ಲ. ಹೊರಗೆ ಹೋಗಿ ಮಾತನಾಡುತ್ತೇನೆ” ಇದು ನಿಮ್ಮ ಮನೆಯಲ್ಲಿಯ ಅವಸ್ಥೆಯೂ ಆಗಿರಬಹುದು. ನಿಮ್ಮ ಮನೆಯಲ್ಲಿ ಬ್ರಾಡ್‌ಬ್ಯಾಂಡ್ ಅಂತರಜಾಲ ಸೌಲಭ್ಯವಿದೆಯೇ? ಅದರ ಜೊತೆ ವೈಫೈ ಮೋಡೆಮ್ ಕೂಡ ಇದೆಯೇ? ಹಾಗಿದ್ದಲ್ಲಿ ನಿಮಗೆ ಈ ಮೊಬೈಲ್ ಸಿಗ್ನಲ್‌ ಅತಿ ಕಡಿಮೆ ಇರುವ […]

ಏಮ್ ಆಂಡ್ ಶೂಟ್ ಕ್ಯಾಮರ ಕೊಳ್ಳುವುದು ಹೇಗೆ?

ಸುಮ್ಮನೆ ನೋಡುವುದು ಮತ್ತು ಕ್ಲಿಕ್ ಮಾಡುವುದು -ಇಂತಹ ಕ್ಯಾಮರಾಗಳಿಗೆ ಏಮ್ ಆಂಡ್ ಶೂಟ್ ಕ್ಯಾಮರ ಎನ್ನುತ್ತಾರೆ. ಅಂತಹ ಕ್ಯಾಮರಗಳನ್ನೆ ಬಹುಪಾಲು ಜನರು ಕೊಳ್ಳುವುದು. ಇಂತಹ ಕ್ಯಾಮರ ಕೊಳ್ಳುವುದಕ್ಕೊಂದು ಕಿರು ಕೈಪಿಡಿ ನೀಡಲು ಸಣ್ಣ ಪ್ರಯತ್ನ. ಏಮ್ ಆಂಡ್ ಶೂಟ್ ಕ್ಯಾಮರಾಗಳಲ್ಲಿ ಹೆಸರೇ ಸೂಚಿಸುವಂತೆ ಇವುಗಳಲ್ಲಿ ಹೆಚ್ಚು ಆಯ್ಕೆಗಳಿಲ್ಲ. ಸುಮ್ಮನೆ ಕ್ಯಾಮರಾ ಮೂಲಕ ನೋಡುವುದು ಮತ್ತು ಕ್ಲಿಕ್ ಮಾಡುವುದು, ಅಷ್ಟೆ. ಅತಿಯಾದ ಹಾಗೂ ಕ್ಲಿಷ್ಟವಾದ ಆಯ್ಕೆಗಳಿಲ್ಲ. ಜನಸಾಮಾನ್ಯರು ಕೊಳ್ಳುವುದು ಇಂತಹ ಕ್ಯಾಮರಗಳನ್ನೇ. ಅವುಗಳನ್ನು ಕೊಳ್ಳುವಾಗ ಯಾವ್ಯಾವುದರ ಬಗ್ಗೆ ಗಮನ […]

Gadget Loka © 2018