ಬೆಂಗಳೂರಿನ ಸಿಲಿಕಾನ್ ಸಿಟಿಯಲ್ಲಿ ಜಾಗತಿಕ ಸೆಮಿಕಂಡಕ್ಟರ್ ದೈತ್ಯ ಮೀಡಿಯಾಟೆಕ್ (MediaTek) ಇತ್ತೀಚೆಗೆ ತನ್ನ ವಾರ್ಷಿಕ ‘ಟೆಕ್‌ಡೇ’ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಆಯೋಜಿಸಿತ್ತು. “ಪ್ರತೀ ಚಿಪ್‌ನಲ್ಲಿಯೂ ಹೊಸತನ, ಸಾಧ್ಯತೆ ಮತ್ತು ಪರಿಕಲ್ಪನೆ” ಎಂಬ ವಿಶೇಷ ಥೀಮ್‌ನಡಿ ನಡೆದ ಈ ಕಾರ್ಯಕ್ರಮದಲ್ಲಿ ಭವಿಷ್ಯದ ಸ್ಮಾರ್ಟ್‌ಫೋನ್ ಮತ್ತು ಎಲೆಕ್ಟ್ರಾನಿಕ್ ಸಾಧನಗಳ ಚಿತ್ರಣವನ್ನೇ ಬದಲಿಸಬಲ್ಲ ನವೀನ ಚಿಪ್‌ಸೆಟ್‌ಗಳನ್ನು ಪರಿಚಯಿಸಲಾಯಿತು. 🚀 ಕ್ರಾಂತಿಕಾರಿ ಡೈಮನ್ಸಿಟಿ 9500 ಚಿಪ್‌ಸೆಟ್ ಪರಿಚಯ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಎಂದರೆ ಮೀಡಿಯಾಟೆಕ್‌ನ ಮೂರನೇ ಪೀಳಿಗೆಯ ಅತ್ಯಾಧುನಿಕ ಚಿಪ್‌ಸೆಟ್ ಡೈಮನ್ಸಿಟಿ […]
Tag: ಚಿಪ್
ಅಲ್ಟ್ರಾಸೌಂಡ್ ಸ್ಟಿಕ್ಕರ್
ದೇಹಕ್ಕೆ ಅಂಟಿಸಬಲ್ಲ ಅಲ್ಟ್ರಾಸೌಂಡ್ ಚಿಪ್ ಬಸುರಿಯಾದಾಗ ಮಾಡುವ ಹಲವು ಪರೀಕ್ಷೆಗಳಲ್ಲಿ ತಪ್ಪದೇ ಮಾಡುವ ಒಂದು ಪರೀಕ್ಷೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್. ಇದನ್ನು ಬಸುರಿಯರಿಗೆ ಮಾತ್ರವಲ್ಲ, ಇನ್ನೂ ಹಲವಾರು ಸಂದರ್ಭಗಳಲ್ಲಿ ವೈದ್ಯರು ಪರೀಕ್ಷಾರ್ಥವಾಗಿ ಬಳಸುತ್ತಾರೆ. ದೇಹದ ಒಳಗಿನ ಅಂಗಗಳು ಸರಿಯಾಗಿವೆಯೇ ಎಂದು ಪರಿಶೀಲಿಸಲು ಈ ವಿಧಾನದ ಬಳಕೆ ಆಗುತ್ತದೆ. ಇದರಲ್ಲಿ ಶ್ರವಣಾತೀತ (ಅಲ್ಟ್ರಾಸಾನಿಕ್/ಅಲ್ಟ್ರಾಸೌಂಡ್) ಧ್ವನಿಯ ಅಲೆಗಳನ್ನು ದೇಹದ ಒಳಗೆ ಕಳುಹಿಸಲಾಗುತ್ತದೆ. ಈ ಶ್ರವಣಾತೀತ ಧ್ವನಿಯ ಅಲೆಗಳು ಅದರ ಹೆಸರೇ ಸೂಚಿಸುವಂತೆ ನಮ್ಮ ಕಿವಿಗಳಿಗೆ ಕೇಳಿಸುವುದಿಲ್ಲ. ಆದರೆ ಅವುಗಳನ್ನು ಪತ್ತೆಹಚ್ಚುವ ಸಾಧನಗಳಿವೆ. […]
