ಸ್ವಂತೀಯಿಂದಾಗುವ ಅನಾಹುತಗಳು ಪತ್ರಿಕೆಗಳಲ್ಲಿ ಆಗಾಗ ಓದುತ್ತಿರುತ್ತೇವೆ. ಸ್ವಂತೀ (selfie) ತೆಗೆಯಲು ಹೋಗಿ ಪ್ರಾಣ ಕಳೆದುಕೊಂಡ ಸುದ್ದಿಗಳು. ಇಬ್ಬರು ಯುವಕರು ಚಾರ್ಮಾಡಿ ಘಾಟ್‌ನಲ್ಲಿ ಜಲಪಾತದ ಪಕ್ಕ ನಿಂತುಕೊಂಡು ಸ್ವಂತೀ ತೆಗೆಯಲು ಹೋಗಿ ನೀರಿಗೆ ಬಿದ್ದು ಪ್ರಾಣ ಕಳೆದುಕೊಂಡರು. ಇಬ್ಬರು ಯುವತಿಯರು ರೈಲ್ವೇ ಹಳಿಗಳ ಪಕ್ಕ ನಿಂತುಕೊಂಡು ಸ್ವಂತೀ ತೆಗೆಯುತ್ತಿದ್ದಾಗ ಹಿಂದಿನಿಂದ ರೈಲು ಬಂದುದನ್ನು ಗಮನಿಸದೆ ರೈಲಿನಡಿಗೆ ಬಿದ್ದು ಮೃತರಾದರು. ಇಂತಹ ಸುದ್ದಿಗಳು ಆಗಾಗ ಬರುತ್ತಿರುತ್ತವೆ. ಕೊಲ್ಲುವ ಸ್ವಂತೀಯಿಂದಾಗಿ ಪ್ರಪಂಚಾದ್ಯಂತ ನೂರಾರು ಮಂದಿ ಜೀವ ಕಳೆದುಕೊಂಡಿದ್ದಾರೆ. ಇದಕ್ಕೆ ಇಂಗ್ಲಿಷಿನಲ್ಲಿ killer […]