ಬೆವರಿಳಿಸಿ ಕೆಲಸ ಮಾಡಿದರೆ ದೊರೆಯುವುದು ವಿದ್ಯುತ್! ಬೆವರಿಳಿಸಿ ಕೆಲಸ ಮಾಡಿದರೆ ಶ್ರಮಕ್ಕೆ ತಕ್ಕ ಫ್ರತಿಫಲ ದೊರೆಯುವುದು ಎಂಬುದು ನಮ್ಮ ನಂಬಿಕೆ ಮಾತ್ರವಲ್ಲ ವಾಸ್ತವ ಕೂಡ. ಬೆವರಿಳಿಯಬೇಕಾದರೆ ಅತಿಯಾದ ಸೆಕೆಯಿರಬೇಕು ಅಥವಾ ಶಕ್ತಿ ವ್ಯಯಿಸಿ ಕೆಲಸ ಮಾಡಬೇಕು. ಶಕ್ತಿಯಲ್ಲಿ ಹಲವು ನಮೂನೆಗಳಿವೆ. ಉಷ್ಣ, ಬೆಳಕು, ವಿದ್ಯುತ್, ಇವು ನಮಗೆ ಸಾಮಾನ್ಯವಾಗಿ ಪರಿಚಿತವಿರುವ ಶಕ್ತಿಯ ನಮೂನೆಗಳು. ಶಕ್ತಿ ಹಾಕಿ ಕೆಲಸ ಮಾಡಿದರೆ ಬೆವರಿಳಿಯುತ್ತದೆ. ಈಗ ಈ ಬೆವರಿನಿಂದಲೇ ಶಕ್ತಿಯನ್ನು ಪಡೆಯುವ ವಿಧಾನವನ್ನು ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ. ಅವರು ಹಾಗೆ ಆವಿಷ್ಕರಿಸಿರುವುದು ಶಕ್ತಿಯ […]
Tag: ಆವಿಷ್ಕಾರ
ಚತುರ ಮನೆ
ಮನೆಯೊಳಗೆ ಮನೆಯೊಡೆಯನಿಲ್ಲ ಎಂಬ ಸಾಲು ಕೇಳಿರಬಹುದು. ಮನೆಯ ಯಜಮಾನ ಎಲ್ಲಿಗೋ ಹೋಗಿ ಕಸ ಗುಡಿಸದೆ ಮನೆಯೆಲ್ಲ ಗಲೀಜಾದಾಗ ಈ ಸಾಲಿನ ಬಳಕೆಯಾಗುತ್ತದೆ. ಈಗಿನ ಆಧುನಿಕ ತಂತ್ರಜ್ಞಾನದ ಕಾಲದಲ್ಲಿ ಮನೆಯೊಳಗಡೆ ಮನೆಯೊಡೆಯನಿಲ್ಲದಿದ್ದರೂ ಮನೆಯನ್ನು ಸದಾ ಸ್ವಚ್ಛವಾಗಿಟ್ಟು, ರಾತ್ರಿ ದೀಪ ಹಚ್ಚಿ, ಹಗಲು ದೀಪ ಆರಿಸಿ, ಮನೆಯೊಳಗೆ ಮನೆಯೊಡೆಯನಿದ್ದಾನೆ ಎಂಬ ಭಾವನೆ ಮೂಡುವಂತೆ ಮಾಡಬಲ್ಲ ಚತುರ ಮನೆಗಳಿವೆ. ಇವುಗಳನ್ನು ಇಂಗ್ಲಿಷಿನಲ್ಲಿ smart home ಎನ್ನುತ್ತಾರೆ. ಚತುರ ಮನೆ ಅಂದರೆ ಏನು? ಬನ್ನಿ ಈ ಸಂಚಿಕೆಯಲ್ಲಿ ಅದನ್ನು ತಿಳಿದುಕೊಳ್ಳೋಣ. ಚತುರ ಮನೆ […]
ಘನಸ್ಥಿತಿಯ ಬ್ಯಾಟರಿ
ಭಾರಿ ಬ್ಯಾಟರಿ ಬ್ಯಾಟರಿಗಳು ಎಲ್ಲ ವಿದ್ಯುತ್ ಚಾಲಿತ ಸಾಧನಗಳಿಗೂ ಬೇಕು. ಬ್ಯಾಟರಿಗಳಲ್ಲಿ ಹಲವಾರು ನಮೂನೆಗಳಿವೆ. ಬ್ಯಾಟರಿಯನ್ನು ಬ್ಯಾಟರಿ ಸೆಲ್ ಎನ್ನುವುದೇ ಸರಿಯಾದ ವೈಜ್ಞಾನಿಕ ವಿಧಾನ. ಬ್ಯಾಟರಿ ಸೆಲ್‌ಗಳ ಜೋಡಣೆಯೇ ಬ್ಯಾಟರಿ. ಆದರೆ ಬಳಕೆಯಲ್ಲಿ ಬ್ಯಾಟರಿ ಎಂದೇ ಬಂದುಬಿಟ್ಟಿದೆ. ಇರಲಿ. ಬ್ಯಾಟರಿಯ ಪ್ರಮುಖ ಅಂಗಗಳು ಮೂರು -ಋಣ ಮತ್ತು ಧನ ಇಲೆಕ್ಟ್ರೋಡ್‌ಗಳು ಮತ್ತು ಅವುಗಳ ಮಧ್ಯದಲ್ಲಿರುವ ದ್ರಾವಣ ಇಲೆಕ್ಟ್ರೋಲೈಟ್. ಲಿತಿಯಂ ಬ್ಯಾಟರಿಯಿರಲಿ, ಲೆಡ್ ಆಸಿಡ್ ಬ್ಯಾಟರಿಯಿರಲಿ, ಈ ಇಲೆಕ್ಟ್ರೋಲೈಟ್ ಸಾಮಾನ್ಯವಾಗಿ ದ್ರವವಾಗಿರುತ್ತದೆ. ನಿಮ್ಮ ಟಾರ್ಚ್‌ಗಳಲ್ಲಿ ಬಳಸುವ ಬ್ಯಾಟರಿ ಮಾತ್ರ […]
ಸತ್ತ ಜೇಡನಿಂದ ರೋಬೋಟ್
ಜೇಮ್ಸ್ ಬಾಂಡ್ ಸಿನಿಮಾವೊಂದರಲ್ಲಿ ಒಂದು ದೃಶ್ಯ. ಜೇಮ್ಸ್ ಬಾಂಡ್ ಮಲಗಿರುತ್ತಾನೆ. ಮೇಲಿನಿಂದ ಒಂದು ಜೇಡವನ್ನು ಆತನ ಮೇಲಕ್ಕೆ ನಿಧಾನವಾಗಿ ಇಳಿಸುತ್ತಾರೆ. ಅದು ಭಯಂಕರ ವಿಷಪೂರಿತ ಜೇಡ ಆಗಿರುತ್ತದೆ. ಜೇಮ್ಸ್ ಬಾಂಡ್ ಎಂದಿನಂತೆ ಸಾಯದೆ ಬಚಾವಾಗುತ್ತಾನೆ. ಆ ಸಿನಿಮಾದಲ್ಲಿ ಜೇಡವನ್ನು ದೂರ ನಿಯಂತ್ರಣದ ಮೂಲಕ ಕಳುಹಿಸಿರಲಿಲ್ಲ. ಬದಲಿಗೆ ಮೇಲಿನಿಂದ ಒಂದು ದಾರದ ಮೂಲಕ ಕಳುಹಿಸಿರುತ್ತಾರೆ. ಈಗ ಆ ವಿಷಯ ಯಾಕೆ ಅಂತೀರಾ? ನಾನೀಗ ಹೇಳಹೊರಟಿರುವುದು ಸತ್ತ ಜೇಡವನ್ನು ರೋಬೋಟ್ ಆಗಿ ಪರಿವರ್ತಿಸುವ ಬಗ್ಗೆ. ಅಮೆರಿಕಾದ ರೈಸ್ ವಿಶ್ವ ವಿದ್ಯಾಲಯದ […]
ಅಲ್ಟ್ರಾಸೌಂಡ್ ಸ್ಟಿಕ್ಕರ್
ದೇಹಕ್ಕೆ ಅಂಟಿಸಬಲ್ಲ ಅಲ್ಟ್ರಾಸೌಂಡ್ ಚಿಪ್ ಬಸುರಿಯಾದಾಗ ಮಾಡುವ ಹಲವು ಪರೀಕ್ಷೆಗಳಲ್ಲಿ ತಪ್ಪದೇ ಮಾಡುವ ಒಂದು ಪರೀಕ್ಷೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್. ಇದನ್ನು ಬಸುರಿಯರಿಗೆ ಮಾತ್ರವಲ್ಲ, ಇನ್ನೂ ಹಲವಾರು ಸಂದರ್ಭಗಳಲ್ಲಿ ವೈದ್ಯರು ಪರೀಕ್ಷಾರ್ಥವಾಗಿ ಬಳಸುತ್ತಾರೆ. ದೇಹದ ಒಳಗಿನ ಅಂಗಗಳು ಸರಿಯಾಗಿವೆಯೇ ಎಂದು ಪರಿಶೀಲಿಸಲು ಈ ವಿಧಾನದ ಬಳಕೆ ಆಗುತ್ತದೆ. ಇದರಲ್ಲಿ ಶ್ರವಣಾತೀತ (ಅಲ್ಟ್ರಾಸಾನಿಕ್/ಅಲ್ಟ್ರಾಸೌಂಡ್) ಧ್ವನಿಯ ಅಲೆಗಳನ್ನು ದೇಹದ ಒಳಗೆ ಕಳುಹಿಸಲಾಗುತ್ತದೆ. ಈ ಶ್ರವಣಾತೀತ ಧ್ವನಿಯ ಅಲೆಗಳು ಅದರ ಹೆಸರೇ ಸೂಚಿಸುವಂತೆ ನಮ್ಮ ಕಿವಿಗಳಿಗೆ ಕೇಳಿಸುವುದಿಲ್ಲ. ಆದರೆ ಅವುಗಳನ್ನು ಪತ್ತೆಹಚ್ಚುವ ಸಾಧನಗಳಿವೆ. […]
ರೋಬೋಟ್ ಜೇನುನೊಣಗಳು
ಪ್ರಕೃತಿ ಎಲ್ಲವನ್ನೂ ಮಾಡಿದೆ. ನಮಗೆ ಬೇಕಾದ ಆಹಾರವನ್ನೂ ಆಹಾರ ಸರಪಳಿಯನ್ನೂ ಮಾಡಿಟ್ಟಿದೆ. ಸಸ್ಯಗಳು ಹೂ ಬಿಡುತ್ತವೆ. ದುಂಬಿ, ಜೇನು ನೊಣಗಳು ಈ ಹೂವುಗಳ ಮೇಲೆ ಕುಳಿತು ಒಂದರಿಂದ ಇನ್ನೊಂದಕ್ಕೆ ಪರಾಗಸ್ಪರ್ಶ ಮಾಡುತ್ತವೆ. ಇದರಿಂದಾಗಿ ಹೂ ಕಾಯಿಯಾಗಿ ಹಣ್ಣಾಗಿ ಅಥವಾ ಧಾನ್ಯವಾಗಿ ನಮಗೆ ಆಹಾರವಾಗುತ್ತದೆ. ಜಗತ್ತಿನ ಸುಮಾರು 35% ಆಹಾರೋತ್ಪತ್ತಿ ಜೇನುನೊಣಗಳನ್ನು ಅವಲಂಬಿಸಿದೆ. ಕೃಷಿಕರು ತಮ್ಮ ಗದ್ದೆ, ತೋಟಗಳಲ್ಲಿ ಜೇನು ಕುಟುಂಬ ಸಾಕಿ ಬೆಳೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಒಂದು ದೊಡ್ಡ ಸಮಸ್ಯೆ ಇಡಿಯ ಜಗತ್ತನ್ನೇ ಕಾಡುತ್ತಿದೆ. ಅದು […]
ಕ್ವಾಂಟಂ ಬ್ಯಾಟರಿ
ಬ್ಯಾಟರಿ ಲೋಕದಲ್ಲಿ ಕ್ರಾಂತಿ ಈಗಿನ ಕಾಲದಲ್ಲಿ ಬಹುತೇಕ ಎಲ್ಲ ಸಾಧನಗಳು ವಿದ್ಯುತ್ತಿನಿಂದ ಕೆಲಸ ಮಾಡುತ್ತವೆ. ಇದು ಮನೆಯಲ್ಲಿರುವ ವಿದ್ಯುತ್ ಪೂರೈಕೆ ಮೂಲಕ, ಸೌರಶಕ್ತಿಯಿಂದ, ಬ್ಯಾಟರಿ ಮೂಲಕ ಇರಬಹುದು. ಬ್ಯಾಟರಿ ಇಲ್ಲದ ಸಾಧನವೇ ಇಲ್ಲವೇನೋ? ಸೌರಶಕ್ತಿಯಿಂದ ಕೆಲಸ ಮಾಡುವ ಸಾಧನಗಳಲ್ಲೂ ಬ್ಯಾಟರಿಯಲ್ಲಿ ವಿದ್ಯುತ್ ಸಂಗ್ರಹವಾಗಿ ನಂತರವೇ ಬಳಕೆಗೆ ಲಭ್ಯವಾಗುತ್ತದೆ. ಬ್ಯಾಟರಿಗಳಲ್ಲಿ ಪ್ರಮುಖವಾಗಿ ಎರಡು ನಮೂನೆ. ಒಮ್ಮೆ ಬಳಸಿ ಎಸೆಯುವಂತಹವು ಹಾಗೂ ಮತ್ತೆ ಮತ್ತೆ ಚಾರ್ಜ್ ಮಾಡಿ ಬಳಸಬಹುದಾದ ರಿಚಾರ್ಜೇಬಲ್ ಬ್ಯಾಟರಿಗಳು. ರಿಚಾರ್ಜೇಬಲ್ ಬ್ಯಾಟರಿಗಳು ಹಲವು ಗಾತ್ರ, ಶಕ್ತಿಗಳಲ್ಲಿ ಬರುತ್ತವೆ. […]
ಪಾಚಿಯಿಂದ ವಿದ್ಯುತ್
ದ್ಯುತಿಸಂಶ್ಲೇಷಣೆಯಿಂದ ಕೆಲಸ ಮಾಡುವ ಬ್ಯಾಟರಿ ವಿದ್ಯುತ್ತಿನಿಂದ ಚಲಿಸುವ ಸ್ಕೂಟರ್ ಮತ್ತು ಕಾರುಗಳ ಬಗ್ಗೆ ಇದೇ ಅಂಕಣದಲ್ಲಿ ಬರೆಯುವಾಗ ವಿದ್ಯುತ್ ಶಕ್ತಿಯ ಬೇಡಿಕೆ ಎಷ್ಟು ತುಂಬ ಇದೆ ಎಂದು ಬರೆಯಲಾಗಿತ್ತು. ಈ ವಿದ್ಯುತ್ ಹಲವು ಶಕ್ತಿಗಳಲ್ಲಿ ಬೇಕಾಗಿದೆ. ಸ್ಕೂಟರು, ಕಾರು, ಇತ್ಯಾದಿ ವಾಹನಗಳನ್ನು ನಡೆಸಲು ತುಂಬ ಶಕ್ತಿಯ ಬ್ಯಾಟರಿ ಬೇಕು. ಮೊಬೈಲು, ಟ್ಯಾಬ್ಲೆಟ್ ಇತ್ಯಾದಿಗಳಿಗೆ ಸ್ವಲ್ಪ ಕಡಿಮೆ ಶಕ್ತಿ ಸಾಕು. ವಸ್ತುಗಳ ಅಂತರಜಾಲದಲ್ಲಿ ಬಳಕೆಯಾಗುವ ಬ್ಯಾಟರಿಗಳಿಗೆ ಅತಿ ಕಡಿಮೆ ಶಕ್ತಿ ಸಾಕು. ಅಂತರಜಾಲದ ಮೂಲಕ ಸಂಪರ್ಕ ಹೊಂದಿರುವಂತಹ ವಸ್ತುಗಳ […]
ಪ್ರೇರಿತ ತಪನದಿಂದ ಅಡುಗೆ
ಇಂಡಕ್ಷನ್ ಕುಕಿಂಗ್ ಅಡುಗೆ ಮಾಡಲು ಗ್ಯಾಸ್ ಸ್ಟೌವ್ ಗೊತ್ತು. ಇಲೆಕ್ಟ್ರಿಕ್ ಹೀಟರ್ ಕೂಡ ಗೊತ್ತು. ಇನ್ನೂ ಒಂದು ಇದೆ. ಅದು ಇಂಡಕ್ಷನ್ ಹೀಟರ್ ಅಥವಾ ಕುಕರ್. ಅದನ್ನು ಯುರೋಪಿನಲ್ಲಿ ಹೋಬ್ ಎಂದೂ ಕರೆಯುತ್ತಾರೆ. ಇದನ್ನು ನೀವೆಲ್ಲ ನೋಡಿರಬಹುದು. ಹಲವರು ಬಳಸಿರಲೂಬಹುದು. ಇದರಲ್ಲಿ ಒಂದು ಪ್ಲೇಟ್ ಇರುತ್ತದೆ. ಅದರ ಮೇಲೆ ಕಬ್ಬಿಣ ತಳವಿರುವ ಅಥವಾ ಕಬ್ಬಿಣಾಂಶವಿರುವ ಲೋಹದ ತಳವಿರುವ ಪಾತ್ರವನ್ನು ಇಟ್ಟು ಸ್ವಿಚ್ ಹಾಕಿದರೆ ಪಾತ್ರೆ ಬಿಸಿಯಾಗುತ್ತದೆ. ಇದನ್ನು ಯಾಕೆ ಇಂಡಕ್ಷನ್ ಹೀಟರ್ ಎನ್ನುತ್ತಾರೆ ಎಂದು ನೋಡೋಣ. ವಿದ್ಯುತ್‌ಗೂ […]