ಬ್ಯಾಟರಿ ಲೋಕದಲ್ಲಿ ಕ್ರಾಂತಿ ಈಗಿನ ಕಾಲದಲ್ಲಿ ಬಹುತೇಕ ಎಲ್ಲ ಸಾಧನಗಳು ವಿದ್ಯುತ್ತಿನಿಂದ ಕೆಲಸ ಮಾಡುತ್ತವೆ. ಇದು ಮನೆಯಲ್ಲಿರುವ ವಿದ್ಯುತ್ ಪೂರೈಕೆ ಮೂಲಕ, ಸೌರಶಕ್ತಿಯಿಂದ, ಬ್ಯಾಟರಿ ಮೂಲಕ ಇರಬಹುದು. ಬ್ಯಾಟರಿ ಇಲ್ಲದ ಸಾಧನವೇ ಇಲ್ಲವೇನೋ? ಸೌರಶಕ್ತಿಯಿಂದ ಕೆಲಸ ಮಾಡುವ ಸಾಧನಗಳಲ್ಲೂ ಬ್ಯಾಟರಿಯಲ್ಲಿ ವಿದ್ಯುತ್ ಸಂಗ್ರಹವಾಗಿ ನಂತರವೇ ಬಳಕೆಗೆ ಲಭ್ಯವಾಗುತ್ತದೆ. ಬ್ಯಾಟರಿಗಳಲ್ಲಿ ಪ್ರಮುಖವಾಗಿ ಎರಡು ನಮೂನೆ. ಒಮ್ಮೆ ಬಳಸಿ ಎಸೆಯುವಂತಹವು ಹಾಗೂ ಮತ್ತೆ ಮತ್ತೆ ಚಾರ್ಜ್ ಮಾಡಿ ಬಳಸಬಹುದಾದ ರಿಚಾರ್ಜೇಬಲ್ ಬ್ಯಾಟರಿಗಳು. ರಿಚಾರ್ಜೇಬಲ್ ಬ್ಯಾಟರಿಗಳು ಹಲವು ಗಾತ್ರ, ಶಕ್ತಿಗಳಲ್ಲಿ ಬರುತ್ತವೆ. […]
Tag: ಭೌತಶಾಸ್ತ್ರ
ಪಾಚಿಯಿಂದ ವಿದ್ಯುತ್
ದ್ಯುತಿಸಂಶ್ಲೇಷಣೆಯಿಂದ ಕೆಲಸ ಮಾಡುವ ಬ್ಯಾಟರಿ ವಿದ್ಯುತ್ತಿನಿಂದ ಚಲಿಸುವ ಸ್ಕೂಟರ್ ಮತ್ತು ಕಾರುಗಳ ಬಗ್ಗೆ ಇದೇ ಅಂಕಣದಲ್ಲಿ ಬರೆಯುವಾಗ ವಿದ್ಯುತ್ ಶಕ್ತಿಯ ಬೇಡಿಕೆ ಎಷ್ಟು ತುಂಬ ಇದೆ ಎಂದು ಬರೆಯಲಾಗಿತ್ತು. ಈ ವಿದ್ಯುತ್ ಹಲವು ಶಕ್ತಿಗಳಲ್ಲಿ ಬೇಕಾಗಿದೆ. ಸ್ಕೂಟರು, ಕಾರು, ಇತ್ಯಾದಿ ವಾಹನಗಳನ್ನು ನಡೆಸಲು ತುಂಬ ಶಕ್ತಿಯ ಬ್ಯಾಟರಿ ಬೇಕು. ಮೊಬೈಲು, ಟ್ಯಾಬ್ಲೆಟ್ ಇತ್ಯಾದಿಗಳಿಗೆ ಸ್ವಲ್ಪ ಕಡಿಮೆ ಶಕ್ತಿ ಸಾಕು. ವಸ್ತುಗಳ ಅಂತರಜಾಲದಲ್ಲಿ ಬಳಕೆಯಾಗುವ ಬ್ಯಾಟರಿಗಳಿಗೆ ಅತಿ ಕಡಿಮೆ ಶಕ್ತಿ ಸಾಕು. ಅಂತರಜಾಲದ ಮೂಲಕ ಸಂಪರ್ಕ ಹೊಂದಿರುವಂತಹ ವಸ್ತುಗಳ […]
ಜಲಜನಕ ಚಾಲಿತ ವಾಹನಗಳು
ವಾಹನಗಳಿಗೆ ಇಂಧನ ಒದಗಿಸುವುದು ದೊಡ್ಡ ಸಮಸ್ಯೆ. ಪೆಟ್ರೋಲ್ ಮತ್ತು ಡೀಸಿಲ್ ಇಂಜಿನ್‌ಗಳ ತೊಂದರೆ ಏನು ಎಂದು ಎಲ್ಲರಿಗೂ ಗೊತ್ತು. ಅವು ವಾತಾವರಣವನ್ನು ಮಲಿನಗೊಳಿಸುವುದರಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತವೆ. ಸಾಲದುದಕ್ಕೆ ಇವುಗಳ ನಿಕ್ಷೇಪ ಇನ್ನು ಕೆಲವೇ ದಶಕಗಳಲ್ಲಿ ಬಹುತೇಕ ಖಾಲಿಯಾಗುತ್ತದೆ. ಆದುದರಿಂದ ಇವುಗಳಿಗೆ ಬದಲಿ ಇಂಧನವನ್ನು ಜಗತ್ತಿನ ಎಲ್ಲ ಕಡೆ ವಿಜ್ಞಾನಿಗಳು ಹುಡುಕುತ್ತಲೇ ಇದ್ದಾರೆ. ಒಂದು ಪ್ರಮುಖ ಪರಿಹಾರ ಎಂದರೆ ವಿದ್ಯುತ್ ಚಾಲಿತ ವಾಹನಗಳು. ಇವುಗಳ ಬಗ್ಗೆ ಇದೇ ಅಂಕಣದಲ್ಲಿ ಬರೆಯಲಾಗಿತ್ತು. ವಿದ್ಯುತ್ ಚಾಲಿತ ವಾಹನಗಳ ಪ್ರಮುಖ ಸಮಸ್ಯೆ […]