ಮಾಹಿತಿ ಕಳ್ಳರ ಮೀನುಗಾರಿಕೆ ನಿಮಗೊಂದು ಇಮೈಲ್ ಬಂದಿದೆ ಎಂದಿಟ್ಟುಕೊಳ್ಳೋಣ. ನಿಮ್ಮ ಬ್ಯಾಂಕ್ ಕೆನರಾ ಬ್ಯಾಂಕ್ ಆಗಿದ್ದಲ್ಲಿ ಅದು ನಿಮ್ಮ ಬ್ಯಾಂಕಿನಿಂದಲೇ ಬಂದಂತೆ ಕಾಣಿಸುತ್ತದೆ. ಕೆನರಾ ಬ್ಯಾಂಕಿನ ಲಾಂಛನ ಎಲ್ಲ ಇರುತ್ತದೆ. ಸಾಮಾನ್ಯವಾಗಿ ಬ್ಯಾಂಕಿನಿಂದ ಬರುವ ಇತರೆ ಇಮೈಲ್‌ಗಳ ಬಣ್ಣ, ಪಠ್ಯ, ವಿನ್ಯಾಸಗಳಲ್ಲೇ ಇರುತ್ತದೆ. ನಿಮ್ಮ ಪಾಸ್‌ವರ್ಡ್‌ನಲ್ಲಿ ದೋಷವಿದೆ. ಆದುದರಿಂದ ಕೂಡಲೆ ಅದನ್ನು ಬದಲಿಸಿ ಎಂದು ಆ ಇಮೈಲ್‌ನಲ್ಲಿ ಬರೆದಿರುತ್ತದೆ. ಪಾಸ್‌ವರ್ಡ್ ಬದಲಿಸಲು ಇಲ್ಲಿ ಕ್ಲಿಕ್ ಮಾಡಿ ಎಂದಿರುತ್ತದೆ. ಇವೆಲ್ಲ ಸಾಮಾನ್ಯವಾಗಿ ಬ್ಯಾಂಕಿನಿಂದ ಇಮೈಲ್‌ನಲ್ಲಿರುವಂತೆಯೇ ಇವೆ ಎನ್ನಬಹುದು. ಆದರೆ […]