ಹಲವು ಆಪ್‌ಗಳು ಒಂದರಲ್ಲೇ ಇತ್ತೀಚೆಗೆ ನೀವು ಒಂದು ವಿಷಯ ಗಮನಿಸಿರಬಹುದು. ಅದು ಏನೆಂದರೆ ಕಿರುತಂತ್ರಾಂಶಗಳ (ಆಪ್‌ಗಳ) ಮೂಲಕ ಟಿವಿ ಕಾರ್ಯಕ್ರಮಗಳ ಹಾಗೂ ವಿಡಿಯೋಗಳ ಪ್ರಸಾರ. ವಿಡಿಯೋಗಳ ವಿಷಯಕ್ಕೆ ಬರೋಣ. ನಮಗೆ ಬೇಕಾದಾಗ ಬೇಕಾದ ಕಾರ್ಯಕ್ರಮವನ್ನು ವೀಕ್ಷಿಸುವ ಸೌಲಭ್ಯಕ್ಕೆ ವಿಡಿಯೋ ಆನ್ ಡಿಮ್ಯಾಂಡ್ (Video on Demand = VoD) ಎಂಬ ಹೆಸರಿದೆ. ಈ ಸೌಲಭ್ಯವನ್ನು ನೀಡುವ ಹಲವು ಆಪ್‌ಗಳಿವೆ. ಅವುಗಳಲ್ಲೂ ಹಲವು ನಮೂನೆಗಳಿವೆ -ಸಂಪೂರ್ಣವಾಗಿ ಹಣ ನೀಡಿದರೆ (ಅಂದರೆ ಚಂದಾದಾರರಾದರೆ) ಮಾತ್ರ ಕೆಲಸ ಮಾಡುವಂತಹವು, ಕೆಲವು ಕಾರ್ಯಕ್ರಮ […]