Gadget Loka

All about gadgtes in Kannada

Month: December 2024

ರಷ್ಯಾ ಯುಕ್ರೇನ್ ಜಾಲಸಮರ

ಅಂತರಜಾಲದಲ್ಲಿ ಸೈಬರ್ ಯುದ್ಧ ದೇಶ ದೇಶಗಳ ನಡುವೆ ಯುದ್ಧ ನಡೆಯುವಾಗ ಅವುಗಳ ನಡುವಿನ ಯುದ್ಧ ಕೇವಲ ಮಿಲಿಟರಿಗೆ ಮಾತ್ರ ಸೀಮಿತವಾಗಿರಬೇಕಾಗಿಲ್ಲ. ಈಗಿನ ಕಾಲದಲ್ಲಿ ಯುದ್ಧ ಹಲವು ಮಜಲುಗಳಲ್ಲಿ ನಡೆಯುತ್ತದೆ. ಅವುಗಳಲ್ಲಿ ಆರ್ಥಿಕ, ನೀರು, ಜೈವಿಕ ಇತ್ಯಾದಿಗಳ ಜೊತೆ ಅಂತರಜಾಲವೂ ಸೇರಿದೆ. ರಷ್ಯಾದ ಸೈನ್ಯವು ಹೇಗೆ ಯು(ಉ)ಕ್ರೇನ್‌ನ ಪೂರ್ವಭಾಗದಲ್ಲಿ ಅಂತರಜಾಲ ಸಂಪರ್ಕವನ್ನು ಹೇಗೆ ಹಾಳುಗೆಡವಿತು ಎಂಬುದನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೆವು. ಈಗ ನಾವು ಜೀವಿಸುತ್ತಿರುವುದು ಡಿಜಿಟಲ್ ಅರ್ಥಾತ್ ತಂತ್ರಜ್ಞಾನ ಯುಗದಲ್ಲಿ. ಅಂದ ಮೇಲೆ ಯುದ್ಧವು ಈ ಕ್ಷೇತ್ರದಲ್ಲೂ ನಡೆಯಬೇಕಲ್ಲವೇ? […]

ರಷ್ಯಾ – ಉಕ್ರೇನ್ ಯುದ್ಧ

ಅಂತರಜಾಲದ ಬಲಿ ರಷ್ಯಾ ದೇಶವು ಉಕ್ರೇನ್ (ಯುಕ್ರೇನ್) ದೇಶದ ಮೇಲೆ ಯುದ್ಧ ಘೋಷಣೆ ಮಾಡಿ ಧಾಳಿ ಪ್ರಾರಂಭ ಮಾಡಿರುವುದು ಈಗಾಗಲೇ ದೊಡ್ಡ ಸುದ್ದಿಯಾಗಿದೆ. ಉಕ್ರೇನ್‌ನ ರಸ್ತೆ ಸಂಪರ್ಕ, ವಿದ್ಯುತ್ ಸಂಪರ್ಕ ಇವುಗಳನ್ನು ರಷ್ಯಾವು ಹಲವು ಕಡೆ ಕತ್ತರಿಸಿದೆ. ಇವುಗಳ ಜೊತೆಗೆ ಅಲ್ಲಿಯ ಅಂತರಜಾಲ ಸಂಪರ್ಕಕ್ಕೂ ಅದು ಕತ್ತರಿ ಪ್ರಯೋಗ ಮಾಡಿದೆ. ವಿದ್ಯುತ್ ಸಂಪರ್ಕ ಮತ್ತು ರಸ್ತೆಗಳನ್ನು ಬಾಂಬ್ ದಾಳಿಯ ಮೂಲಕ ಕೆಡಿಸಬಹುದು. ಆದರೆ ಅಂತರಜಾಲ ಸಂಪರ್ಕವನ್ನು ಹೇಗೆ ಕೆಡಿಸುವುದು? ಕೇಬಲ್ ಜಾಲ ಮತ್ತು ಕಟ್ಟಡವನ್ನು ಹಾಳು ಮಾಡಿದರೆ […]

ಕನ್ನಡದ ಜಾಲತಾಣಕ್ಕೆ ಕನ್ನಡದಲ್ಲೇ ವಿಳಾಸ

ನೀವು ಯಾವುದೇ ಜಾಲತಾಣ ಅಂದರೆ ವೆಬ್‌ಸೈಟ್ ತೆರೆಯಬೇಕಾದರೆ ಏನು ಮಾಡುತ್ತೀರಿ? ಯಾವುದಾದರೊಂದು ಬ್ರೌಸರ್ (ಉದಾ -ಫಯರ್‌ಫಾಕ್ಸ್, ಕ್ರೋಮ್, ಎಡ್ಜ್) ತೆರೆದು ಅದರಲ್ಲಿ ಜಾಲತಾಣದ ವಿಳಾಸವನ್ನು ಟೈಪ್ ಮಾಡುತ್ತೀರಿ ತಾನೆ? ಒಂದೆರಡು ಜಾಲತಾಣಗಳ ವಿಳಾಸ ತಿಳಿಸಿ ನೋಡೋಣ. ನೀವು ಹೇಳಬಹುದಾದ ಉದಾಹರಣೆಗಳು –www.google.com, www.facebook.com, www.twitter.com… ಕನ್ನಡದ ಜಾಲತಾಣಗಳ ಉದಾಹರಣೆ ನೀಡಿ ಎಂದರೆ – www.vishvakannada.com, www.ejnana.com, hosadigantha.com ಇತ್ಯಾದಿ ನೀಡಬಹುದು. ಇಲ್ಲೊಂದು ವಿಷಯ ಗಮನಿಸಿದಿರಾ? ಕನ್ನಡ ಜಾಲತಾಣಗಳಿಗೂ ಅವುಗಳ ವಿಳಾಸ ಇಂಗ್ಲಿಶಿನಲ್ಲೇ ಇವೆ ಎಂದು. ಇದು ಯಾಕೆ […]

ವಾಟ್ ಎಂದರೆ ಏನು?

ಸ್ಟೀರಿಯೋ ಸಿಸ್ಟಮ್ ಕೊಳ್ಳಲು ಅಂಗಡಿಗೆ ಹೋಗಿದ್ದೀರಾ? ಅಂಗಡಿಯಾತ ಕೇಳುವ ಪ್ರಶ್ನೆ “ನಿಮಗೆ ಎಷ್ಟು ವಾಟ್‌ನ ಸಿಸ್ಟಮ್ ಬೇಕು?”. ಅಥವಾ ಆತನೇ ಒಂದೊಂದಾಗಿ ತನ್ನಲ್ಲಿರುವ ಸ್ಟೀರಿಯೋಗಳನ್ನು ತೋರಿಸುತ್ತಾ ಹೋಗುತ್ತಾನೆ. ಪ್ರತಿ ಸ್ಟೀರಿಯೋವನ್ನು ತೋರಿಸುವಾಗಲೂ ಮರೆಯದೆ ಹೇಳುವ ಮಾತು ಅದು ಎಷ್ಟು ವಾಟ್‌ನದು ಎಂದು. “ಸಾರ್, ಇದು 1000 ವಾಟ್, ಇದು 2000 ವಾಟ್,…” ಹೀಗೆ ಗುಣಗಾನ ಸಾಗುತ್ತಿರುತ್ತದೆ. ಹೆಚ್ಚಿನ ಗ್ರಾಹಕರೂ ಸ್ಟೀರಿಯೋ ಕೊಳ್ಳುವಾಗ ಮುಖ್ಯವಾಗಿ ಗಮನಿಸುವುದು ಅದು ಎಷ್ಟು ವಾಟ್‌ನದು ಎಂದು. ಈ ವಾಟ್ ಎಂದರೆ ಏನು? ವಾಟ್ […]

ಸ್ವಾಮಿ ವಿವೇಕಾನಂದ ಮತ್ತು ವಿಜ್ಞಾನ

19ನೆಯ ಶತಮಾನದ ಕೊನೆಯ ಭಾಗ ಮತ್ತು 20ನೆಯ ಶತಮಾನದಲ್ಲಿ ವಿಜ್ಞಾನವು ಅತಿ ವೇಗವಾಗಿ ಬೆಳೆಯಿತು. ಐನ್‌ಸ್ಟೈನ್ ಅವರು ವಸ್ತು ಮತ್ತು ಶಕ್ತಿ ಇವುಗಳ ನಡುವಿನ ಸಂಬಂಧವನ್ನು 1905ರಲ್ಲಿ ಸಮೀಕರಣದ ಮೂಲಕ ತೋರಿಸಿಕೊಟ್ಟರು. ಆದರೆ ಇದಕ್ಕಿಂತ ಸುಮಾರು 15 ವರ್ಷಗಳ ಹಿಂದೆಯೇ ಸ್ವಾಮಿ ವಿವೇಕಾನಂದರು ಈ ಬಗ್ಗೆ ಬರೆದಿದ್ದರು. ಅವರಿಗೆ ತಾವು ಹೇಳಬೇಕಾದುದನ್ನು ವಿಜ್ಞಾನ ಮತ್ತು ಗಣಿತದ ಸಮೀಕರಣಗಳ ಮೂಲಕ ಹೇಳಲು ತಿಳಿದಿರಲಿಲ್ಲ. 1893ರಲ್ಲಿ ಸ್ವಾಮಿ ವಿವೇಕಾನಂದರು ಅಮೆರಿಕಾದ ಶಿಕಾಗೋ ನಗರದಲ್ಲಿ ಪ್ರಪಂಚದ ಹಲವು ದೇಶಗಳ ಪ್ರತಿನಿಧಿಗಳು ಸೇರಿ […]

ಸಹಜ ಭಾಷಾ ಸಂಸ್ಕರಣ

ಡಿಜಿಟಲ್ ಲೋಕದಲ್ಲಿ ನಮ್ಮ ಭಾಷೆ “ನರೇಂದ್ರ ಮೋದಿಯವರು ವಾರಣಾಸಿಗೆ ಭೇಟಿ ನೀಡಿದರು” “ಇವತ್ತು ಮಳೆ ಬಂದಿದೆ” ದೈನಂದಿನ ಜನಜೀವನದಲ್ಲಿ ನಾವು ಪ್ರತಿನಿತ್ಯ ಇಂತಹ ಹಲವಾರು ವಾಕ್ಯಗಳನ್ನು ಓದುತ್ತಿರುತ್ತೇವೆ ಅಥವಾ ಕೇಳುತ್ತಿರುತ್ತೇವೆ. ಇದು ಮಾಹಿತಿಯುಗ. ಈ ಮಾಹಿತಿಯ ಪ್ರಮುಖ ಅಂಗ ಪಠ್ಯರೂಪದಲ್ಲಿದೆ ಅಂದರೆ ವಾಕ್ಯಗಳು. ವಾಕ್ಯಗಳು ಪದಗಳಿಂದಾಗಿವೆ. ಈ ವಾಕ್ಯಗಳನ್ನು ನಮ್ಮ ಮೆದುಳು ಸಹಜವಾಗಿಯೇ ಪದಗಳಾಗಿ ವಿಂಗಡಿಸಿ ಅವುಗಳ ಅರ್ಥವನ್ನು ವಿಶ್ಲೀಷಿಸುತ್ತದೆ. ಎಲ್ಲ ವಾಕ್ಯಗಳನ್ನು ಓದಿ ಇಡಿಯ ಲೇಖನದ ಒಟ್ಟು ಸಾರಾಂಶವನ್ನು ಮೆದುಳು ಗ್ರಹಿಸುತ್ತದೆ. ಈ ಪ್ರಕ್ರಿಯೆ ಮಾನವರಲ್ಲಿ […]

ಕಲಿಕಾರಂಜನೆ

ಶಿಕ್ಷಣದ ಜೊತೆ ಮನರಂಜನೆ ಸೇರಿದಾಗ ಮಾಧ್ಯಮಿಕ ಶಾಲೆಯ ಎಂಟನೆಯ ತರಗತಿ. ಖಗೋಳಶಾಸ್ತ್ರದ ಪಾಠ ನಡೆಯುತ್ತಿದೆ. ಅಧ್ಯಾಪಕರು ಸೌರವ್ಯೂಹದ ಬಗ್ಗೆ ಪಾಠ ಮಾಡುತ್ತಿದ್ದಾರೆ. ಪ್ಲೂಟೋ ಮತ್ತು ನೆಪ್ಚೂನ್‌ಗಳು ಸೂರ್ಯನ ಸುತ್ತುವ ಕಕ್ಷೆಗಳ ವೈಚಿತ್ರ್ಯವನ್ನು ವಿವರಿಸುತ್ತಿದ್ದಾರೆ. ೧೯೭೯ರಿಂದ ೧೯೯೯ರ ತನಕ ಪ್ಲೂಟೋವು ಭೂಮಿಗೆ ನೆಪ್ಚೂನ್‌ಗಿಂತ ಸಮೀಪವಾಗಿತ್ತು. ಈಗ ನೆಪ್ಚೂನ್ ಹತ್ತಿರ ಬಂದಿದೆ. ಇದಕ್ಕೆ ಕಾರಣವನ್ನು ವಿವರಿಸುತ್ತಿದ್ದಂತೆ ಚೂಟಿ ಹುಡುಗನೊಬ್ಬನಿಂದ ಪ್ರಶ್ನೆ ಬಂತು “ಹಾಗಾದರೆ ಅವುಗಳು ಒಂದಕ್ಕೊಂದು ಪರಸ್ಪರ ಢಿಕ್ಕಿ ಹೊಡೆಯುವುದಿಲ್ಲವೇ?”. ಅದು ಅಸಾಧ್ಯ ಎಂಬುದನ್ನು ವಿವರಿಸಲು ಅಧ್ಯಾಪಕರು ಶತಾಯಗತಾಯ ಪ್ರಯತ್ನಿಸಿದರು. […]

ಕೆಡಲೆಂದೇ ವಿನ್ಯಾಸ ಮಾಡುವುದು

ಯೋಜಿತ ಹಾಳಾಗುವಿಕೆ ಸುಮಾರು ದಶಕಗಳ ಕಾಲ ಹಿಂದೆ ಹೋಗೋಣ. ಒಂದಾನೊಂದು ಕಾಲದಲ್ಲಿ ಬಜಾಜ್ ಚೇತಕ್ ಎಂಬ ಸ್ಕೂಟರ್ ಇತ್ತು. ಅದಕ್ಕೆ ಅತ್ಯಂತ ಹೆಚ್ಚು ಬೇಡಿಕೆ ಇತ್ತು. ಅದನ್ನು ಕೊಳ್ಳಲು ವರ್ಷಗಳ ಕಾಲ ಕಾಯಬೇಕಿತ್ತು. ಅದನ್ನು ಕೊಂಡವರು ಹತ್ತು ಹದಿನೈದು ವರ್ಷ ಬಳಸಿ ನಂತರ ಬಹುತೇಕ ಕೊಂಡ ಬೆಲೆಗೇ ಮಾರುತ್ತಿದ್ದರು. ಆ ಸ್ಕೂಟರ್ ನಂತರವೂ ಹತ್ತು ವರ್ಷಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡುತ್ತಿತ್ತು. ಆಗಾಗ ಸರ್ವಿಸ್ ಮಾಡಿಸಿಕೊಂಡಿದ್ದರೆ ಸಾಕಿತ್ತು. ನನ್ನಲ್ಲಿದ್ದ ಬಜಾಜ್ ಸ್ಕೂಟರನ್ನು ನಾನೇ ತಕ್ಕ ಮಟ್ಟಿಗೆ ರಿಪೇರಿ […]

ಗೂಢನಾಣ್ಯಗಳ ನಿಗೂಢ ಜಗತ್ತು

ಕ್ರಿಪ್ಟೊಕರೆನ್ಸಿಗಳ ಕಿರು ಪರಿಚಯ “ಬಿಟ್ ಕಾಯಿನ್ ಹಗರಣದ ಆರೋಪಿ 5000 ಬಿಟ್ ಕಾಯಿನ್ ದೋಚಿದ್ದನೆಂದು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ  ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ  ಹೇಳಿದ್ದಾರೆಂದು ಪತ್ರಿಕೆಗಳು ವರದಿ ಮಾಡಿವೆ. ಕದ್ದ ಆ ಬಿಟ್ ಕಾಯಿನ್ ಎಲ್ಲಿದೆ? ಅದನ್ನು ಜಪ್ತಿ ಮಾಡಲಾಗಿದೆಯೇ? ಇಲ್ಲವೇ ಅವು ಇನ್ನೂ ಪತ್ತೆಯಾಗಿಲ್ಲವೇ?”          -ಇವು ಕರ್ನಾಟಕದ ಖ್ಯಾತ ರಾಜಕಾರಣಿಯೊಬ್ಬರ ಹೇಳಿಕೆ. ಇದನ್ನು ಇಲ್ಲಿ ನೆನಪಿಸಿಕೊಳ್ಳಲು ಕಾರಣವಿದೆ. ಈ ಹೇಳಿಕೆಯನ್ನು ಓದಿದರೆ ಈ ಬಿಟ್‌ಕಾಯಿನ್ ಎಂಬುದು ಯಾವುದೋ ಒಂದು ಹೊಸ ನಮೂನೆಯ ನಾಣ್ಯ, ಅದನ್ನು […]

ಕೊಲ್‌ಸ್ವಂತೀ

ಸ್ವಂತೀಯಿಂದಾಗುವ ಅನಾಹುತಗಳು ಪತ್ರಿಕೆಗಳಲ್ಲಿ ಆಗಾಗ ಓದುತ್ತಿರುತ್ತೇವೆ. ಸ್ವಂತೀ (selfie) ತೆಗೆಯಲು ಹೋಗಿ ಪ್ರಾಣ ಕಳೆದುಕೊಂಡ ಸುದ್ದಿಗಳು. ಇಬ್ಬರು ಯುವಕರು ಚಾರ್ಮಾಡಿ ಘಾಟ್‌ನಲ್ಲಿ ಜಲಪಾತದ ಪಕ್ಕ ನಿಂತುಕೊಂಡು ಸ್ವಂತೀ ತೆಗೆಯಲು ಹೋಗಿ ನೀರಿಗೆ ಬಿದ್ದು ಪ್ರಾಣ ಕಳೆದುಕೊಂಡರು. ಇಬ್ಬರು ಯುವತಿಯರು ರೈಲ್ವೇ ಹಳಿಗಳ ಪಕ್ಕ ನಿಂತುಕೊಂಡು ಸ್ವಂತೀ ತೆಗೆಯುತ್ತಿದ್ದಾಗ ಹಿಂದಿನಿಂದ ರೈಲು ಬಂದುದನ್ನು ಗಮನಿಸದೆ ರೈಲಿನಡಿಗೆ ಬಿದ್ದು ಮೃತರಾದರು. ಇಂತಹ ಸುದ್ದಿಗಳು ಆಗಾಗ ಬರುತ್ತಿರುತ್ತವೆ. ಕೊಲ್ಲುವ ಸ್ವಂತೀಯಿಂದಾಗಿ ಪ್ರಪಂಚಾದ್ಯಂತ ನೂರಾರು ಮಂದಿ ಜೀವ ಕಳೆದುಕೊಂಡಿದ್ದಾರೆ. ಇದಕ್ಕೆ ಇಂಗ್ಲಿಷಿನಲ್ಲಿ killer […]

Gadget Loka © 2018