Gadget Loka

All about gadgtes in Kannada

ಏಸುಸ್ ಎಕ್ಸ್‌ಪರ್ಟ್‌ಬುಕ್ ಬಿ5 ಫ್ಲಿಪ್

360 ಡಿಗ್ರಿ ಲ್ಯಾಪ್‌ಟಾಪ್   ಇತ್ತೀಚೆಗೆ ಬಹುತೇಕ ಜನರು ಮನೆಯಿಂದಲೇ ಕೆಲಸ ಮಾಡುತ್ತಿರುವುದರಿಂದ ಲ್ಯಾಪ್‌ಟಾಪ್‌ಗಳಿಗೆ ಬೇಡಿಕೆ ಏರಿದೆ. ಲ್ಯಾಪ್‌ಟಾಪ್‌ಗಳಲ್ಲಿ ಹಲವು ನಮೂನೆಗಳಿವೆ. ಒಂದು ನಮೂನೆಯ ಲ್ಯಾಪ್‌ಟಾಪ್‌ಗಳಲ್ಲಿ ಸ್ಪರ್ಶಸಂವೇದಿ ಪರದೆ ಇರುತ್ತದೆ. ಇಂತಹವುಗಳಲ್ಲೂ ಕೆಲವು ನಮೂನೆಗಳಲ್ಲಿ ಈ ಪರದೆಯನ್ನು ಪೂರ್ತಿ ಹಿಂದಕ್ಕೆ ತಿರುಗಿಸಿ ಲ್ಯಾಪ್‌ಟಾಪ್ ಅನ್ನು ಟ್ಯಾಬ್ಲೆಟ್ ಆಗಿ ಬದಲಾಯಿಸಬಹುದು. ಅಂತಹ ಒಂದು ಲ್ಯಾಪ್‌ಟಾಪ್ ಏಸುಸ್‌ ಎಕ್ಸ್‌ಪರ್ಟ್‌ಬುಕ್ ಬಿ5 ಫ್ಲಿಪ್ (Asus ExpertBook B5 Flip). ಈ ಸಂಚಿಕೆಯಲ್ಲಿ ಅದರ ವಿಮರ್ಶೆ ನೋಡೋಣ.   ಗುಣವೈಶಿಷ್ಟ್ಯಗಳು   ಪ್ರೋಸೆಸರ್ […]

ಏಸುಸ್ ಸಿ223ಎನ್

ಆನ್‌ಲೈನ್ ತರಗತಿಗಳಿಗಾಗಿ ಒಂದು ಕ್ರೋಮ್‌ಬುಕ್   ಕೋವಿಡ್-19 ರಿಂದಾಗಿ ಹಲವು ಕ್ಷೇತ್ರಗಳಲ್ಲಿ ಗಣನೀಯವಾಗಿ ಬದಲಾವಣೆಯಾಗಿದೆ. ಅವುಗಳಲ್ಲಿ ಒಂದು ಪ್ರಮುಖವಾದ ಬದಲಾವಣೆ ಎಂದರೆ ಬಹುತೇಕ ಸಭೆ, ಗೋಷ್ಠಿ, ತರಗತಿಗಳು ಎಲ್ಲ ಆನ್‌ಲೈನ್ ಆಗಿರುವುದು. ಶಿಕ್ಷಣ ಕ್ಷೇತ್ರದಲ್ಲಂತೂ ಇದು ತುಂಬ ದೊಡ್ಡ ಬದಲಾವಣೆಯನ್ನೇ ತಂದಿದೆ. ಆನ್‌ಲೈನ್ ತರಗತಿಗಳಿಂದಾಗಿ ಕಡಿಮೆ ಬೆಲೆಗೆ ದೊರಕಬಹುದಾದ ಲ್ಯಾಪ್‌ಟಾಪ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಲ್ಯಾಪ್‌ಟಾಪ್‌ಗಳಿಗೆ ಹೆಚ್ಚಿನ ಶಕ್ತಿಯ ಅಗತ್ಯವಿಲ್ಲ. ಯಾಕೆಂದರೆ ಇದರ ಕೆಲಸವೆಲ್ಲ ಅಂತರಜಾಲದ ಮೂಲಕವೇ ಆಗುತ್ತದೆ, ಒಂದು ಬ್ರೌಸರ್ ಇದ್ದರೆ ಸಾಕು. ಈ ನಮೂನೆಯ […]

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 22 5G

5ಜಿ ಬೇಕೆನ್ನುವವರಿಗಾಗಿ   ಗ್ಯಾಜೆಟ್‌ಲೋಕದಲ್ಲಿ ಸ್ಯಾಮ್‌ಸಂಗ್‌ನವರ ಹಲವಾರು ಫೋನ್‌ಗಳ ವಿಮರ್ಶೆಯನ್ನು ಮಾಡಿದ್ದೇವೆ. ಇತ್ತೀಚೆಗೆ ಅವರು ಸ್ವಲ್ಪ ಕಡಿಮೆ ಬೆಲೆಯ ಶ್ರೇಣಿಯಲ್ಲಿ 5ಜಿ ಸಂಪರ್ಕ ಇರುವ ಫೋನನ್ನು ಬಿಡುಗಡೆ ಮಾಡಿದ್ದಾರೆ. ಅದುವೆ ನಾವು ಈ ಸಲ ವಿಮರ್ಶೆ ಮಾಡುತ್ತಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ22 5ಜಿ (Samsung Galaxy A22 5G) ಫೋನ್.   ಗುಣವೈಶಿಷ್ಟ್ಯಗಳು   ಪ್ರೋಸೆಸರ್ 8 x 2.2 ಗಿಗಾಹರ್ಟ್ಸ್ ಪ್ರೋಸೆಸರ್ (Dimensity 700 5G) ಗ್ರಾಫಿಕ್ಸ್ ಪ್ರೋಸೆಸರ್ Mali-G57 ಮೆಮೊರಿ 6 + 128 […]

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 32

ಕಡಿಮೆ ಬೆಲೆಯ ಇನ್ನೊಂದು ಫೋನ್   ಸ್ಯಾಮ್‌ಸಂಗ್‌ ಮೊಬೈಲ್ ಫೋನ್‌ಗಳನ್ನು ಹಲವು ಶ್ರೇಣಿಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ. ಎಲ್ಲಕ್ಕಿಂತ ಮೇಲ್ದರ್ಜೆಯ ಎಸ್ ಶ್ರೇಣಿ, ಸುಂದರ ವಿನ್ಯಾಸಕ್ಕೆ ಹೆಸರಾದ ಎ ಶ್ರೇಣಿ, ಅಂತರಜಾಲ ಮಳಿಗೆಗಳ ಮೂಲಕ ಮಾತ್ರವೇ ದೊರೆಯುವ ಎಂ ಶ್ರೇಣಿ, ಹೀಗೆ ಇವೆ. ಭಾರತದಲ್ಲಿ ಸ್ಯಾಮ್‌ಸಂಗ್‌ಗೆ ಅದರದೇ ಆದ ಗಿರಾಕಿಗಳಿದ್ದಾರೆ. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಮಧ್ಯಮ ದರ್ಜೆಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ32 (Samsung Galaxy M32) ಫೋನ್.   ಗುಣವೈಶಿಷ್ಟ್ಯಗಳು   ಪ್ರೋಸೆಸರ್ 8 […]

ಆಮ್ಲಜನಕ ಸಾಂದ್ರಕಗಳು

ಉಸಿರಾಡಲು ಕಷ್ಟವಾದವರಿಗೆ ಆಪದ್ಬಾಂಧವ         ಕರೊನಾವೈರಸ್‌ನಿಂದ ಆಗುವ ಕೋವಿಡ್-19 ಕಾಯಿಲೆ ಸಂದರ್ಭದಲ್ಲಿ ಕೇಳಿಬರುತ್ತಿರುವ ಒಂದು ವಿಷಯವೆಂದರೆ ಆಮ್ಲಜನಕದ ಪೂರೈಕೆಯ ಕೊರತೆ. ಕೋವಿಡ್ ರೋಗಿಗಳಿಗೆ ಮಾತ್ರವಲ್ಲ, ಇನ್ನೂ ಹಲವಾರು ಕಾಯಿಲೆಯವರಿಗೆ ಉಸಿರಾಟದ ತೊಂದರೆಯಿದ್ದರೆ ಆಮ್ಲಜನಕವನ್ನು ನೀಡಬೇಕಾಗುತ್ತದೆ. ವಾತಾವರಣದಲ್ಲಿ 78% ಸಾರಜನಕ ಮತ್ತು 21% ಆಮ್ಲಜನಕ ಇರುತ್ತವೆ. ಸಾಮಾನ್ಯವಾದ ಉಸಿರಾಟದಲ್ಲಿ ನಾವು ಉಸಿರಾಡುವಾಗ ಶ್ವಾಸಕೋಶದ ಒಳಹೋಗುವ ಗಾಳಿಯಲ್ಲಿರುವ 21% ಆಮ್ಲಜನಕ ಮನುಷ್ಯರಿಗೆ ಸಾಕಾಗುತ್ತದೆ. ಕೋವಿಡ್ ಮತ್ತು ಇತರೆ ಕೆಲವು ಕಾಯಿಲೆಗಳಲ್ಲಿ ಉಸಿರಾಟದ ತೊಂದರೆಯಿಂದಾಗಿ ಬೇಕಾದಷ್ಟು ಗಾಳಿ ಒಳಹೋಗುವುದಿಲ್ಲ. ಆಗ […]

ಕ್ರಾಸ್‌ಬೀಟ್ಸ್ ಇಗ್ನೈಟ್ ಎಸ್2

ಕೈಗೆಟುಕುವ ಬೆಲೆಗೆ ಭಾರತೀಯ ಸ್ಮಾರ್ಟ್‌ವಾಚ್   ಸ್ಮಾರ್ಟ್‌ವಾಚ್ ಅಂದರೆ ಬುದ್ಧಿವಂತ ಕೈಗಡಿಯಾರಗಳು. ಇವು ಮಾಮೂಲಿ ಡಿಜಿಟಲ್ ವಾಚ್‌ಗಳಿಗಿಂತ ಭಿನ್ನ. ಇವು ಸಮಯ, ದಿನ, ವಾರ, ಇತ್ಯಾದಿ ತೋರಿಸುವ ಜೊತೆ ಇನ್ನೂ ಹಲವಾರು ಕೆಲಸಗಳನ್ನು ಮಾಡುತ್ತವೆ. ಮುಖ್ಯವಾಗಿ ಇವು ಕೈಗಡಿಯಾರ ಮತ್ತು ಆರೋಗ್ಯಪಟ್ಟಿ ಇವೆರಡರ ಕೆಲಸಗಳನ್ನೂ ಮಾಡುತ್ತವೆ. ಇಂತಹ ಸ್ಮಾರ್ಟ್‌ವಾಚ್‌ಗಳು ಮಾರುಕಟ್ಟೆಯಲ್ಲಿ ಹಲವಾರಿವೆ. ಅಂತಹ ಒಂದು ಸ್ಮಾರ್ಟ್‌ವಾಚ್ ಕ್ರಾಸ್‌ಬೀಟ್ಸ್ ಇಗ್ನೈಟ್ ಎಸ್2 (Crossbeats Ignite S2). ಇದರ ಒಂದು ಪ್ರಮುಖ ವೈಶಿಷ್ಟ್ಯ ಎಂದರೆ ಇದು ಭಾರತೀಯ ಉತ್ಪನ್ನ. ಈ […]

ಬ್ಲಾಕ್‌ಚೈನ್‌

ಗೂಢನಾಣ್ಯ ವ್ಯವಹಾರದ ಬೆನ್ನೆಲುಬು ಜಾಲ   ಬಿಟ್‌ಕಾಯಿನ್ ಅಂದರೆ ಒಂದು ರೀತಿಯ ಗೂಢನಾಣ್ಯ. ಹಲವು ನಮೂನೆಯ ಗೂಢನಾಣ್ಯಗಳಿವೆ. ಅದರಲ್ಲಿ ಮೊದಲನೆಯದು ಬಿಟ್‌ಕಾಯಿನ್. ಈ ಬಿಟ್‌ಕಾಯಿನ್ ವ್ಯವಹಾರವನ್ನು ವಿಕೇಂದ್ರಿತ ಹಣಕಾಸು ವ್ಯವಸ್ಥೆ ಎಂದೂ ಕರೆಯಬಹುದು. ಈ ವಿಕೇಂದ್ರಿತ ವ್ಯವಸ್ಥೆ ಕೆಲಸ ಮಾಡುವುದು ಬ್ಲಾಕ್‌ಚೈನ್ ಎಂಬ ಜಾಲವನ್ನು ಬಳಸಿಕೊಂಡು. ಏನಿದು ಬ್ಲಾಕ್‌ಚೈನ್? ಈ ಬಗ್ಗೆ ಈ ಸಂಚಿಕೆಯಲ್ಲಿ ಇನ್ನಷ್ಟು ತಿಳಿಯೋಣ.   ಯಾವುದೇ ಹಣಕಾಸು ವ್ಯವಹಾರದಲ್ಲಿ ಪ್ರಮುಖವಾಗಿರುವುದು ಲೆಡ್ಜರ್ ಅಂದರೆ ಖಾತಾಪುಸ್ತಕ. ಡಿಜಿಟಲ್ ವ್ಯವಹಾರದಲ್ಲಿ ಈ ಲೆಡ್ಜರ್ ಕೂಡ ಡಿಜಿಟಲ್ […]

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 52

ಒಂದು ಸುಂದರ ಫೋನ್ ಸ್ಯಾಮ್‌ಸಂಗ್‌ನವರು ಹಲವು ಶ್ರೇಣಿಗಳಲ್ಲಿ ಫೋನ್‌ಗಳನ್ನು ನಿರಂತರವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ. ಕೆಲವೊಮ್ಮೆ ಒಂದು ಫೋನಿಗೂ ಇನ್ನೊಂದಕ್ಕೂ ಅದರ ಗುಣವೈಶಿಷ್ಟ್ಯದಲ್ಲಿ ಸ್ವಲ್ಪವೇ ವ್ಯತ್ಯಾಸ ಇರುತ್ತದೆ. ಕೊಳ್ಳುವವರಿಗೂ ಈ ರೀತಿ ಫೋನ್‌ಗಳ ಸಾಗರದಲ್ಲಿ ಬೇಕಾದುದನ್ನು ಆಯ್ಕೆ ಮಾಡುವುದು ಕೆಲವರಿಗೆ ಕಷ್ಟವಾಗುತ್ತದೆ. ಸ್ಯಾಮ್‌ಸಂಗ್‌ನವ ಎ ಶ್ರೇಣಿಯ ಫೋನ್‌ಗಳು ಸುಂದರ ವಿನ್ಯಾಸಕ್ಕೆ ಹೆಸರಾಗಿವೆ. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಅಂತಹ ಒಂದು ಪೋನ್. ಅದುವೇ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ52 (Samsung Galaxy A52). ಗುಣವೈಶಿಷ್ಟ್ಯಗಳು ಪ್ರೋಸೆಸರ್ 2 […]

ಬಿಟ್‌ಕಾಯಿನ್‌

ಈ ಗೂಢನಾಣ್ಯ ಹೇಗೆ ಕೆಲಸ ಮಾಡುತ್ತದೆ?         ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ತುಂಬ ಸುದ್ದಿಯಲ್ಲಿರುವ ಒಂದು ಪದ ಬಿಟ್‌ಕಾಯಿನ್. ಒಂದು ಕಾಲದಲ್ಲಿ ಕಂಪೆನಿಗಳ ಷೇರುಗಳು ಅದರ ಮಾರುಕಟ್ಟೆ ಬಗ್ಗೆ ತುಂಬ ಚರ್ಚೆಗಳು ನಡೆಯುತ್ತಿದ್ದವು. ಈಗ ಆ ಸ್ಥಾನವನ್ನು ಬಿಟ್‌ಕಾಯಿನ್ ಮತ್ತು ಬ್ಲಾಕ್‌ಚೈನ್‌ಗಳು ಆಕ್ರಮಿಸಿವೆ. ಏನಿದು ಬಿಟ್‌ಕಾಯಿನ್? ಈ ಲೇಖನದಲ್ಲಿ ಅದರ ಬಗ್ಗೆ ಒಂದು ಕಿರುಪರಿಚಯವನ್ನು ಮಾಡಲು ಪ್ರಯತ್ನಿಸಲಾಗಿದೆ.   ಮೊದಲಿಗೆ ಸ್ವಲ್ಪ ಪೀಠಿಕೆ. ಈಗಿನ ಹಣಕಾಸು ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ? ಹಾಗೆ ಯಾಕೆ […]

ವಿದ್ಯುತ್‌ ಚಾಲಿತ ಸ್ಕೂಟರುಗಳು

ಹೇಗೆ ಕೆಲಸ ಮಾಡುತ್ತವೆ?         ಹಿಂದಿನ ಸಂಚಿಕೆಯಲ್ಲಿ ವಿದ್ಯುತ್ ಚಾಲಿತ ಕಾರುಗಳ ಬಗ್ಗೆ ತಿಳಿದುಕೊಂಡೆವು. ಈ ಸಲ ಅವುಗಳ ಕುಟುಂಬಕ್ಕೇ ಸೇರಿದ ವಿದ್ಯುತ್ ಚಾಲಿತ ಸ್ಕೂಟರುಗಳ ಬಗ್ಗೆ ತಿಳಿದುಕೊಳ್ಳೋಣ. ಹಾಗೆ ನೋಡಿದರೆ, ಸ್ಕೂಟರುಗಳ ಬಗ್ಗೆ ತಿಳಿದುಕೊಂಡು ನಂತರ ಕಾರುಗಳ ಬಗ್ಗೆ ತಿಳಿದುಕೊಳ್ಳಲು ಹೋಗಬೇಕಿತ್ತು. ಇರಲಿ. ಅಡ್ಡಿಯಿಲ್ಲ.   ವಿದ್ಯುತ್ ಚಾಲಿತ ಸ್ಕೂಟರುಗಳು ನಗರ ಸಾರಿಗೆಗೆ ಸೀಮಿತ ಎನ್ನಬಹುದು. ವಿದ್ಯುತ್ ಚಾಲಿತ ಕಾರುಗಳಾದರೆ ನಗರ ಸಾರಿಗೆಗೆ ಸೀಮಿತ ಎಂದರೆ ಜನರಿಗೆ ಸ್ವಲ್ಪ ಕಿರಿಕಿರಿಯಾಗಬಹುದು. ಪೆಟ್ರೋಲ್ ಚಾಲಿತ ಸ್ಕೂಟರುಗಳೂ […]

Gadget Loka © 2018