ಗೂಢನಾಣ್ಯ ವ್ಯವಹಾರದ ಬೆನ್ನೆಲುಬು ಜಾಲ ಬಿಟ್‌ಕಾಯಿನ್ ಅಂದರೆ ಒಂದು ರೀತಿಯ ಗೂಢನಾಣ್ಯ. ಹಲವು ನಮೂನೆಯ ಗೂಢನಾಣ್ಯಗಳಿವೆ. ಅದರಲ್ಲಿ ಮೊದಲನೆಯದು ಬಿಟ್‌ಕಾಯಿನ್. ಈ ಬಿಟ್‌ಕಾಯಿನ್ ವ್ಯವಹಾರವನ್ನು ವಿಕೇಂದ್ರಿತ ಹಣಕಾಸು ವ್ಯವಸ್ಥೆ ಎಂದೂ ಕರೆಯಬಹುದು. ಈ ವಿಕೇಂದ್ರಿತ ವ್ಯವಸ್ಥೆ ಕೆಲಸ ಮಾಡುವುದು ಬ್ಲಾಕ್‌ಚೈನ್ ಎಂಬ ಜಾಲವನ್ನು ಬಳಸಿಕೊಂಡು. ಏನಿದು ಬ್ಲಾಕ್‌ಚೈನ್? ಈ ಬಗ್ಗೆ ಈ ಸಂಚಿಕೆಯಲ್ಲಿ ಇನ್ನಷ್ಟು ತಿಳಿಯೋಣ. ಯಾವುದೇ ಹಣಕಾಸು ವ್ಯವಹಾರದಲ್ಲಿ ಪ್ರಮುಖವಾಗಿರುವುದು ಲೆಡ್ಜರ್ ಅಂದರೆ ಖಾತಾಪುಸ್ತಕ. ಡಿಜಿಟಲ್ ವ್ಯವಹಾರದಲ್ಲಿ ಈ ಲೆಡ್ಜರ್ ಕೂಡ ಡಿಜಿಟಲ್ […]