ಉಸಿರಾಡಲು ಕಷ್ಟವಾದವರಿಗೆ ಆಪದ್ಬಾಂಧವ ಕರೊನಾವೈರಸ್‌ನಿಂದ ಆಗುವ ಕೋವಿಡ್-19 ಕಾಯಿಲೆ ಸಂದರ್ಭದಲ್ಲಿ ಕೇಳಿಬರುತ್ತಿರುವ ಒಂದು ವಿಷಯವೆಂದರೆ ಆಮ್ಲಜನಕದ ಪೂರೈಕೆಯ ಕೊರತೆ. ಕೋವಿಡ್ ರೋಗಿಗಳಿಗೆ ಮಾತ್ರವಲ್ಲ, ಇನ್ನೂ ಹಲವಾರು ಕಾಯಿಲೆಯವರಿಗೆ ಉಸಿರಾಟದ ತೊಂದರೆಯಿದ್ದರೆ ಆಮ್ಲಜನಕವನ್ನು ನೀಡಬೇಕಾಗುತ್ತದೆ. ವಾತಾವರಣದಲ್ಲಿ 78% ಸಾರಜನಕ ಮತ್ತು 21% ಆಮ್ಲಜನಕ ಇರುತ್ತವೆ. ಸಾಮಾನ್ಯವಾದ ಉಸಿರಾಟದಲ್ಲಿ ನಾವು ಉಸಿರಾಡುವಾಗ ಶ್ವಾಸಕೋಶದ ಒಳಹೋಗುವ ಗಾಳಿಯಲ್ಲಿರುವ 21% ಆಮ್ಲಜನಕ ಮನುಷ್ಯರಿಗೆ ಸಾಕಾಗುತ್ತದೆ. ಕೋವಿಡ್ ಮತ್ತು ಇತರೆ ಕೆಲವು ಕಾಯಿಲೆಗಳಲ್ಲಿ ಉಸಿರಾಟದ ತೊಂದರೆಯಿಂದಾಗಿ ಬೇಕಾದಷ್ಟು ಗಾಳಿ ಒಳಹೋಗುವುದಿಲ್ಲ. ಆಗ […]
Category: ಲೇಖನ
Article about gadgets
ಬ್ಲಾಕ್‌ಚೈನ್
ಗೂಢನಾಣ್ಯ ವ್ಯವಹಾರದ ಬೆನ್ನೆಲುಬು ಜಾಲ ಬಿಟ್‌ಕಾಯಿನ್ ಅಂದರೆ ಒಂದು ರೀತಿಯ ಗೂಢನಾಣ್ಯ. ಹಲವು ನಮೂನೆಯ ಗೂಢನಾಣ್ಯಗಳಿವೆ. ಅದರಲ್ಲಿ ಮೊದಲನೆಯದು ಬಿಟ್‌ಕಾಯಿನ್. ಈ ಬಿಟ್‌ಕಾಯಿನ್ ವ್ಯವಹಾರವನ್ನು ವಿಕೇಂದ್ರಿತ ಹಣಕಾಸು ವ್ಯವಸ್ಥೆ ಎಂದೂ ಕರೆಯಬಹುದು. ಈ ವಿಕೇಂದ್ರಿತ ವ್ಯವಸ್ಥೆ ಕೆಲಸ ಮಾಡುವುದು ಬ್ಲಾಕ್‌ಚೈನ್ ಎಂಬ ಜಾಲವನ್ನು ಬಳಸಿಕೊಂಡು. ಏನಿದು ಬ್ಲಾಕ್‌ಚೈನ್? ಈ ಬಗ್ಗೆ ಈ ಸಂಚಿಕೆಯಲ್ಲಿ ಇನ್ನಷ್ಟು ತಿಳಿಯೋಣ. ಯಾವುದೇ ಹಣಕಾಸು ವ್ಯವಹಾರದಲ್ಲಿ ಪ್ರಮುಖವಾಗಿರುವುದು ಲೆಡ್ಜರ್ ಅಂದರೆ ಖಾತಾಪುಸ್ತಕ. ಡಿಜಿಟಲ್ ವ್ಯವಹಾರದಲ್ಲಿ ಈ ಲೆಡ್ಜರ್ ಕೂಡ ಡಿಜಿಟಲ್ […]
ಬಿಟ್‌ಕಾಯಿನ್
ಈ ಗೂಢನಾಣ್ಯ ಹೇಗೆ ಕೆಲಸ ಮಾಡುತ್ತದೆ? ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ತುಂಬ ಸುದ್ದಿಯಲ್ಲಿರುವ ಒಂದು ಪದ ಬಿಟ್‌ಕಾಯಿನ್. ಒಂದು ಕಾಲದಲ್ಲಿ ಕಂಪೆನಿಗಳ ಷೇರುಗಳು ಅದರ ಮಾರುಕಟ್ಟೆ ಬಗ್ಗೆ ತುಂಬ ಚರ್ಚೆಗಳು ನಡೆಯುತ್ತಿದ್ದವು. ಈಗ ಆ ಸ್ಥಾನವನ್ನು ಬಿಟ್‌ಕಾಯಿನ್ ಮತ್ತು ಬ್ಲಾಕ್‌ಚೈನ್‌ಗಳು ಆಕ್ರಮಿಸಿವೆ. ಏನಿದು ಬಿಟ್‌ಕಾಯಿನ್? ಈ ಲೇಖನದಲ್ಲಿ ಅದರ ಬಗ್ಗೆ ಒಂದು ಕಿರುಪರಿಚಯವನ್ನು ಮಾಡಲು ಪ್ರಯತ್ನಿಸಲಾಗಿದೆ. ಮೊದಲಿಗೆ ಸ್ವಲ್ಪ ಪೀಠಿಕೆ. ಈಗಿನ ಹಣಕಾಸು ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ? ಹಾಗೆ ಯಾಕೆ […]
ವಿದ್ಯುತ್ ಚಾಲಿತ ಸ್ಕೂಟರುಗಳು
ಹೇಗೆ ಕೆಲಸ ಮಾಡುತ್ತವೆ? ಹಿಂದಿನ ಸಂಚಿಕೆಯಲ್ಲಿ ವಿದ್ಯುತ್ ಚಾಲಿತ ಕಾರುಗಳ ಬಗ್ಗೆ ತಿಳಿದುಕೊಂಡೆವು. ಈ ಸಲ ಅವುಗಳ ಕುಟುಂಬಕ್ಕೇ ಸೇರಿದ ವಿದ್ಯುತ್ ಚಾಲಿತ ಸ್ಕೂಟರುಗಳ ಬಗ್ಗೆ ತಿಳಿದುಕೊಳ್ಳೋಣ. ಹಾಗೆ ನೋಡಿದರೆ, ಸ್ಕೂಟರುಗಳ ಬಗ್ಗೆ ತಿಳಿದುಕೊಂಡು ನಂತರ ಕಾರುಗಳ ಬಗ್ಗೆ ತಿಳಿದುಕೊಳ್ಳಲು ಹೋಗಬೇಕಿತ್ತು. ಇರಲಿ. ಅಡ್ಡಿಯಿಲ್ಲ. ವಿದ್ಯುತ್ ಚಾಲಿತ ಸ್ಕೂಟರುಗಳು ನಗರ ಸಾರಿಗೆಗೆ ಸೀಮಿತ ಎನ್ನಬಹುದು. ವಿದ್ಯುತ್ ಚಾಲಿತ ಕಾರುಗಳಾದರೆ ನಗರ ಸಾರಿಗೆಗೆ ಸೀಮಿತ ಎಂದರೆ ಜನರಿಗೆ ಸ್ವಲ್ಪ ಕಿರಿಕಿರಿಯಾಗಬಹುದು. ಪೆಟ್ರೋಲ್ ಚಾಲಿತ ಸ್ಕೂಟರುಗಳೂ […]
ವಿದ್ಯುತ್ ಚಾಲಿತ ಕಾರುಗಳು
ಹೇಗೆ ಕೆಲಸ ಮಾಡುತ್ತವೆ? ಕೋವಿಡ್‌ನಿಂದಾದ ಹಲವು ಬದಲಾವಣೆಗಳಲ್ಲಿ ಒಂದು ಹೆಚ್ಚು ಹೆಚ್ಚು ಜನ ಸಾರ್ವಜನಿಕ ವಾಹನಗಳ ಬದಲಿಗೆ ವೈಯಕ್ತಿಕ ವಾಹನಗಳ ಬಳಕೆ ಜಾಸ್ತಿ ಮಾಡಿದ್ದು. ಸಹಜವಾಗಿಯೇ ಕಾರುಗಳಿಗೆ ಬೇಡಿಕೆ ಜಾಸ್ತಿಯಾಗಿದೆ. ಇತ್ತೀಚೆಗೆ ವಿದ್ಯುತ್ ಚಾಲಿತ ಕಾರುಗಳ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಇದಕ್ಕೆ ಹಲವಾರು ಕಾರಣಗಳಿವೆ. ಮೊದಲನೆಯದಾಗಿ ಈ ಕಾರುಗಳ ಚಲನೆಯ ವ್ಯಾಪ್ತಿ ಅಂದರೆ ಒಮ್ಮೆ ಪೂರ್ತಿ ಚಾರ್ಜ್ ಮಾಡಿದ ನಂತರ ಎಷ್ಟು ದೂರ ಸಾಗಬಹುದು ಎಂಬುದು ಜಾಸ್ತಿಯಾಗುತ್ತಿರುವುದು. ಆರಂಭದ ದಿನಗಳಲ್ಲಿ ಇದು ತುಂಬ ಕಡಿಮೆ ಇದ್ದುದರಿಂದ ನಗರದೊಳಗೆ […]
ಬಿ.ಪಿ. ಮೋನಿಟರ್‌ಗಳು
ರಕ್ತದೊತ್ತಡ ಅಳೆಯಿರಿ ತುಷಾರ ಮಾಸಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ಟೆಕ್ಕಿರಣ ಅಂಕಣದ ಆರನೆಯ ಕಂತು ರಕ್ತದೊತ್ತಡ ಅಥವಾ ರಕ್ತದ ಏರೊತ್ತಡ ಒಂದು ಸಾಮಾನ್ಯ ಕಾಯಿಲೆಯಾಗುತ್ತಿದೆ. ಹೈ ಬ್ಲಡ್‌ಪ್ರಷರ್ (ಹೈ ಬಿ.ಪಿ.), ಹೈಪರ್‌ಟೆನ್ಶನ್ ಅಥವಾ ಸರಳವಾಗಿ ಬಿ.ಪಿ. ಎಂದೂ ಇದನ್ನು ಕರೆಯುತ್ತಾರೆ. ಭಾರತದಲ್ಲೂ ಇದು ಜನಸಂಖ್ಯೆಯ ಗಣನೀಯ ಭಾಗವನ್ನು ಬಾಧಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ರಕ್ತದ ಏರೊತ್ತಡವನ್ನು “ಶಾಂತಿಯುತ ಕೊಲೆಗಾರ” ಎಂದು ವರ್ಣಿಸಿದೆ. ರಕ್ತದ ಏರೊತ್ತಡಕ್ಕೆ ಅನುವಂಶಿಕ ಮತ್ತು ಜೀವನಶೈಲಿಗಳು ಕಾರಣವೆಂದು ಹೇಳಲಾಗುತ್ತಿದೆ. ರಕ್ತದ ಏರೊತ್ತಡ ಪ್ರಾರಂಭದಲ್ಲಿ ಯಾವ […]
ಆಕ್ಸಿಮೀಟರ್
ರಕ್ತದಲ್ಲಿರುವ ಆಮ್ಲಜನಕವನ್ನು ಅಳೆಯಿರಿ ಎಪ್ರಿಲ್ ೨೦೨೦ ರಿಂದ ತುಷಾರ ಮಾಸಪತ್ರಿಕೆಯಲ್ಲಿ ಟೆಕ್ಕಿರಣ ಎಂಬ ಹೆಸರಿನ ಅಂಕಣ ಪ್ರಾರಂಭವಾಗಿದೆ. ಇದು ಅದರ ಐದನೆಯ ಕಂತು ಕೊರೋನಾ ಬಂದಿರಬಹುದೇ ಎಂದು ಪರೀಕ್ಷೆ ಮಾಡಿಸಿದಾಗ ಕೊರೋನಾ ವೈರಸ್ ದೇಹದಲ್ಲಿ ಇರುವುದು ಹೌದು ಆದರೆ ಕಾಯಿಲೆ ಲಕ್ಷಣಗಳಿಲ್ಲ ಎಂದಾದರೆ ಅವರಿಗೆ ಮನೆಯಲ್ಲೇ ಇರಲು ಅನುಮತಿ ಸಿಗುತ್ತದೆ. ಆದರೆ ಅವರು ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅದರಲ್ಲಿ ಒಂದು ಅಂಶವೆಂದರೆ ಅವರಲ್ಲಿ ಆಕ್ಸಿಮೀಟರ್ ಇರತಕ್ಕದ್ದು ಮತ್ತು ತಮ್ಮ ದೇಹದಲ್ಲಿರುವ ಆಮ್ಲಜನಕದ (oxygen) ಪ್ರಮಾಣವನ್ನು ಆಗಾಗ […]
ನ್ಯಾನೋರೋಬೋಟ್‌ಗಳು
ವೈದ್ಯರನ್ನೇ ನುಂಗಬಹುದು! ಎಪ್ರಿಲ್ ೨೦೨೦ ರಿಂದ ತುಷಾರ ಮಾಸಪತ್ರಿಕೆಯಲ್ಲಿ ಟೆಕ್ಕಿರಣ ಎಂಬ ಹೆಸರಿನ ಅಂಕಣ ಪ್ರಾರಂಭವಾಗಿದೆ. ಇದು ಅದರ ನಾಲ್ಕನೆಯ ಕಂತು ದೇವಿಮಹಾತ್ಮೆ ಯಕ್ಷಗಾನದ ಪ್ರಾರಂಭದಲ್ಲಿ ಒಂದು ಪ್ರಸಂಗ ಇದೆ. ಅದರ ಪ್ರಕಾರ ವಿಷ್ಣು ಮತ್ತು ಬ್ರಹ್ಮರಿಗೆ ತಮ್ಮಿಬ್ಬರಲ್ಲಿ ಯಾರು ಶ್ರೇಷ್ಠ ಎಂಬ ಚರ್ಚೆ ಆಗುತ್ತದೆ. ಕೊನೆಗೆ ಒಬ್ಬರ ದೇಹದೊಳಗ್ಗೆ ಇನ್ನೊಬ್ಬರು ಹೋಗಿ ಹೊರ ಬರುವ ಪಂಥ ಏರ್ಪಡಿಸಿಕೊಳ್ಳುತ್ತಾರೆ. ಮೊದಲು ವಿಷ್ಣು ಬ್ರಹ್ಮನ ಹೊಟ್ಟೆಯೊಳಗೆ ಹೋಗುತ್ತಾನೆ. ಅಲ್ಲಿಂದಲೇ ತನಗೆ ಕಂಡದ್ದನ್ನು ವರ್ಣಿಸುತ್ತಾನೆ. ಅಲ್ಲಿ ಚಿನ್ನ ಕಂಡು ಬ್ರಹ್ಮನಿಗೆ […]
ಲೆನ್ಸ್ ಬದಲಿಸಬಹುದಾದ ಕನ್ನಡಿರಹಿತ ಕ್ಯಾಮೆರ
ಎಪ್ರಿಲ್ ೨೦೨೦ ರಿಂದ ತುಷಾರ ಮಾಸಪತ್ರಿಕೆಯಲ್ಲಿ ಟೆಕ್ಕಿರಣ ಎಂಬ ಹೆಸರಿನ ಅಂಕಣ ಪ್ರಾರಂಭವಾಗಿದೆ. ಇದು ಅದರ ಮೂರನೆಯ ಕಂತು ಕ್ಯಾಮೆರ ಯಾರಿಗೆ ಗೊತ್ತಿಲ್ಲ? ಈಗ ಹಳೆಯ ಫಿಲ್ಮ್ ಕ್ಯಾಮೆರಗಳು ಕಾಣಿಸುತ್ತಿಲ್ಲ. ಎಲ್ಲವೂ ಡಿಜಿಟಲ್‌ಮಯ. ಕ್ಯಾಮೆರಗಳಲ್ಲಿ ಹಲವು ನಮೂನೆಗಳು. ಮುಖ್ಯವಾಗಿ ಎರಡು ನಮೂನೆ -ಸುಮ್ಮನೆ ನೋಡಿ ಕ್ಲಿಕ್ ಮಾಡುವಂತಹದ್ದು (aim and shoot) ಮತ್ತು ಏಕಮಸೂರ ಪ್ರತಿಫಲನ (single lens reflex –SLR). ಏಮ್ ಅಂಡ್ ಶೂಟ್ ಕ್ಯಾಮೆರಗಳು ಈಗ ಮಾರುಕಟ್ಟೆಯಿಂದ ಬಹುತೇಕ ಮಾಯವಾಗಿವೆ. ಇದಕ್ಕೆ ಕಾರಣ ಶಕ್ತಿಶಾಲಿಯಾದ […]
ಗ್ಲೂಕೋಮೀಟರ್
ಮನೆಯಲ್ಲೇ ರಕ್ತ ಪರೀಕ್ಷೆ ಮಾಡಿರಿ ಎಪ್ರಿಲ್ ೨೦೨೦ ರಿಂದ ತುಷಾರ ಮಾಸಪತ್ರಿಕೆಯಲ್ಲಿ ಟೆಕ್ಕಿರಣ ಎಂಬ ಹೆಸರಿನ ಅಂಕಣ ಪ್ರಾರಂಭವಾಗಿದೆ. ಇದು ಅದರ ಎರಡನೆಯ ಕಂತು ಭಾರತದಲ್ಲಿ ಡಯಾಬಿಟೀಸ್ ಅರ್ಥಾತ್ ಮಧುಮೇಹ ಅಥವಾ ಸಕ್ಕರೆ ಕಾಯಿಲೆಯ ಪ್ರಮಾಣ ಹೆಚ್ಚುತ್ತಲೇ ಇದೆ. ನಗರ ಪ್ರದೇಶದಲ್ಲಿ ಸುಮಾರು 10 ರಿಂದ 14 ಶೇಕಡ ಜನರಿಗೆ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಸುಮಾರು 3 ರಿಂದ 8 ಶೇಕಡ ಜನರಿಗೆ ಸಕ್ಕರೆ ಕಾಯಿಲೆ ಇದೆ ಎಂದು ಒಂದು ಸಮೀಕ್ಷೆ ತಿಳಿಸುತ್ತದೆ. ಸಕ್ಕರೆ ಕಾಯಿಲೆ ಇರುವವರ […]