ಟಿಮ್ ಬರ್ನರ್ಸ್-ಲೀ ನೆಟ್‌ವರ್ಕ್ ಮಾರ್ಕೆಟಿಂಗ್ ಬಗ್ಗೆ ತಿಳಿಯೋಣ ಎಂದು ಅಂತರಜಾಲಕ್ಕೆ (ಇಂಟರ್‌ನೆಟ್‌ಗೆ) ಲಗ್ಗೆ ಇಡಿ. ಜಗತ್ಪ್ರಸಿದ್ಧ ತಾಣ-ಶೋಧಕ ಗೂಗ್ಲ್‌ನಲ್ಲಿ ನೆಟ್‌ವರ್ಕ್ ಮಾರ್ಕೆಟಿಂಗ್ ಎಂದು ಬೆರಳಚ್ಚಿಸಿ ಮೌಸ್ ಗುಂಡಿಯನ್ನು ಕ್ಲಿಕ್ ಮಾಡಿ. ಈಗ ನೋಡಿ. ನೆಟ್‌ವರ್ಕ್ ಮಾರ್ಕೆಟಿಂಗ್, ನೆಟ್‌ವರ್ಕ್, ಮಾರ್ಕೆಟಿಂಗ್, ಹೀಗೆ ಹಲವು ವಿಷಯಗಳ ತಾಣಗಳ ಸೂಚಿ ದೊರೆಯುತ್ತದೆ. ನೆಟ್‌ವರ್ಕ್ ಬಗ್ಗೆ ನೀಡಿರುವ ತಾಣದ ತಂತು (ಲಿಂಕ್) ಮೇಲೆ ಕ್ಲಿಕ್ ಮಾಡಿ ನೋಡಿ. ಅದು ನಿಮ್ಮನ್ನು ಗಣಕಗಳ ಜಾಲ (ನೆಟ್‌ವರ್ಕ್) ಬಗ್ಗೆ ವಿವರ ನೀಡುವ ತಾಣವಾಗಿರುತ್ತದೆ. ಅಲ್ಲಿರುವ ಇನ್ಯಾವುದಾದರೂ […]
Tag: ಮಾಹಿತಿ ತಂತ್ರಜ್ಞಾನ
ಪ್ರಾಣಿಗಳ ಅಂತರಜಾಲ
ಇದೇನಿದು ವಿಚಿತ್ರ ಶೀರ್ಷಿಕೆ ಅಂದುಕೊಂಡಿರಾ? ಅದನ್ನು ವಿವರಿಸುವ ಮುನ್ನ ಹಿಂದೊಮ್ಮೆ ಸ್ಮಾರ್ಟ್‌ಸಿಟಿ ಬಗ್ಗೆ ಬರೆಯುವಾಗ ಹೇಳಿದ್ದ ವಸ್ತುಗಳ ಅಂತರಜಾಲ ನೆನಪಿಸಿಕೊಳ್ಳಿ. ಅಂತರಜಾಲದ ಮೂಲಕ ಸಂಪರ್ಕ ಹೊಂದಿರುವಂತಹ ವಸ್ತುಗಳ ಪ್ರಪಂಚಕ್ಕೆ ಇಂಗ್ಲಿಶಿನಲ್ಲಿ Internet of Things ಅಥವಾ ಚುಟುಕಾಗಿ IoT (ಐಓಟಿ) ಎಂಬ ಹೆಸರಿದೆ. ಇದಕ್ಕೆ connected devices ಎಂಬ ಇನ್ನೊಂದು ಹೆಸರೂ ಇದೆ. ಸಾಧನ, ಪರಿಕರ, ಸಂಪರ್ಕಕ್ಕೊಳಪಡಬಹುದಾದ ಗ್ಯಾಜೆಟ್‌ಗಳು, ಗಣಕ, ಸಂವೇದಕ (sensor) ಇವೆಲ್ಲ ಅಂತರಜಾಲದ ಮೂಲಕ ಸಂಪರ್ಕಗೊಂಡು ಅವುಗಳನ್ನು ವೀಕ್ಷಿಸುವುದು, ಅವುಗಳಿಂದ ಮಾಹಿತಿಯನ್ನು ಪಡೆಯುವುದು ಮತ್ತು […]
ಅವಕೆಂಪು ತಾಪಮಾಪಕ
ಇದು ಪಿಸ್ತೂಲಲ್ಲ, ಉಷ್ಣತೆ ಅಳೆಯುವ ಸಾಧನ ಈ ಕೋವಿಡ್-19ರಿಂದಾಗಿ ಜನಜೀವನದ ರೀತಿನೀತಿಗಳೇ ಬದಲಾಗಿವೆ. ಮುಖಗವಸು ಹಾಕದೆ ಮನೆಯಿಂದ ಹೊರಬರುವ ಹಾಗೆಯೇ ಇಲ್ಲ. ಯಾವುದೇ ಅಂಗಡಿ, ಮಾಲ್, ಕಚೇರಿ ಅಥವಾ ಇನ್ಯಾವುದೇ ಸಾರ್ವಜನಿಕ ಸ್ಥಳಕ್ಕೆ ಹೋದರೆ ಅಲ್ಲಿ ಬಾಗಿಲಿನಲ್ಲಿಯೇ ಒಬ್ಬ ನಿಮ್ಮ ಹಣೆ ಅಥವಾ ಮುಂಗೈಗೆ ಒಂದು ಚಿಕ್ಕ ಪಿಸ್ತೂಲಿನಾಕಾರದ ಸಾಧನವನ್ನು ಹಿಡಿಯುತ್ತಾನೆ. ಅದರಲ್ಲಿ ಮೂಡಿಬರುವ ಸಂಖ್ಯೆಯನ್ನು ನೋಡಿ ನೀವು ಒಳಗೆ ಹೋಗಬಹುದೇ ಬಾರದೇ ಎಂದು ನಿರ್ಧರಿಸುತ್ತಾನೆ. ಏನಿದು ಈ ಸಾಧನ? ಇದು ಚಿಕ್ಕ ಪಿಸ್ತೂಲ್ ಅಥವಾ ಚಿಕ್ಕ […]
ವೈಯಕ್ತಿಕ ದತ್ತಾಂಶ ರಕ್ಷಣಾ ಮಸೂದೆ
ಮಾಹಿತಿ ಕಳ್ಳರಿಗೆ ಕಡಿವಾಣ ನೀವು ನನಗೆ ಹಂಪಿಗೆ ಯಾತ್ರೆ ಹೋಗಬೇಕೆನಿಸುತ್ತಿದೆ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿ ನೋಡಿ. ನಿಮಗೆ ಪ್ರಯಾಣ ಸಂಬಂಧಿ ಜಾಹೀರಾತುಗಳು ಕಾಣಿಸಲು ಪ್ರಾರಂಭವಾಗುತ್ತದೆ. ನನಗೆ ಹೊಟ್ಟೆನೋವು ಆಗುತ್ತಿದೆ ಎಂದು ಪೋಸ್ಟ್ ಹಾಕಿ ನೋಡಿ. ಔಷಧಿ ನೀಡುವ ಆಪ್‌ಗಳ ಜಾಹೀರಾತುಗಳು ಬರಲು ಪ್ರಾರಂಭವಾಗುತ್ತದೆ. ಏನಾಗುತ್ತಿದೆ ಎಂದರೆ ಫೇಸ್‌ಬುಕ್ ನಿಮ್ಮ ಮಾಹಿತಿಯನ್ನು ಇತರೆ ಕಂಪೆನಿ, ಉದ್ಯಮಗಳ ಜೊತೆ ಹಂಚಿಕೊಂಡಿದೆ. ಇದಕ್ಕೆ ನಿಮಗೆ ತಿಳಿಯದೆ ನೀವೇ ಅನುಮತಿಸಿರುತ್ತೀರಿ. ಅದನ್ನು ಸರಿಪಡಿಸಬಹುದು. ಇನ್ನೊಂದು ನಮೂನೆಯ ಪರಿಸ್ಥಿತಿಯನ್ನು ನೋಡೋಣ. ನೀವು ಫೇಸ್‌ಬುಕ್‌ನಿಂದಲೇ […]
