Gadget Loka

All about gadgtes in Kannada

Tag: ಮಾಹಿತಿ ತಂತ್ರಜ್ಞಾನ

ರೋಬೋಟ್   ಜೇನುನೊಣಗಳು

ಪ್ರಕೃತಿ ಎಲ್ಲವನ್ನೂ ಮಾಡಿದೆ. ನಮಗೆ ಬೇಕಾದ ಆಹಾರವನ್ನೂ ಆಹಾರ ಸರಪಳಿಯನ್ನೂ ಮಾಡಿಟ್ಟಿದೆ. ಸಸ್ಯಗಳು ಹೂ ಬಿಡುತ್ತವೆ. ದುಂಬಿ, ಜೇನು ನೊಣಗಳು ಈ ಹೂವುಗಳ ಮೇಲೆ ಕುಳಿತು ಒಂದರಿಂದ ಇನ್ನೊಂದಕ್ಕೆ ಪರಾಗಸ್ಪರ್ಶ ಮಾಡುತ್ತವೆ. ಇದರಿಂದಾಗಿ ಹೂ ಕಾಯಿಯಾಗಿ ಹಣ್ಣಾಗಿ ಅಥವಾ ಧಾನ್ಯವಾಗಿ ನಮಗೆ ಆಹಾರವಾಗುತ್ತದೆ. ಜಗತ್ತಿನ ಸುಮಾರು 35% ಆಹಾರೋತ್ಪತ್ತಿ ಜೇನುನೊಣಗಳನ್ನು ಅವಲಂಬಿಸಿದೆ. ಕೃಷಿಕರು ತಮ್ಮ ಗದ್ದೆ, ತೋಟಗಳಲ್ಲಿ ಜೇನು ಕುಟುಂಬ ಸಾಕಿ ಬೆಳೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಒಂದು ದೊಡ್ಡ ಸಮಸ್ಯೆ ಇಡಿಯ ಜಗತ್ತನ್ನೇ ಕಾಡುತ್ತಿದೆ. ಅದು […]

ಕ್ವಾಂಟಂ ಬ್ಯಾಟರಿ

ಬ್ಯಾಟರಿ ಲೋಕದಲ್ಲಿ ಕ್ರಾಂತಿ ಈಗಿನ ಕಾಲದಲ್ಲಿ ಬಹುತೇಕ ಎಲ್ಲ ಸಾಧನಗಳು ವಿದ್ಯುತ್ತಿನಿಂದ ಕೆಲಸ ಮಾಡುತ್ತವೆ. ‌ಇದು ಮನೆಯಲ್ಲಿರುವ ವಿದ್ಯುತ್ ಪೂರೈಕೆ ಮೂಲಕ, ಸೌರಶಕ್ತಿಯಿಂದ, ಬ್ಯಾಟರಿ ಮೂಲಕ ಇರಬಹುದು. ಬ್ಯಾಟರಿ ಇಲ್ಲದ ಸಾಧನವೇ ಇಲ್ಲವೇನೋ? ಸೌರಶಕ್ತಿಯಿಂದ ಕೆಲಸ ಮಾಡುವ ಸಾಧನಗಳಲ್ಲೂ ಬ್ಯಾಟರಿಯಲ್ಲಿ ವಿದ್ಯುತ್ ಸಂಗ್ರಹವಾಗಿ ನಂತರವೇ ಬಳಕೆಗೆ ಲಭ್ಯವಾಗುತ್ತದೆ. ಬ್ಯಾಟರಿಗಳಲ್ಲಿ ಪ್ರಮುಖವಾಗಿ ಎರಡು ನಮೂನೆ. ಒಮ್ಮೆ ಬಳಸಿ ಎಸೆಯುವಂತಹವು ಹಾಗೂ ಮತ್ತೆ ಮತ್ತೆ ಚಾರ್ಜ್ ಮಾಡಿ ಬಳಸಬಹುದಾದ ರಿಚಾರ್ಜೇಬಲ್ ಬ್ಯಾಟರಿಗಳು. ರಿಚಾರ್ಜೇಬಲ್ ಬ್ಯಾಟರಿಗಳು ಹಲವು ಗಾತ್ರ, ಶಕ್ತಿಗಳಲ್ಲಿ ಬರುತ್ತವೆ. […]

ಪಾಚಿಯಿಂದ ವಿದ್ಯುತ್

ದ್ಯುತಿಸಂಶ್ಲೇಷಣೆಯಿಂದ ಕೆಲಸ ಮಾಡುವ ಬ್ಯಾಟರಿ ವಿದ್ಯುತ್ತಿನಿಂದ ಚಲಿಸುವ ಸ್ಕೂಟರ್ ಮತ್ತು ಕಾರುಗಳ ಬಗ್ಗೆ ಇದೇ ಅಂಕಣದಲ್ಲಿ ಬರೆಯುವಾಗ ವಿದ್ಯುತ್ ಶಕ್ತಿಯ ಬೇಡಿಕೆ ಎಷ್ಟು ತುಂಬ ಇದೆ ಎಂದು ಬರೆಯಲಾಗಿತ್ತು. ಈ ವಿದ್ಯುತ್ ಹಲವು ಶಕ್ತಿಗಳಲ್ಲಿ ಬೇಕಾಗಿದೆ. ಸ್ಕೂಟರು, ಕಾರು, ಇತ್ಯಾದಿ ವಾಹನಗಳನ್ನು ನಡೆಸಲು ತುಂಬ ಶಕ್ತಿಯ ಬ್ಯಾಟರಿ ಬೇಕು. ಮೊಬೈಲು, ಟ್ಯಾಬ್ಲೆಟ್ ಇತ್ಯಾದಿಗಳಿಗೆ ಸ್ವಲ್ಪ ಕಡಿಮೆ ಶಕ್ತಿ ಸಾಕು. ವಸ್ತುಗಳ ಅಂತರಜಾಲದಲ್ಲಿ ಬಳಕೆಯಾಗುವ ಬ್ಯಾಟರಿಗಳಿಗೆ ಅತಿ ಕಡಿಮೆ ಶಕ್ತಿ ಸಾಕು. ಅಂತರಜಾಲದ ಮೂಲಕ ಸಂಪರ್ಕ ಹೊಂದಿರುವಂತಹ ವಸ್ತುಗಳ […]

ಜಲಜನಕ ಚಾಲಿತ ವಾಹನಗಳು

ವಾಹನಗಳಿಗೆ ಇಂಧನ ಒದಗಿಸುವುದು ದೊಡ್ಡ ಸಮಸ್ಯೆ. ಪೆಟ್ರೋಲ್ ಮತ್ತು ಡೀಸಿಲ್ ಇಂಜಿನ್‌ಗಳ ತೊಂದರೆ ಏನು ಎಂದು ಎಲ್ಲರಿಗೂ ಗೊತ್ತು. ಅವು ವಾತಾವರಣವನ್ನು ಮಲಿನಗೊಳಿಸುವುದರಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತವೆ. ಸಾಲದುದಕ್ಕೆ ಇವುಗಳ ನಿಕ್ಷೇಪ ಇನ್ನು ಕೆಲವೇ ದಶಕಗಳಲ್ಲಿ ಬಹುತೇಕ ಖಾಲಿಯಾಗುತ್ತದೆ. ಆದುದರಿಂದ ಇವುಗಳಿಗೆ ಬದಲಿ ಇಂಧನವನ್ನು ಜಗತ್ತಿನ ಎಲ್ಲ ಕಡೆ ವಿಜ್ಞಾನಿಗಳು ಹುಡುಕುತ್ತಲೇ ಇದ್ದಾರೆ. ಒಂದು ಪ್ರಮುಖ ಪರಿಹಾರ ಎಂದರೆ ವಿದ್ಯುತ್ ಚಾಲಿತ ವಾಹನಗಳು. ಇವುಗಳ ಬಗ್ಗೆ ಇದೇ ಅಂಕಣದಲ್ಲಿ ಬರೆಯಲಾಗಿತ್ತು. ವಿದ್ಯುತ್ ಚಾಲಿತ ವಾಹನಗಳ ಪ್ರಮುಖ ಸಮಸ್ಯೆ […]

ಹೈಪರ್‌ಲೂಪ್

ಭವಿಷ್ಯದ ಸಾರಿಗೆ ಆದಿಮಾನವನಿಗೆ ಸಾಗುವುದು ಒಂದು ಗುರಿಯಾಗಿತ್ತು. ಕಾಲ ಕಳೆದಂತೆ ವೇಗವಾಗಿ ಸಾಗುವುದು ಗುರಿಯಾಯಿತು. ಈಗಂತೂ ಎಲ್ಲವೂ ವೇಗವಾಗಿ ಆಗಬೇಕು. ವೇಗ ವೇಗ ಅತಿ ವೇಗ ಎಂಬುದೇ ಜೀವನದ ಮಂತ್ರವಾಗುತ್ತಿದೆ. ಮಾನವ ಒಂದಾನೊಂದು ಕಾಲದಲ್ಲಿ ಎತ್ತಿನ ಗಾಡಿಗಳಲ್ಲಿ ಪ್ರಯಾಣ ಮಾಡುತ್ತಿದ್ದ. ಒಂದೊಂದೇ ಸುಧಾರಣೆಗಳು ಆಗುತ್ತಿದ್ದಂತೆ ಸಾರಿಗೆಯಲ್ಲೂ ಸುಧಾರಣೆಗಳು ಆದವು. ಮಾನವನ ಶಕ್ತಿಯಿಂದ ಚಲಿಸುವ ಸೈಕಲು, ಯಂತ್ರಗಳಿಂದ ಸಾಗುವ ಕಾರು, ಬಸ್ಸು, ರೈಲು, ಹಡಗು, ವಿಮಾನ, ಇತ್ಯಾದಿಗಳು ಬಂದವು. ಇವುಗಳಲ್ಲಿ ಪ್ರಮುಖವಾಗಿ ಗಮನಿಸಬೇಕಾದುದು ವಿಮಾನ. ಇದು ಉಳಿದವುಗಳಿಂದ ತುಂಬ […]

ಸೌರ ಅಡುಗೆಪಾತ್ರೆ

ಸೋಲಾರ್ ಕುಕ್ಕರ್ ಮಾನವ ಕಲಿತ ಮೊಟ್ಟಮೊದಲ ವಿದ್ಯೆ ಅಡುಗೆ ಇರಬೇಕು. ಅಡುಗೆ ಮಾಡುವ ವಿಧಾನ ಕಟ್ಟಿಗೆಯಿಂದ ಪ್ರಾರಂಭವಾಗಿ ಹಲವು ಹಂತಗಳನ್ನು ದಾಟಿ ಬಂದಿದೆ. ಎಲ್ಲ ವಿಧಾನಗಳ ಮೂಲಭೂತ ತತ್ವ ಒಂದೇ. ಯಾವುದನ್ನು ಬೇಯಿಸಬೇಕೋ ಅದಕ್ಕೆ ತಾಪವನ್ನು ವರ್ಗಾಯಿಸಬೇಕು. ಸರಳವಾಗಿ ಹೇಳುವುದಾದರೆ ಆಹಾರವನ್ನು ಬಿಸಿ ಮಾಡಬೇಕು. ಈ ಬಿಸಿ ಮಾಡುವ ವಿಧಾನ ಕಟ್ಟಿಗೆಯನ್ನು ಸುಡುವುದು, ಸೀಮೆ ಎಣ್ಣೆ ಸ್ಟೌ, ಗ್ಯಾಸ್ ಒಲೆ, ಬಿಸಿಯಾದ ವಿದ್ಯುತ್ ಕಾಯಿಲ್, ಇಂಡಕ್ಷನ್ ಸ್ಟೌ, ಇತ್ಯಾದಿ ಯಾವುದೂ ಇರಬಹುದು. ಇವುಗಳಲ್ಲಿ ಇಂಡಕ್ಷನ್ ಸ್ಟೌ ಬಗ್ಗೆ […]

ಪ್ರೇರಿತ ತಪನದಿಂದ ಅಡುಗೆ

ಇಂಡಕ್ಷನ್ ಕುಕಿಂಗ್ ಅಡುಗೆ ಮಾಡಲು ಗ್ಯಾಸ್ ಸ್ಟೌವ್ ಗೊತ್ತು. ಇಲೆಕ್ಟ್ರಿಕ್ ಹೀಟರ್ ಕೂಡ ಗೊತ್ತು. ಇನ್ನೂ ಒಂದು ಇದೆ. ಅದು ಇಂಡಕ್ಷನ್ ಹೀಟರ್ ಅಥವಾ ಕುಕರ್. ಅದನ್ನು ಯುರೋಪಿನಲ್ಲಿ ಹೋಬ್ ಎಂದೂ ಕರೆಯುತ್ತಾರೆ. ಇದನ್ನು ನೀವೆಲ್ಲ ನೋಡಿರಬಹುದು. ಹಲವರು ಬಳಸಿರಲೂಬಹುದು. ಇದರಲ್ಲಿ ಒಂದು ಪ್ಲೇಟ್ ಇರುತ್ತದೆ. ಅದರ ಮೇಲೆ ಕಬ್ಬಿಣ ತಳವಿರುವ ಅಥವಾ ಕಬ್ಬಿಣಾಂಶವಿರುವ ಲೋಹದ ತಳವಿರುವ ಪಾತ್ರವನ್ನು ಇಟ್ಟು ಸ್ವಿಚ್ ಹಾಕಿದರೆ ಪಾತ್ರೆ ಬಿಸಿಯಾಗುತ್ತದೆ. ಇದನ್ನು ಯಾಕೆ ಇಂಡಕ್ಷನ್ ಹೀಟರ್ ಎನ್ನುತ್ತಾರೆ ಎಂದು ನೋಡೋಣ. ವಿದ್ಯುತ್‌ಗೂ […]

ವರ್ಧಿತವಿಶ್ವ

ಮೂರು ಆಯಾಮಗಳ ಸತ್ಯ-ಮಿಥ್ಯಾಲೋಕ       ನಾನು ಇಂತಹ ಕಡೆ ಇದ್ದೇನೆ, ಈಗ ವಿಮಾನಕ್ಕೆ ಹತ್ತುತ್ತಿದ್ದೇನೆ, ಯಾವುದೋ ರಾಕ್ ಸಂಗೀತ ಕಾರ್ಯಕ್ರಮದಲ್ಲಿದ್ದೇನೆ ಎಂಬಿತ್ಯಾದಿಯಾಗೆ ಫೇಸ್‌ಬುಕ್‌ನಲ್ಲಿ  ಪೋಸ್ಟ್ ಮಾಡುವುದನ್ನು ಕಂಡಿದ್ದೀರಿ. ನಿಮ್ಮ ಸ್ನೇಹಿತ ಅಲ್ಲಿದ್ದಾನೆ ಎಂಬುದೇನೋ ಸರಿ. ಆ ಕಾರ್ಯಕ್ರಮ ನಡೆಯುವಲ್ಲಿ ನೀವು ನಿಜವಾಗಿ ಇಲ್ಲದಿದ್ದರೂ ವರ್ಧಿತ ವಾಸ್ತವ (augmented reality) ಮೂಲಕ ಭಾಗವಹಿಸಿದರೆ ಹೇಗಿರುತ್ತದೆ? ಅದು ಹೇಗೆ ಎನ್ನುತ್ತೀರಾ? ಹೊಸ ತಂತ್ರಜ್ಞಾನಗಳು ಬರುತ್ತಿವೆ. ಮೂರು ಆಯಾಮಗಳ ಮಿಥ್ಯಾ ಲೋಕದಲ್ಲಿ ನೀವು ಇಲ್ಲಿದ್ದೇ ಇನ್ನೆಲ್ಲೋ ಪ್ರಯಾಣ ಮಾಡುತ್ತಿರಬಹುದು. ಅಲ್ಲೆಲ್ಲ ಸುತ್ತಿದ […]

ಅಂತರಿಕ್ಷದಿಂದ ಅಂತರಜಾಲ

ಉಪಗ್ರಹ ಮೂಲಕ ಅಂತರಜಾಲ ಸಂಪರ್ಕ ಕೊರೊನಾದಿಂದಾಗಿ ಜೀವನದಲ್ಲಿ, ಜೀವನಶೈಲಿಯಲ್ಲಿ, ಹಲವು ಏರುಪೇರುಗಳಾಗಿವೆ. ಅವುಗಳಲ್ಲಿ ಒಂದು ಶಿಕ್ಷಣ. ಶಾಲಾಪಾಠಗಳೆಲ್ಲ ಆನ್‌ಲೈನ್ ಆಗಿವೆ. ಇದರಿಂದಾಗಿ ಹಳ್ಳಿಗಾಡಿನಲ್ಲಿರುವವರಿಗೆ ಬಹು ದೊಡ್ಡ ತೊಂದರೆ ಆಗಿದೆ. ನಿಮಗೆಲ್ಲ ತಿಳಿದೇ ಇರುವಂತೆ ಭಾರತದ ಹಳ್ಳಿಗಳಲ್ಲಿ ಅಂತರಜಾಲ ಸಂಪರ್ಕ ಸಮರ್ಪಕವಾಗಿಲ್ಲ. ಬ್ರಾಡ್‌ಬ್ಯಾಂಡ್ ಎಲ್ಲ ಮನೆಗಳಿಗೆ ಲಭ್ಯವಿಲ್ಲ. ಮೊಬೈಲ್ ಸಿಗ್ನಲ್ ಕೂಡ ಎಲ್ಲ ಕಡೆ ಸರಿಯಾಗಿ ದೊರೆಯುವುದಿಲ್ಲ. ಕೆಲವು ಮಕ್ಕಳು ಮೊಬೈಲ್ ಸಿಗ್ನಲ್‌ಗಾಗಿ ಗುಡ್ಡದ ತುದಿಗೆ ಹೋಗುವುದು, ಅಲ್ಲಿ ಸಣ್ಣ ಜೋಪಡಿ ಹಾಕಿಕೊಂಡು, ಅದರಲ್ಲಿ ಕುಳಿತು ಆನ್‌ಲೈನ್ ತರಗತಿ […]

ಸ್ಮಾರ್ಟ್ ಸಿಟಿ

ಚತುರ ನಗರದೊಳಗೊಂದು ಸುತ್ತಾಟ ಒಂದಾನೊಂದು ಕಾಲದಲ್ಲಿ ಲ್ಯಾಂಡ್‌ಲೈನ್ ಫೋನ್‌ಗಳೇ ಇದ್ದವು. ಆ ಫೋನಿಗೊಂದು ಬಾಲ ಇರುತ್ತಿತ್ತು. ಅದು ಟೆಲಿಫೋನ್ ಕಂಬಕ್ಕೆ ಜೋಡಣೆಯಾಗಿರುತ್ತಿತ್ತು. ನಂತರ ಹಾಗೆ ಬಾಲವಿಲ್ಲದ ಚರವಾಣಿ ಎಂದರೆ ಮೊಬೈಲ್ ಫೋನ್‌ಗಳು ಬಂದವು. ಕೆಲವು ವರ್ಷಗಳ ನಂತರ ಈ ಫೋನ್‌ಗಳು ಚತುರವಾದವು. ಅಂದರೆ ಚತುರವಾಣಿ ಅರ್ಥಾತ್ ಸ್ಮಾರ್ಟ್‌ಫೋನ್‌ಗಳು ಬಂದವು. ಈಗ ಅವುಗಳದೇ ಕಾಲ. ಫೋನ್‌ಗಳೇನೋ ಚತುರವಾದವು. ಇತರೆ ಸಾಧನಗಳು ಹಿಂದೆ ಬಿದ್ದವೇ? ಖಂಡಿತ ಇಲ್ಲ. ಕೈಗಡಿಯಾರಗಳು ಸ್ಮಾರ್ಟ್‌ವಾಚ್ ಆದವು. ಬುದ್ಧಿವಂತ ಕನ್ನಡಕಗಳೂ ಬಂದವು. ಬಲ್ಬ್, ಫ್ಯಾನ್, ಇನ್ನೂ […]

Gadget Loka © 2018