ಅಂತರಜಾಲದಲ್ಲಿ ಸೈಬರ್ ಯುದ್ಧ ದೇಶ ದೇಶಗಳ ನಡುವೆ ಯುದ್ಧ ನಡೆಯುವಾಗ ಅವುಗಳ ನಡುವಿನ ಯುದ್ಧ ಕೇವಲ ಮಿಲಿಟರಿಗೆ ಮಾತ್ರ ಸೀಮಿತವಾಗಿರಬೇಕಾಗಿಲ್ಲ. ಈಗಿನ ಕಾಲದಲ್ಲಿ ಯುದ್ಧ ಹಲವು ಮಜಲುಗಳಲ್ಲಿ ನಡೆಯುತ್ತದೆ. ಅವುಗಳಲ್ಲಿ ಆರ್ಥಿಕ, ನೀರು, ಜೈವಿಕ ಇತ್ಯಾದಿಗಳ ಜೊತೆ ಅಂತರಜಾಲವೂ ಸೇರಿದೆ. ರಷ್ಯಾದ ಸೈನ್ಯವು ಹೇಗೆ ಯು(ಉ)ಕ್ರೇನ್‌ನ ಪೂರ್ವಭಾಗದಲ್ಲಿ ಅಂತರಜಾಲ ಸಂಪರ್ಕವನ್ನು ಹೇಗೆ ಹಾಳುಗೆಡವಿತು ಎಂಬುದನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೆವು. ಈಗ ನಾವು ಜೀವಿಸುತ್ತಿರುವುದು ಡಿಜಿಟಲ್ ಅರ್ಥಾತ್ ತಂತ್ರಜ್ಞಾನ ಯುಗದಲ್ಲಿ. ಅಂದ ಮೇಲೆ ಯುದ್ಧವು ಈ ಕ್ಷೇತ್ರದಲ್ಲೂ ನಡೆಯಬೇಕಲ್ಲವೇ? […]
Tag: ಅಂತರಜಾಲ
ರಷ್ಯಾ – ಉಕ್ರೇನ್ ಯುದ್ಧ
ಅಂತರಜಾಲದ ಬಲಿ ರಷ್ಯಾ ದೇಶವು ಉಕ್ರೇನ್ (ಯುಕ್ರೇನ್) ದೇಶದ ಮೇಲೆ ಯುದ್ಧ ಘೋಷಣೆ ಮಾಡಿ ಧಾಳಿ ಪ್ರಾರಂಭ ಮಾಡಿರುವುದು ಈಗಾಗಲೇ ದೊಡ್ಡ ಸುದ್ದಿಯಾಗಿದೆ. ಉಕ್ರೇನ್‌ನ ರಸ್ತೆ ಸಂಪರ್ಕ, ವಿದ್ಯುತ್ ಸಂಪರ್ಕ ಇವುಗಳನ್ನು ರಷ್ಯಾವು ಹಲವು ಕಡೆ ಕತ್ತರಿಸಿದೆ. ಇವುಗಳ ಜೊತೆಗೆ ಅಲ್ಲಿಯ ಅಂತರಜಾಲ ಸಂಪರ್ಕಕ್ಕೂ ಅದು ಕತ್ತರಿ ಪ್ರಯೋಗ ಮಾಡಿದೆ. ವಿದ್ಯುತ್ ಸಂಪರ್ಕ ಮತ್ತು ರಸ್ತೆಗಳನ್ನು ಬಾಂಬ್ ದಾಳಿಯ ಮೂಲಕ ಕೆಡಿಸಬಹುದು. ಆದರೆ ಅಂತರಜಾಲ ಸಂಪರ್ಕವನ್ನು ಹೇಗೆ ಕೆಡಿಸುವುದು? ಕೇಬಲ್ ಜಾಲ ಮತ್ತು ಕಟ್ಟಡವನ್ನು ಹಾಳು ಮಾಡಿದರೆ […]
ಕನ್ನಡದ ಜಾಲತಾಣಕ್ಕೆ ಕನ್ನಡದಲ್ಲೇ ವಿಳಾಸ
ನೀವು ಯಾವುದೇ ಜಾಲತಾಣ ಅಂದರೆ ವೆಬ್‌ಸೈಟ್ ತೆರೆಯಬೇಕಾದರೆ ಏನು ಮಾಡುತ್ತೀರಿ? ಯಾವುದಾದರೊಂದು ಬ್ರೌಸರ್ (ಉದಾ -ಫಯರ್‌ಫಾಕ್ಸ್, ಕ್ರೋಮ್, ಎಡ್ಜ್) ತೆರೆದು ಅದರಲ್ಲಿ ಜಾಲತಾಣದ ವಿಳಾಸವನ್ನು ಟೈಪ್ ಮಾಡುತ್ತೀರಿ ತಾನೆ? ಒಂದೆರಡು ಜಾಲತಾಣಗಳ ವಿಳಾಸ ತಿಳಿಸಿ ನೋಡೋಣ. ನೀವು ಹೇಳಬಹುದಾದ ಉದಾಹರಣೆಗಳು –www.google.com, www.facebook.com, www.twitter.com… ಕನ್ನಡದ ಜಾಲತಾಣಗಳ ಉದಾಹರಣೆ ನೀಡಿ ಎಂದರೆ – www.vishvakannada.com, www.ejnana.com, hosadigantha.com ಇತ್ಯಾದಿ ನೀಡಬಹುದು. ಇಲ್ಲೊಂದು ವಿಷಯ ಗಮನಿಸಿದಿರಾ? ಕನ್ನಡ ಜಾಲತಾಣಗಳಿಗೂ ಅವುಗಳ ವಿಳಾಸ ಇಂಗ್ಲಿಶಿನಲ್ಲೇ ಇವೆ ಎಂದು. ಇದು ಯಾಕೆ […]
ಇದು ಮಾಹಿತಿ ಯುಗ
ಮಾಹಿತಿ ಕಳ್ಳರಿದ್ದಾರೆ, ಎಚ್ಚರಿಕೆ ನೀವು ಯಾವುದಾದರೂ ಸೂಪರ್ ಮಾರ್ಕೆಟ್ಟಿಗೆ ಹೋದಾಗ ಅಲ್ಲಿ ಒಂದು ಪೆಟ್ಟಿಗೆ ಇಟ್ಟು ಇದರಲ್ಲಿ ನಿಮ್ಮ ಹೆಸರು, ವಿಳಾಸ, ಫೋನ್ ಸಂಖ್ಯೆ ನೀಡಿ, ಅದರಲ್ಲಿ ಕೆಲವನ್ನು ಹೆಕ್ಕಿ ಗೆದ್ದವರಿಗೆ ವಿಶೇಷ ಬಹುಮಾನ ನೀಡುತ್ತೇವೆ ಎಂದು ಜಾಹೀರಾತು ನೀಡಿದ್ದನ್ನು ನಂಬಿ ನಿಮ್ಮ ಮಾಹಿತಿ ನೀಡಿದ್ದೀರಾ? ನಿಮಗೆ ಬಹುಮಾನ ಅಂತೂ ಬಂದಿರುವುದಿಲ್ಲ. ಆದರೆ ಅನಾವಶ್ಯಕ ಕಿರಿಕಿರಿ ಫೋನ್ ಕರೆಗಳು ಬರಲು ಪ್ರಾರಂಭವಾಗಿರುತ್ತದೆ. ಇವೆಲ್ಲ ಜನರ ವೈಯಕ್ತಿಕ ಮಾಹಿತಿ ಸಂಗ್ರಹಿಸುವ ಹಳೆಯ ವಿಧಾನಗಳಾದವು. ಈಗ ಎಲ್ಲವೂ ಆನ್‌ಲೈನ್. ನಿಮ್ಮ […]
ಸ್ಟೆಗನೋಗ್ರಫಿ
ಚಿತ್ರದೊಳಗೆ ಗುಪ್ತ ಪತ್ರ ಗುಪ್ತ ಸಂದೇಶಗಳನ್ನು ಒಬ್ಬರಿಂದೊಬ್ಬರಿಗೆ ಕಳುಹಿಸುವುದು ಬಹು ಪುರಾತನ ವಿದ್ಯೆ. ಪುರಾಣಗಳಲ್ಲೇ ಇದರ ಉಲ್ಲೇಖಗಳಿವೆ. ಯುದ್ಧಕಾಲದಲ್ಲಿ ಸೈನಿಕರು ತಮ್ಮೊಳಗೆ, ಬೇಹುಗಾರಿಕೆ ಮಾಡುವವರು ತಮ್ಮೊಳಗೆ, ದೇಶದಿಂದ ದೇಶಕ್ಕೆ, ಹೀಗೆ ಹಲವು ರೀತಿಯಲ್ಲಿ ಗುಪ್ತ ಸಂದೇಶಗಳನ್ನು ಕಳುಹಿಸಲಾಗುತ್ತಿತ್ತು. ಈಗಲೂ ಕಳುಹಿಲಾಗುತ್ತಿದೆ. ಇಂತಹ ಗುಪ್ತ ಸಂದೇಶಗಳಲ್ಲಿ ಹಲವು ನಮೂನೆ. ಪದದಲ್ಲಿಯ ಅಕ್ಷರಗಳನ್ನು ಅದಲುಬದಲು ಮಾಡಿ ಮಾತನಾಡುವುದು ತುಂಬ ಸರಳವಾದ ಒಂದು ವಿಧಾನ. ಇದನ್ನು ಬಹುತೇಕ ಮಂದಿ ಚಿಕ್ಕವರಾಗಿದ್ದಾಗ ಮಾಡಿರುತ್ತೀರಿ. ಅಕ್ಷರಗಳ ಬದಲಿಗೆ ಅಂಕಿಗಳನ್ನು ಬಳಸುವುದು ಕೂಡ ಒಂದು ವಿಧಾನ. […]
ಚತುರ ಮನೆ
ಮನೆಯೊಳಗೆ ಮನೆಯೊಡೆಯನಿಲ್ಲ ಎಂಬ ಸಾಲು ಕೇಳಿರಬಹುದು. ಮನೆಯ ಯಜಮಾನ ಎಲ್ಲಿಗೋ ಹೋಗಿ ಕಸ ಗುಡಿಸದೆ ಮನೆಯೆಲ್ಲ ಗಲೀಜಾದಾಗ ಈ ಸಾಲಿನ ಬಳಕೆಯಾಗುತ್ತದೆ. ಈಗಿನ ಆಧುನಿಕ ತಂತ್ರಜ್ಞಾನದ ಕಾಲದಲ್ಲಿ ಮನೆಯೊಳಗಡೆ ಮನೆಯೊಡೆಯನಿಲ್ಲದಿದ್ದರೂ ಮನೆಯನ್ನು ಸದಾ ಸ್ವಚ್ಛವಾಗಿಟ್ಟು, ರಾತ್ರಿ ದೀಪ ಹಚ್ಚಿ, ಹಗಲು ದೀಪ ಆರಿಸಿ, ಮನೆಯೊಳಗೆ ಮನೆಯೊಡೆಯನಿದ್ದಾನೆ ಎಂಬ ಭಾವನೆ ಮೂಡುವಂತೆ ಮಾಡಬಲ್ಲ ಚತುರ ಮನೆಗಳಿವೆ. ಇವುಗಳನ್ನು ಇಂಗ್ಲಿಷಿನಲ್ಲಿ smart home ಎನ್ನುತ್ತಾರೆ. ಚತುರ ಮನೆ ಅಂದರೆ ಏನು? ಬನ್ನಿ ಈ ಸಂಚಿಕೆಯಲ್ಲಿ ಅದನ್ನು ತಿಳಿದುಕೊಳ್ಳೋಣ. ಚತುರ ಮನೆ […]
ಅಂತರಜಾಲದಲ್ಲೊಂದು ಕತ್ತಲ ಲೋಕ
ನೀವು ಬಳಸುವ ಅಂತರಜಾಲದಲ್ಲಿ ನಿಮ್ಮ ಕಣ್ಣಿಗೆ ಬೀಳದ ಒಂದು ಭೂಗತ ಜಗತ್ತಿದೆ. ಅದರಲ್ಲಿ ಬಹುತೇಕ ಕ್ರಿಮಿನಲ್ ಚಟುವಟಿಕೆಗಳೇ ನಡೆಯುತ್ತಿವೆ. ಅದು ನಿಮ್ಮ ಮಾಮೂಲಿ ಶೋಧಕ ತಂತ್ರಾಂಶಗಳ ಕಣ್ಣಿಗೆ ಬೀಳುವುದಿಲ್ಲ. ಬನ್ನಿ. ಅಂತರಜಾಲದಲ್ಲಿರುವ ಕತ್ತಲ ಲೋಕವನ್ನು ತಿಳಿಯೋಣ. ಅಂತರಜಾಲದಲ್ಲಿ ನೀವು ಏನು ಮಾಡಿದರೂ ಗೂಗ್ಲ್‌ಗೆ ಗೊತ್ತಾಗುತ್ತದೆ. ಅಂದರೆ ಬಹುತೇಕ ಎಲ್ಲ ಕೆಲಸಗಳೂ ಅದಕ್ಕೆ ಗೊತ್ತಾಗುತ್ತದೆ. ಅದಕ್ಕೆ ಮಾತ್ರವಲ್ಲ. ಫೇಸ್‌ಬುಕ್ ಕೂಡ ನಿಮ್ಮನ್ನು ಅಂತರಜಾಲದಲ್ಲಿ ಹಿಂಬಾಲಿಸುತ್ತದೆ. ನೀವು ಸಿಗ್ನಲ್‌ಗೆ ಕಾಯುತ್ತಿರುವಾಗ ನಿಮ್ಮ ವಾಹನವನ್ನು ಯಾವುದೋ ಬಾರ್ ಮುಂದೆ ಎರಡು ನಿಮಿಷ […]
ಅಂತರಿಕ್ಷದಿಂದ ಅಂತರಜಾಲ
ಉಪಗ್ರಹ ಮೂಲಕ ಅಂತರಜಾಲ ಸಂಪರ್ಕ ಕೊರೊನಾದಿಂದಾಗಿ ಜೀವನದಲ್ಲಿ, ಜೀವನಶೈಲಿಯಲ್ಲಿ, ಹಲವು ಏರುಪೇರುಗಳಾಗಿವೆ. ಅವುಗಳಲ್ಲಿ ಒಂದು ಶಿಕ್ಷಣ. ಶಾಲಾಪಾಠಗಳೆಲ್ಲ ಆನ್‌ಲೈನ್ ಆಗಿವೆ. ಇದರಿಂದಾಗಿ ಹಳ್ಳಿಗಾಡಿನಲ್ಲಿರುವವರಿಗೆ ಬಹು ದೊಡ್ಡ ತೊಂದರೆ ಆಗಿದೆ. ನಿಮಗೆಲ್ಲ ತಿಳಿದೇ ಇರುವಂತೆ ಭಾರತದ ಹಳ್ಳಿಗಳಲ್ಲಿ ಅಂತರಜಾಲ ಸಂಪರ್ಕ ಸಮರ್ಪಕವಾಗಿಲ್ಲ. ಬ್ರಾಡ್‌ಬ್ಯಾಂಡ್ ಎಲ್ಲ ಮನೆಗಳಿಗೆ ಲಭ್ಯವಿಲ್ಲ. ಮೊಬೈಲ್ ಸಿಗ್ನಲ್ ಕೂಡ ಎಲ್ಲ ಕಡೆ ಸರಿಯಾಗಿ ದೊರೆಯುವುದಿಲ್ಲ. ಕೆಲವು ಮಕ್ಕಳು ಮೊಬೈಲ್ ಸಿಗ್ನಲ್‌ಗಾಗಿ ಗುಡ್ಡದ ತುದಿಗೆ ಹೋಗುವುದು, ಅಲ್ಲಿ ಸಣ್ಣ ಜೋಪಡಿ ಹಾಕಿಕೊಂಡು, ಅದರಲ್ಲಿ ಕುಳಿತು ಆನ್‌ಲೈನ್ ತರಗತಿ […]
ಸ್ಮಾರ್ಟ್ ಸಿಟಿ
ಚತುರ ನಗರದೊಳಗೊಂದು ಸುತ್ತಾಟ ಒಂದಾನೊಂದು ಕಾಲದಲ್ಲಿ ಲ್ಯಾಂಡ್‌ಲೈನ್ ಫೋನ್‌ಗಳೇ ಇದ್ದವು. ಆ ಫೋನಿಗೊಂದು ಬಾಲ ಇರುತ್ತಿತ್ತು. ಅದು ಟೆಲಿಫೋನ್ ಕಂಬಕ್ಕೆ ಜೋಡಣೆಯಾಗಿರುತ್ತಿತ್ತು. ನಂತರ ಹಾಗೆ ಬಾಲವಿಲ್ಲದ ಚರವಾಣಿ ಎಂದರೆ ಮೊಬೈಲ್ ಫೋನ್‌ಗಳು ಬಂದವು. ಕೆಲವು ವರ್ಷಗಳ ನಂತರ ಈ ಫೋನ್‌ಗಳು ಚತುರವಾದವು. ಅಂದರೆ ಚತುರವಾಣಿ ಅರ್ಥಾತ್ ಸ್ಮಾರ್ಟ್‌ಫೋನ್‌ಗಳು ಬಂದವು. ಈಗ ಅವುಗಳದೇ ಕಾಲ. ಫೋನ್‌ಗಳೇನೋ ಚತುರವಾದವು. ಇತರೆ ಸಾಧನಗಳು ಹಿಂದೆ ಬಿದ್ದವೇ? ಖಂಡಿತ ಇಲ್ಲ. ಕೈಗಡಿಯಾರಗಳು ಸ್ಮಾರ್ಟ್‌ವಾಚ್ ಆದವು. ಬುದ್ಧಿವಂತ ಕನ್ನಡಕಗಳೂ ಬಂದವು. ಬಲ್ಬ್, ಫ್ಯಾನ್, ಇನ್ನೂ […]
ವಿಶ್ವವ್ಯಾಪಿ ಜಾಲ ಜನಕ
ಟಿಮ್ ಬರ್ನರ್ಸ್-ಲೀ ನೆಟ್‌ವರ್ಕ್ ಮಾರ್ಕೆಟಿಂಗ್ ಬಗ್ಗೆ ತಿಳಿಯೋಣ ಎಂದು ಅಂತರಜಾಲಕ್ಕೆ (ಇಂಟರ್‌ನೆಟ್‌ಗೆ) ಲಗ್ಗೆ ಇಡಿ. ಜಗತ್ಪ್ರಸಿದ್ಧ ತಾಣ-ಶೋಧಕ ಗೂಗ್ಲ್‌ನಲ್ಲಿ ನೆಟ್‌ವರ್ಕ್ ಮಾರ್ಕೆಟಿಂಗ್ ಎಂದು ಬೆರಳಚ್ಚಿಸಿ ಮೌಸ್ ಗುಂಡಿಯನ್ನು ಕ್ಲಿಕ್ ಮಾಡಿ. ಈಗ ನೋಡಿ. ನೆಟ್‌ವರ್ಕ್ ಮಾರ್ಕೆಟಿಂಗ್, ನೆಟ್‌ವರ್ಕ್, ಮಾರ್ಕೆಟಿಂಗ್, ಹೀಗೆ ಹಲವು ವಿಷಯಗಳ ತಾಣಗಳ ಸೂಚಿ ದೊರೆಯುತ್ತದೆ. ನೆಟ್‌ವರ್ಕ್ ಬಗ್ಗೆ ನೀಡಿರುವ ತಾಣದ ತಂತು (ಲಿಂಕ್) ಮೇಲೆ ಕ್ಲಿಕ್ ಮಾಡಿ ನೋಡಿ. ಅದು ನಿಮ್ಮನ್ನು ಗಣಕಗಳ ಜಾಲ (ನೆಟ್‌ವರ್ಕ್) ಬಗ್ಗೆ ವಿವರ ನೀಡುವ ತಾಣವಾಗಿರುತ್ತದೆ. ಅಲ್ಲಿರುವ ಇನ್ಯಾವುದಾದರೂ […]