ಹೇಗೆ ಕೆಲಸ ಮಾಡುತ್ತವೆ? ಹಿಂದಿನ ಸಂಚಿಕೆಯಲ್ಲಿ ವಿದ್ಯುತ್ ಚಾಲಿತ ಕಾರುಗಳ ಬಗ್ಗೆ ತಿಳಿದುಕೊಂಡೆವು. ಈ ಸಲ ಅವುಗಳ ಕುಟುಂಬಕ್ಕೇ ಸೇರಿದ ವಿದ್ಯುತ್ ಚಾಲಿತ ಸ್ಕೂಟರುಗಳ ಬಗ್ಗೆ ತಿಳಿದುಕೊಳ್ಳೋಣ. ಹಾಗೆ ನೋಡಿದರೆ, ಸ್ಕೂಟರುಗಳ ಬಗ್ಗೆ ತಿಳಿದುಕೊಂಡು ನಂತರ ಕಾರುಗಳ ಬಗ್ಗೆ ತಿಳಿದುಕೊಳ್ಳಲು ಹೋಗಬೇಕಿತ್ತು. ಇರಲಿ. ಅಡ್ಡಿಯಿಲ್ಲ. ವಿದ್ಯುತ್ ಚಾಲಿತ ಸ್ಕೂಟರುಗಳು ನಗರ ಸಾರಿಗೆಗೆ ಸೀಮಿತ ಎನ್ನಬಹುದು. ವಿದ್ಯುತ್ ಚಾಲಿತ ಕಾರುಗಳಾದರೆ ನಗರ ಸಾರಿಗೆಗೆ ಸೀಮಿತ ಎಂದರೆ ಜನರಿಗೆ ಸ್ವಲ್ಪ ಕಿರಿಕಿರಿಯಾಗಬಹುದು. ಪೆಟ್ರೋಲ್ ಚಾಲಿತ ಸ್ಕೂಟರುಗಳೂ […]