ಯೋಜಿತ ಹಾಳಾಗುವಿಕೆ ಸುಮಾರು ದಶಕಗಳ ಕಾಲ ಹಿಂದೆ ಹೋಗೋಣ. ಒಂದಾನೊಂದು ಕಾಲದಲ್ಲಿ ಬಜಾಜ್ ಚೇತಕ್ ಎಂಬ ಸ್ಕೂಟರ್ ಇತ್ತು. ಅದಕ್ಕೆ ಅತ್ಯಂತ ಹೆಚ್ಚು ಬೇಡಿಕೆ ಇತ್ತು. ಅದನ್ನು ಕೊಳ್ಳಲು ವರ್ಷಗಳ ಕಾಲ ಕಾಯಬೇಕಿತ್ತು. ಅದನ್ನು ಕೊಂಡವರು ಹತ್ತು ಹದಿನೈದು ವರ್ಷ ಬಳಸಿ ನಂತರ ಬಹುತೇಕ ಕೊಂಡ ಬೆಲೆಗೇ ಮಾರುತ್ತಿದ್ದರು. ಆ ಸ್ಕೂಟರ್ ನಂತರವೂ ಹತ್ತು ವರ್ಷಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡುತ್ತಿತ್ತು. ಆಗಾಗ ಸರ್ವಿಸ್ ಮಾಡಿಸಿಕೊಂಡಿದ್ದರೆ ಸಾಕಿತ್ತು. ನನ್ನಲ್ಲಿದ್ದ ಬಜಾಜ್ ಸ್ಕೂಟರನ್ನು ನಾನೇ ತಕ್ಕ ಮಟ್ಟಿಗೆ ರಿಪೇರಿ […]