ಶಿಕ್ಷಣದ ಜೊತೆ ಮನರಂಜನೆ ಸೇರಿದಾಗ ಮಾಧ್ಯಮಿಕ ಶಾಲೆಯ ಎಂಟನೆಯ ತರಗತಿ. ಖಗೋಳಶಾಸ್ತ್ರದ ಪಾಠ ನಡೆಯುತ್ತಿದೆ. ಅಧ್ಯಾಪಕರು ಸೌರವ್ಯೂಹದ ಬಗ್ಗೆ ಪಾಠ ಮಾಡುತ್ತಿದ್ದಾರೆ. ಪ್ಲೂಟೋ ಮತ್ತು ನೆಪ್ಚೂನ್‌ಗಳು ಸೂರ್ಯನ ಸುತ್ತುವ ಕಕ್ಷೆಗಳ ವೈಚಿತ್ರ್ಯವನ್ನು ವಿವರಿಸುತ್ತಿದ್ದಾರೆ. ೧೯೭೯ರಿಂದ ೧೯೯೯ರ ತನಕ ಪ್ಲೂಟೋವು ಭೂಮಿಗೆ ನೆಪ್ಚೂನ್‌ಗಿಂತ ಸಮೀಪವಾಗಿತ್ತು. ಈಗ ನೆಪ್ಚೂನ್ ಹತ್ತಿರ ಬಂದಿದೆ. ಇದಕ್ಕೆ ಕಾರಣವನ್ನು ವಿವರಿಸುತ್ತಿದ್ದಂತೆ ಚೂಟಿ ಹುಡುಗನೊಬ್ಬನಿಂದ ಪ್ರಶ್ನೆ ಬಂತು “ಹಾಗಾದರೆ ಅವುಗಳು ಒಂದಕ್ಕೊಂದು ಪರಸ್ಪರ ಢಿಕ್ಕಿ ಹೊಡೆಯುವುದಿಲ್ಲವೇ?”. ಅದು ಅಸಾಧ್ಯ ಎಂಬುದನ್ನು ವಿವರಿಸಲು ಅಧ್ಯಾಪಕರು ಶತಾಯಗತಾಯ ಪ್ರಯತ್ನಿಸಿದರು. […]
Tag: ತಂತ್ರಜ್ಞಾನ
ಸ್ಟೆಗನೋಗ್ರಫಿ
ಚಿತ್ರದೊಳಗೆ ಗುಪ್ತ ಪತ್ರ ಗುಪ್ತ ಸಂದೇಶಗಳನ್ನು ಒಬ್ಬರಿಂದೊಬ್ಬರಿಗೆ ಕಳುಹಿಸುವುದು ಬಹು ಪುರಾತನ ವಿದ್ಯೆ. ಪುರಾಣಗಳಲ್ಲೇ ಇದರ ಉಲ್ಲೇಖಗಳಿವೆ. ಯುದ್ಧಕಾಲದಲ್ಲಿ ಸೈನಿಕರು ತಮ್ಮೊಳಗೆ, ಬೇಹುಗಾರಿಕೆ ಮಾಡುವವರು ತಮ್ಮೊಳಗೆ, ದೇಶದಿಂದ ದೇಶಕ್ಕೆ, ಹೀಗೆ ಹಲವು ರೀತಿಯಲ್ಲಿ ಗುಪ್ತ ಸಂದೇಶಗಳನ್ನು ಕಳುಹಿಸಲಾಗುತ್ತಿತ್ತು. ಈಗಲೂ ಕಳುಹಿಲಾಗುತ್ತಿದೆ. ಇಂತಹ ಗುಪ್ತ ಸಂದೇಶಗಳಲ್ಲಿ ಹಲವು ನಮೂನೆ. ಪದದಲ್ಲಿಯ ಅಕ್ಷರಗಳನ್ನು ಅದಲುಬದಲು ಮಾಡಿ ಮಾತನಾಡುವುದು ತುಂಬ ಸರಳವಾದ ಒಂದು ವಿಧಾನ. ಇದನ್ನು ಬಹುತೇಕ ಮಂದಿ ಚಿಕ್ಕವರಾಗಿದ್ದಾಗ ಮಾಡಿರುತ್ತೀರಿ. ಅಕ್ಷರಗಳ ಬದಲಿಗೆ ಅಂಕಿಗಳನ್ನು ಬಳಸುವುದು ಕೂಡ ಒಂದು ವಿಧಾನ. […]
ಚತುರ ಮನೆ
ಮನೆಯೊಳಗೆ ಮನೆಯೊಡೆಯನಿಲ್ಲ ಎಂಬ ಸಾಲು ಕೇಳಿರಬಹುದು. ಮನೆಯ ಯಜಮಾನ ಎಲ್ಲಿಗೋ ಹೋಗಿ ಕಸ ಗುಡಿಸದೆ ಮನೆಯೆಲ್ಲ ಗಲೀಜಾದಾಗ ಈ ಸಾಲಿನ ಬಳಕೆಯಾಗುತ್ತದೆ. ಈಗಿನ ಆಧುನಿಕ ತಂತ್ರಜ್ಞಾನದ ಕಾಲದಲ್ಲಿ ಮನೆಯೊಳಗಡೆ ಮನೆಯೊಡೆಯನಿಲ್ಲದಿದ್ದರೂ ಮನೆಯನ್ನು ಸದಾ ಸ್ವಚ್ಛವಾಗಿಟ್ಟು, ರಾತ್ರಿ ದೀಪ ಹಚ್ಚಿ, ಹಗಲು ದೀಪ ಆರಿಸಿ, ಮನೆಯೊಳಗೆ ಮನೆಯೊಡೆಯನಿದ್ದಾನೆ ಎಂಬ ಭಾವನೆ ಮೂಡುವಂತೆ ಮಾಡಬಲ್ಲ ಚತುರ ಮನೆಗಳಿವೆ. ಇವುಗಳನ್ನು ಇಂಗ್ಲಿಷಿನಲ್ಲಿ smart home ಎನ್ನುತ್ತಾರೆ. ಚತುರ ಮನೆ ಅಂದರೆ ಏನು? ಬನ್ನಿ ಈ ಸಂಚಿಕೆಯಲ್ಲಿ ಅದನ್ನು ತಿಳಿದುಕೊಳ್ಳೋಣ. ಚತುರ ಮನೆ […]
ಹಿರಿಯ ನಾಗರಿಕರಿಗೆ ತಂತ್ರಜ್ಞಾನದ ವರದಾನ
ಆನಂದ ಪಾಟೀಲ ಇಂಗ್ಲೆಂಡಿನಲ್ಲಿದ್ದಾರೆ. ಅವರ ತಾಯಿ ಬೆಂಗಳೂರಿನ ಅವರ ಮನೆಯಲ್ಲಿ ಒಬ್ಬರೇ ಇರುತ್ತಾರೆ. ಅವರಿಗೆ ವಯಸ್ಸಾಗಿದೆ. ಓಡಾಡಲು ಅಷ್ಟೇನೂ ತೊಂದರೆಯಿಲ್ಲ. ಆದರೂ ಇದ್ದಕ್ಕಿಂದ್ದಂತೆ ಬಿದ್ದರೆ? ಮನೆಯೊಳಗೆ ಯಾರಾದರೂ ನುಸುಳಿದರೆ? ಆನಂದ ಪಾಟೀಲ ಇದಕ್ಕೆಲ್ಲ ಪರಿಹಾರ ಕಂಡುಕೊಂಡಿದ್ದಾರೆ. ಅವರ ಮನೆಯಲ್ಲಿ ಸಿಸಿಟಿವಿ ಅಳವಡಿಸಿದ್ದಾರೆ. ಅವು ಮಾಮೂಲಿ ಸಿಸಿಟಿವಿ ಕ್ಯಾಮೆರಾಗಳಲ್ಲ. ಅವುಗಳು motion sensing ನಮೂನೆಯವು ಮತ್ತು ಅಂತರಜಾಲಕ್ಕೆ ಸಂಪರ್ಕಹೊಂದಿದವು. ಅಂದರೆ ಅವುಗಳ ವೀಕ್ಷಣೆಯ ವ್ಯಾಪ್ತಿಯಲ್ಲಿ ಯಾವುದೇ ವ್ಯಕ್ತಿ ನಡೆದಾಡಿದರೆ ಅವು ಪತ್ತೆ ಹಚ್ಚಿ ಅಂತರಜಾಲದ ಮೂಲಕ ಸಂಬಂಧಪಟ್ಟವರಿಗೆ ಎಚ್ಚರಿಸುತ್ತವೆ. […]