ವಾಚಾಳಿಗಳಿಗೊಂದು ವೇದಿಕೆ ಮಾನವ ಸಾಮಾಜಿಕ ಪ್ರಾಣಿ, ಸಂಘಜೀವಿ. ಆತನಿಗೆ ಸದಾ ಇನ್ನೊಬ್ಬರೊಡನೆ ಮಾತನಾಡುತ್ತಿರಬೇಕು. ಸದಾ ಸಂಪರ್ಕದಲ್ಲಿರಬೇಕು. ನಮ್ಮ ಸಾಹಿತಿ ಕಲಾವಿದರಿಗೆ ಇದು ಇನ್ನೂ ಸ್ವಲ್ಪ ಜಾಸ್ತಿ. ಅವರಿಗೆ ಯಾವತ್ತೂ ತಮ್ಮ ಮಾತುಗಳನ್ನು ಕೇಳಲು ಜನ ಬೇಕು. ಅದಕ್ಕೇ ಅವರು ಸದಾ ಒಂದಿಲ್ಲೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿರುತ್ತಾರೆ. ಈ ಕೋವಿಡ್-19 ಎಂಬ ಪಿಡುಗು ಇಂತಹವರಿಗೆ ಒಂದು ದೊಡ್ಡ ತೊಂದರೆಯನ್ನು ತಂದಿತ್ತಿದೆ. ಎಲ್ಲರೂ ಮನೆಯ ಒಳಗೇ ಬಂಧಿಯಾಗಿದ್ದಾರೆ. ಸುಮಾರು ಒಂದೂವರೆ ವರ್ಷಗಳಿಂದ ಯಾವ ಕಾರ್ಯಕ್ರಮವೂ ಇಲ್ಲದೆ ತೊಂದರೆಯಾಗಿದೆ. ಇಂತಹವರಿಗೆ ಒಂದು […]