ಎಪ್ರಿಲ್ ೨೦೨೦ ರಿಂದ ತುಷಾರ ಮಾಸಪತ್ರಿಕೆಯಲ್ಲಿ ಟೆಕ್ಕಿರಣ ಎಂಬ ಹೆಸರಿನ ಅಂಕಣ ಪ್ರಾರಂಭವಾಗಿದೆ. ಇದು ಅದರ ಮೂರನೆಯ ಕಂತು ಕ್ಯಾಮೆರ ಯಾರಿಗೆ ಗೊತ್ತಿಲ್ಲ? ಈಗ ಹಳೆಯ ಫಿಲ್ಮ್ ಕ್ಯಾಮೆರಗಳು ಕಾಣಿಸುತ್ತಿಲ್ಲ. ಎಲ್ಲವೂ ಡಿಜಿಟಲ್‌ಮಯ. ಕ್ಯಾಮೆರಗಳಲ್ಲಿ ಹಲವು ನಮೂನೆಗಳು. ಮುಖ್ಯವಾಗಿ ಎರಡು ನಮೂನೆ -ಸುಮ್ಮನೆ ನೋಡಿ ಕ್ಲಿಕ್ ಮಾಡುವಂತಹದ್ದು (aim and shoot) ಮತ್ತು ಏಕಮಸೂರ ಪ್ರತಿಫಲನ (single lens reflex –SLR). ಏಮ್ ಅಂಡ್ ಶೂಟ್ ಕ್ಯಾಮೆರಗಳು ಈಗ ಮಾರುಕಟ್ಟೆಯಿಂದ ಬಹುತೇಕ ಮಾಯವಾಗಿವೆ. ಇದಕ್ಕೆ ಕಾರಣ ಶಕ್ತಿಶಾಲಿಯಾದ […]