ಬೆವರಿಳಿಸಿ ಕೆಲಸ ಮಾಡಿದರೆ ದೊರೆಯುವುದು ವಿದ್ಯುತ್! ಬೆವರಿಳಿಸಿ ಕೆಲಸ ಮಾಡಿದರೆ ಶ್ರಮಕ್ಕೆ ತಕ್ಕ ಫ್ರತಿಫಲ ದೊರೆಯುವುದು ಎಂಬುದು ನಮ್ಮ ನಂಬಿಕೆ ಮಾತ್ರವಲ್ಲ ವಾಸ್ತವ ಕೂಡ. ಬೆವರಿಳಿಯಬೇಕಾದರೆ ಅತಿಯಾದ ಸೆಕೆಯಿರಬೇಕು ಅಥವಾ ಶಕ್ತಿ ವ್ಯಯಿಸಿ ಕೆಲಸ ಮಾಡಬೇಕು. ಶಕ್ತಿಯಲ್ಲಿ ಹಲವು ನಮೂನೆಗಳಿವೆ. ಉಷ್ಣ, ಬೆಳಕು, ವಿದ್ಯುತ್, ಇವು ನಮಗೆ ಸಾಮಾನ್ಯವಾಗಿ ಪರಿಚಿತವಿರುವ ಶಕ್ತಿಯ ನಮೂನೆಗಳು. ಶಕ್ತಿ ಹಾಕಿ ಕೆಲಸ ಮಾಡಿದರೆ ಬೆವರಿಳಿಯುತ್ತದೆ. ಈಗ ಈ ಬೆವರಿನಿಂದಲೇ ಶಕ್ತಿಯನ್ನು ಪಡೆಯುವ ವಿಧಾನವನ್ನು ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ. ಅವರು ಹಾಗೆ ಆವಿಷ್ಕರಿಸಿರುವುದು ಶಕ್ತಿಯ […]