ಭವಿಷ್ಯದ ಸಾರಿಗೆ ಆದಿಮಾನವನಿಗೆ ಸಾಗುವುದು ಒಂದು ಗುರಿಯಾಗಿತ್ತು. ಕಾಲ ಕಳೆದಂತೆ ವೇಗವಾಗಿ ಸಾಗುವುದು ಗುರಿಯಾಯಿತು. ಈಗಂತೂ ಎಲ್ಲವೂ ವೇಗವಾಗಿ ಆಗಬೇಕು. ವೇಗ ವೇಗ ಅತಿ ವೇಗ ಎಂಬುದೇ ಜೀವನದ ಮಂತ್ರವಾಗುತ್ತಿದೆ. ಮಾನವ ಒಂದಾನೊಂದು ಕಾಲದಲ್ಲಿ ಎತ್ತಿನ ಗಾಡಿಗಳಲ್ಲಿ ಪ್ರಯಾಣ ಮಾಡುತ್ತಿದ್ದ. ಒಂದೊಂದೇ ಸುಧಾರಣೆಗಳು ಆಗುತ್ತಿದ್ದಂತೆ ಸಾರಿಗೆಯಲ್ಲೂ ಸುಧಾರಣೆಗಳು ಆದವು. ಮಾನವನ ಶಕ್ತಿಯಿಂದ ಚಲಿಸುವ ಸೈಕಲು, ಯಂತ್ರಗಳಿಂದ ಸಾಗುವ ಕಾರು, ಬಸ್ಸು, ರೈಲು, ಹಡಗು, ವಿಮಾನ, ಇತ್ಯಾದಿಗಳು ಬಂದವು. ಇವುಗಳಲ್ಲಿ ಪ್ರಮುಖವಾಗಿ ಗಮನಿಸಬೇಕಾದುದು ವಿಮಾನ. ಇದು ಉಳಿದವುಗಳಿಂದ ತುಂಬ […]