ಅತಿ ಸಮೀಪ ಸಂವಹನ (Near Field Communication, NFC) ಅಥವಾ ಸಮೀಪ ಕ್ಷೇತ್ರ ಸಂವಹನ ಎಂದರೆ ತುಂಬ ಸಮೀಪದಲ್ಲಿರುವ ಎರಡು ಸಾಧನಗಳ ನಡುವೆ ನಿಸ್ತಂತು (wireless) ಸಂವಹನವನ್ನು ಸಾಧ್ಯವಾಗಿಸುವ ತಂತ್ರಜ್ಞಾನ. ಇತ್ತೀಚೆಗೆ ಮಾರುಕಟ್ಟೆಗೆ ಬರುತ್ತಿರುವ ಹಲವು ಸ್ಮಾರ್ಟ್‌ಫೋನ್‌ಗಳಲ್ಲಿ ಈ ಸೌಲಭ್ಯವಿದೆ. ಇದನ್ನು ಬಳಸಿ ಸ್ಪೀಕರ್ ಜೋಡಣೆ, ಫೋನ್‌ಗಳ ನಡುವೆ ಸಂಪರ್ಕ ಸಾಧಿಸುವುದು, ಅಂಗಡಿಗಳಲ್ಲಿ ಹಣ ವರ್ಗಾವಣೆ ಎಲ್ಲ ಸಾಧ್ಯ.