ಬೆವರಿಳಿಸಿ ಕೆಲಸ ಮಾಡಿದರೆ ದೊರೆಯುವುದು ವಿದ್ಯುತ್! ಬೆವರಿಳಿಸಿ ಕೆಲಸ ಮಾಡಿದರೆ ಶ್ರಮಕ್ಕೆ ತಕ್ಕ ಫ್ರತಿಫಲ ದೊರೆಯುವುದು ಎಂಬುದು ನಮ್ಮ ನಂಬಿಕೆ ಮಾತ್ರವಲ್ಲ ವಾಸ್ತವ ಕೂಡ. ಬೆವರಿಳಿಯಬೇಕಾದರೆ ಅತಿಯಾದ ಸೆಕೆಯಿರಬೇಕು ಅಥವಾ ಶಕ್ತಿ ವ್ಯಯಿಸಿ ಕೆಲಸ ಮಾಡಬೇಕು. ಶಕ್ತಿಯಲ್ಲಿ ಹಲವು ನಮೂನೆಗಳಿವೆ. ಉಷ್ಣ, ಬೆಳಕು, ವಿದ್ಯುತ್, ಇವು ನಮಗೆ ಸಾಮಾನ್ಯವಾಗಿ ಪರಿಚಿತವಿರುವ ಶಕ್ತಿಯ ನಮೂನೆಗಳು. ಶಕ್ತಿ ಹಾಕಿ ಕೆಲಸ ಮಾಡಿದರೆ ಬೆವರಿಳಿಯುತ್ತದೆ. ಈಗ ಈ ಬೆವರಿನಿಂದಲೇ ಶಕ್ತಿಯನ್ನು ಪಡೆಯುವ ವಿಧಾನವನ್ನು ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ. ಅವರು ಹಾಗೆ ಆವಿಷ್ಕರಿಸಿರುವುದು ಶಕ್ತಿಯ […]
Tag: ವಿದ್ಯುತ್
ಪಾಚಿಯಿಂದ ವಿದ್ಯುತ್
ದ್ಯುತಿಸಂಶ್ಲೇಷಣೆಯಿಂದ ಕೆಲಸ ಮಾಡುವ ಬ್ಯಾಟರಿ ವಿದ್ಯುತ್ತಿನಿಂದ ಚಲಿಸುವ ಸ್ಕೂಟರ್ ಮತ್ತು ಕಾರುಗಳ ಬಗ್ಗೆ ಇದೇ ಅಂಕಣದಲ್ಲಿ ಬರೆಯುವಾಗ ವಿದ್ಯುತ್ ಶಕ್ತಿಯ ಬೇಡಿಕೆ ಎಷ್ಟು ತುಂಬ ಇದೆ ಎಂದು ಬರೆಯಲಾಗಿತ್ತು. ಈ ವಿದ್ಯುತ್ ಹಲವು ಶಕ್ತಿಗಳಲ್ಲಿ ಬೇಕಾಗಿದೆ. ಸ್ಕೂಟರು, ಕಾರು, ಇತ್ಯಾದಿ ವಾಹನಗಳನ್ನು ನಡೆಸಲು ತುಂಬ ಶಕ್ತಿಯ ಬ್ಯಾಟರಿ ಬೇಕು. ಮೊಬೈಲು, ಟ್ಯಾಬ್ಲೆಟ್ ಇತ್ಯಾದಿಗಳಿಗೆ ಸ್ವಲ್ಪ ಕಡಿಮೆ ಶಕ್ತಿ ಸಾಕು. ವಸ್ತುಗಳ ಅಂತರಜಾಲದಲ್ಲಿ ಬಳಕೆಯಾಗುವ ಬ್ಯಾಟರಿಗಳಿಗೆ ಅತಿ ಕಡಿಮೆ ಶಕ್ತಿ ಸಾಕು. ಅಂತರಜಾಲದ ಮೂಲಕ ಸಂಪರ್ಕ ಹೊಂದಿರುವಂತಹ ವಸ್ತುಗಳ […]
ಪ್ರೇರಿತ ತಪನದಿಂದ ಅಡುಗೆ
ಇಂಡಕ್ಷನ್ ಕುಕಿಂಗ್ ಅಡುಗೆ ಮಾಡಲು ಗ್ಯಾಸ್ ಸ್ಟೌವ್ ಗೊತ್ತು. ಇಲೆಕ್ಟ್ರಿಕ್ ಹೀಟರ್ ಕೂಡ ಗೊತ್ತು. ಇನ್ನೂ ಒಂದು ಇದೆ. ಅದು ಇಂಡಕ್ಷನ್ ಹೀಟರ್ ಅಥವಾ ಕುಕರ್. ಅದನ್ನು ಯುರೋಪಿನಲ್ಲಿ ಹೋಬ್ ಎಂದೂ ಕರೆಯುತ್ತಾರೆ. ಇದನ್ನು ನೀವೆಲ್ಲ ನೋಡಿರಬಹುದು. ಹಲವರು ಬಳಸಿರಲೂಬಹುದು. ಇದರಲ್ಲಿ ಒಂದು ಪ್ಲೇಟ್ ಇರುತ್ತದೆ. ಅದರ ಮೇಲೆ ಕಬ್ಬಿಣ ತಳವಿರುವ ಅಥವಾ ಕಬ್ಬಿಣಾಂಶವಿರುವ ಲೋಹದ ತಳವಿರುವ ಪಾತ್ರವನ್ನು ಇಟ್ಟು ಸ್ವಿಚ್ ಹಾಕಿದರೆ ಪಾತ್ರೆ ಬಿಸಿಯಾಗುತ್ತದೆ. ಇದನ್ನು ಯಾಕೆ ಇಂಡಕ್ಷನ್ ಹೀಟರ್ ಎನ್ನುತ್ತಾರೆ ಎಂದು ನೋಡೋಣ. ವಿದ್ಯುತ್‌ಗೂ […]