19ನೆಯ ಶತಮಾನದ ಕೊನೆಯ ಭಾಗ ಮತ್ತು 20ನೆಯ ಶತಮಾನದಲ್ಲಿ ವಿಜ್ಞಾನವು ಅತಿ ವೇಗವಾಗಿ ಬೆಳೆಯಿತು. ಐನ್‌ಸ್ಟೈನ್ ಅವರು ವಸ್ತು ಮತ್ತು ಶಕ್ತಿ ಇವುಗಳ ನಡುವಿನ ಸಂಬಂಧವನ್ನು 1905ರಲ್ಲಿ ಸಮೀಕರಣದ ಮೂಲಕ ತೋರಿಸಿಕೊಟ್ಟರು. ಆದರೆ ಇದಕ್ಕಿಂತ ಸುಮಾರು 15 ವರ್ಷಗಳ ಹಿಂದೆಯೇ ಸ್ವಾಮಿ ವಿವೇಕಾನಂದರು ಈ ಬಗ್ಗೆ ಬರೆದಿದ್ದರು. ಅವರಿಗೆ ತಾವು ಹೇಳಬೇಕಾದುದನ್ನು ವಿಜ್ಞಾನ ಮತ್ತು ಗಣಿತದ ಸಮೀಕರಣಗಳ ಮೂಲಕ ಹೇಳಲು ತಿಳಿದಿರಲಿಲ್ಲ. 1893ರಲ್ಲಿ ಸ್ವಾಮಿ ವಿವೇಕಾನಂದರು ಅಮೆರಿಕಾದ ಶಿಕಾಗೋ ನಗರದಲ್ಲಿ ಪ್ರಪಂಚದ ಹಲವು ದೇಶಗಳ ಪ್ರತಿನಿಧಿಗಳು ಸೇರಿ […]
Tag: ವಿಜ್ಞಾನ
ಆರು ಜನರಷ್ಟು ದೂರ ಸಿದ್ಧಾಂತ
ನಿಮಗೆ ಯಾರಿಂದಲೋ ಏನೋ ಸಹಾಯ ಆಗಬೇಕಾಗಿದೆ. ಆ ವ್ಯಕ್ತಿಯ ಪರಿಚಯ ನಿಮಗಿಲ್ಲ. ಆಗ ಏನು ಮಾಡುತ್ತೀರಿ? ಆ ವ್ಯಕ್ತಿಯ ಪರಿಚಯ ಯಾರಿಗೆ ಇರಬಹುದೋ ಅವರನ್ನು ಹುಡುಕುತ್ತೀರಿ. ನಿಮಗೆ ಪರಿಚಯವಿರುವ ಯಾವುದೋ ಒಬ್ಬ ವ್ಯಕ್ತಿಗೆ ನಿಮಗೆ ಬೇಕಾದ ವ್ಯಕ್ತಿಯ ಪರಿಚಯ ಇರುವ ಇನ್ನೊಬ್ಬ ವ್ಯಕ್ತಿಯ ಪರಿಚಯ ಇರುತ್ತದೆ. ಇದನ್ನು ಹೀಗೆ ಬರೆಯೋಣ. ನಿಮಗೆ ಬೇಕಾದ ವ್ಯಕ್ತಿ “ಕ”. ನಿಮಗೆ ಪರಿಚಯ ಇರುವ ವ್ಯಕ್ತಿ “ಬ”. ಈ ಇಬ್ಬರಿಗೂ ಪರಿಚಯ ಇರುವ ವ್ಯಕ್ತಿಯೊಬ್ಬ ಇದ್ದಾನೆ. ಆತ “ಚ”. ಈಗ ನೀವು […]