Gadget Loka

All about gadgtes in Kannada

Tag: ಮೋಸ

ಕೆಡಲೆಂದೇ ವಿನ್ಯಾಸ ಮಾಡುವುದು

ಯೋಜಿತ ಹಾಳಾಗುವಿಕೆ ಸುಮಾರು ದಶಕಗಳ ಕಾಲ ಹಿಂದೆ ಹೋಗೋಣ. ಒಂದಾನೊಂದು ಕಾಲದಲ್ಲಿ ಬಜಾಜ್ ಚೇತಕ್ ಎಂಬ ಸ್ಕೂಟರ್ ಇತ್ತು. ಅದಕ್ಕೆ ಅತ್ಯಂತ ಹೆಚ್ಚು ಬೇಡಿಕೆ ಇತ್ತು. ಅದನ್ನು ಕೊಳ್ಳಲು ವರ್ಷಗಳ ಕಾಲ ಕಾಯಬೇಕಿತ್ತು. ಅದನ್ನು ಕೊಂಡವರು ಹತ್ತು ಹದಿನೈದು ವರ್ಷ ಬಳಸಿ ನಂತರ ಬಹುತೇಕ ಕೊಂಡ ಬೆಲೆಗೇ ಮಾರುತ್ತಿದ್ದರು. ಆ ಸ್ಕೂಟರ್ ನಂತರವೂ ಹತ್ತು ವರ್ಷಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡುತ್ತಿತ್ತು. ಆಗಾಗ ಸರ್ವಿಸ್ ಮಾಡಿಸಿಕೊಂಡಿದ್ದರೆ ಸಾಕಿತ್ತು. ನನ್ನಲ್ಲಿದ್ದ ಬಜಾಜ್ ಸ್ಕೂಟರನ್ನು ನಾನೇ ತಕ್ಕ ಮಟ್ಟಿಗೆ ರಿಪೇರಿ […]

ಜಾಲಾಪರಾಧ

ಮಾಹಿತಿ ಹೆದ್ದಾರಿಯ ಕಿಡಿಗೇಡಿಗಳು ಕಳೆದು ಎರಡು ಸಂಚಿಕೆಗಳಲ್ಲಿ ಅಂತರಜಾಲದ ಮೂಲಕ ಮಾಡುವ ಎರಡು ಅಪರಾಧಗಳ ಬಗ್ಗೆ ತಿಳಿದುಕೊಂಡೆವು. ಅಂತರಜಾಲ, ಗಣಕ ಮತ್ತು ಇತರೆ ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ಬಳಸಿ ಮಾಡುವ ಅಪರಾಧಗಳ ಪಟ್ಟಿ ಬಲು ದೊಡ್ಡದಿದೆ. ಇಂತಹ ಅಪರಾಧಗಳಿಗೆ ಇಂಗ್ಲಿಷಿನಲ್ಲಿ cyber crime ಎಂಬ ಹೆಸರಿದೆ. ನಾವು ಇದಕ್ಕೆ ಕನ್ನಡದಲ್ಲಿ ಸೈಬರ್ ಅಪರಾಧ, ಜಾಲ ಅಪರಾಧ ಅಥವಾ ಜಾಲಾಪರಾಧ ಎನ್ನಬಹುದು. ಇದು ತುಂಬ ದೊಡ್ಡ ವಿಷಯ. ಇದರಲ್ಲಿ ಹಲವು ವಿಭಾಗಗಳಿವೆ. ಕೆಲವು ಜಾಲಾಪರಾಧಗಳ ಬಗ್ಗೆ ಚುಟುಕಾಗಿ ತಿಳಿದುಕೊಳ್ಳೋಣ. […]

ಅಂತರಜಾಲದಲ್ಲಿ ಗಾಳಹಾಕುವಿಕೆ

ಮಾಹಿತಿ ಕಳ್ಳರ ಮೀನುಗಾರಿಕೆ ನಿಮಗೊಂದು ಇಮೈಲ್ ಬಂದಿದೆ ಎಂದಿಟ್ಟುಕೊಳ್ಳೋಣ. ನಿಮ್ಮ ಬ್ಯಾಂಕ್ ಕೆನರಾ ಬ್ಯಾಂಕ್ ಆಗಿದ್ದಲ್ಲಿ ಅದು ನಿಮ್ಮ ಬ್ಯಾಂಕಿನಿಂದಲೇ ಬಂದಂತೆ ಕಾಣಿಸುತ್ತದೆ. ಕೆನರಾ ಬ್ಯಾಂಕಿನ ಲಾಂಛನ ಎಲ್ಲ ಇರುತ್ತದೆ. ಸಾಮಾನ್ಯವಾಗಿ ಬ್ಯಾಂಕಿನಿಂದ ಬರುವ ಇತರೆ ಇಮೈಲ್‌ಗಳ ಬಣ್ಣ, ಪಠ್ಯ, ವಿನ್ಯಾಸಗಳಲ್ಲೇ ಇರುತ್ತದೆ. ನಿಮ್ಮ ಪಾಸ್‌ವರ್ಡ್‌ನಲ್ಲಿ ದೋಷವಿದೆ. ಆದುದರಿಂದ ಕೂಡಲೆ ಅದನ್ನು ಬದಲಿಸಿ ಎಂದು ಆ ಇಮೈಲ್‌ನಲ್ಲಿ ಬರೆದಿರುತ್ತದೆ. ಪಾಸ್‌ವರ್ಡ್ ಬದಲಿಸಲು ಇಲ್ಲಿ ಕ್ಲಿಕ್ ಮಾಡಿ ಎಂದಿರುತ್ತದೆ. ಇವೆಲ್ಲ ಸಾಮಾನ್ಯವಾಗಿ ಬ್ಯಾಂಕಿನಿಂದ ಇಮೈಲ್‌ನಲ್ಲಿರುವಂತೆಯೇ ಇವೆ ಎನ್ನಬಹುದು. ಆದರೆ […]

ಸಾಲ ನೀಡುವ ಆಪ್‌ಗಳ ಜಾಲಕ್ಕೆ ಬೀಳದಿರಿ

ಯಾವುದೇ ಕಿರುತಂತ್ರಾಂಶ (ಆಪ್) ತೆರೆದರೂ ಇದ್ದಕ್ಕಿದ್ದಂತೆ ಯಾವುದೋ ಸಾಲ ನೀಡುವ ಕಿರುತಂತ್ರಾಂಶದ ಜಾಹೀರಾತು ಕಂಡುಬರುವುದನ್ನು ನೀವು ಗಮನಿಸಿದ್ದೀರಾ? ಬಹಳ ಆಕರ್ಷಕ ಭಾಷೆಯಲ್ಲಿ ಅವು ಸೆಳೆಯುತ್ತವೆ. ಒಂದು ಜಾಹೀರಾತು ನಾನು ಗಮನಿಸಿದ್ದು ಹೀಗಿತ್ತು – ಈ ಜಾಹೀರಾತನ್ನು ಸ್ಕಿಪ್ ಮಾಡಲು ಪ್ರಯತ್ನಿಸುತ್ತಿದ್ದೀರಾ? ಅದು ಸಾಧ್ಯವಿಲ್ಲ. ಆದರೆ ಸಾಲಕ್ಕಾಗಿ ಓಡಾಡುವುದನ್ನು ಸ್ಕಿಪ್ ಮಾಡಬಹುದು. ಅದಕ್ಕಾಗಿ ಈ ಆಪ್ ಅನ್ನು ಇನ್‌ಸ್ಟಾಲ್ ಮಾಡಿ – ಎಂದು ಅದು ಹೇಳುತ್ತಿತ್ತು. ನಿಮ್ಮ ಆಸ್ತಿ, ಸಂಪಾದನೆ ಬಗ್ಗೆ ಹೆಚ್ಚಿಗೆ ದಾಖಲೆಗಳನ್ನು ಕೇಳದೆ ಸಾಲ ನೀಡುವ […]

Gadget Loka © 2018