ರಕ್ತದೊತ್ತಡ ಅಳೆಯಿರಿ ತುಷಾರ ಮಾಸಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ಟೆಕ್ಕಿರಣ ಅಂಕಣದ ಆರನೆಯ ಕಂತು ರಕ್ತದೊತ್ತಡ ಅಥವಾ ರಕ್ತದ ಏರೊತ್ತಡ ಒಂದು ಸಾಮಾನ್ಯ ಕಾಯಿಲೆಯಾಗುತ್ತಿದೆ. ಹೈ ಬ್ಲಡ್‌ಪ್ರಷರ್ (ಹೈ ಬಿ.ಪಿ.), ಹೈಪರ್‌ಟೆನ್ಶನ್ ಅಥವಾ ಸರಳವಾಗಿ ಬಿ.ಪಿ. ಎಂದೂ ಇದನ್ನು ಕರೆಯುತ್ತಾರೆ. ಭಾರತದಲ್ಲೂ ಇದು ಜನಸಂಖ್ಯೆಯ ಗಣನೀಯ ಭಾಗವನ್ನು ಬಾಧಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ರಕ್ತದ ಏರೊತ್ತಡವನ್ನು “ಶಾಂತಿಯುತ ಕೊಲೆಗಾರ” ಎಂದು ವರ್ಣಿಸಿದೆ. ರಕ್ತದ ಏರೊತ್ತಡಕ್ಕೆ ಅನುವಂಶಿಕ ಮತ್ತು ಜೀವನಶೈಲಿಗಳು ಕಾರಣವೆಂದು ಹೇಳಲಾಗುತ್ತಿದೆ. ರಕ್ತದ ಏರೊತ್ತಡ ಪ್ರಾರಂಭದಲ್ಲಿ ಯಾವ […]