ಗಾಜಿಗೆ ಒಂದು ಅತ್ಯುತ್ತಮ ಗುಣ ಇದೆ. ಅದು ಪಾರದರ್ಶಕತ್ವ. ಇದರಿಂದಾಗಿ ಅದರ ಬಳಕೆ ಹಲವು ಕ್ಷೇತ್ರಗಳಲ್ಲಿ ಆಗುತ್ತಿದೆ. ಕಿಟಿಕಿ, ಸೌರ ಪ್ಯಾನೆಲ್, ಟಿವಿ ಪರದೆ, ಇನ್ನೂ ಏನೇನೋ. ಆದರೆ ಈ ಗಾಜಿನ ಒಂದು ದೌರ್ಬಲ್ಯ ಎಂದರೆ ಅದು ಸುಲಭವಾಗಿ ಒಡೆಯುತ್ತದೆ ಎಂಬುದು. ಪಾರದರ್ಶಕತ್ವ ಬೇಕು, ಆದರೆ ಒಡೆಯಬಾರದು, ಎಂಬ ಸಂದರ್ಭಗಳಲ್ಲಿ ಪ್ಲಾಸ್ಟಿಕ್ಕಿನ ಬಳಕೆ ಆಗುತ್ತದೆ. ಆದರೆ ಇಲ್ಲಿ ಇನ್ನೊಂದು ಸಮಸ್ಯೆ ಇದೆ. ಪ್ಲಾಸ್ಟಿಕ್ ಪರಿಸರಕ್ಕೆ ಹಾನಿಕಾರಕ. ಶತಮಾನಗಳ ಕಾಲ ಅದು ಕೊಳೆಯುವುದಿಲ್ಲ. ಪ್ಲಾಸ್ಟಿಕ್ಕಿನಿಂದಾಗುವ ತೊಂದರೆಗಳ ಬಗ್ಗೆಯೇ ಒಂದು […]