ಮಹಾಭಾರತದಲ್ಲಿ ಒಂದು ಆಖ್ಯಾನ ಇದೆ. ಕೃಷ್ಣ ತನ್ನ ತಂಗಿ ಸುಭದ್ರೆಗೆ ಚಕ್ರವ್ಯೂಹವನ್ನು ಭೇದಿಸುವ ಉಪಾಯವನ್ನು ಹೇಳುತ್ತಿರುತ್ತಾನೆ. ಆಗ ಆಕೆ ಗರ್ಭಿಣಯಾಗಿರುತ್ತಾಳೆ. ಆಕೆಯ ಗರ್ಭದಲ್ಲಿ ಅಭಿಮನ್ಯು ಇರುತ್ತಾನೆ. ಆತ ಅದನ್ನು ಗರ್ಭದಲ್ಲಿದ್ದಾಗಲೇ ಕೇಳಿಸಿಕೊಳ್ಳುತ್ತಾನೆ. ಸುಭದ್ರೆ ನಿದ್ರೆಗೆ ಜಾರಿದಳು ಎಂದು ಕೃಷ್ಣ ಹೇಳುವುದನ್ನು ನಿಲ್ಲಿಸುತ್ತಾನೆ. ಆದುದರಿಂದ ಅಭಿಮನ್ಯುವಿಗೆ ಚಕ್ರವ್ಯೂಹವನ್ನು ಭೇದಿಸಿ ಒಳಕ್ಕೆ ಹೋಗುವುದು ಮಾತ್ರ ಗೊತ್ತಿರುತ್ತದೆ. ವಾಪಾಸು ಹಿಂದಕ್ಕೆ ಬರುವುದು ತಿಳಿದಿರುವುದಿಲ್ಲ. ಮುಂದಕ್ಕೆ ಕುರುಕ್ಷೇತ್ರ ಯುದ್ಧದಲ್ಲಿ ಆತ ಚಕ್ರವ್ಯೂಹದೊಳಕ್ಕೆ ನುಗ್ಗಿ ಸಾಯುತ್ತಾನೆ. ಇದು ಬಹುತೇಕ ಭಾರತೀಯರಿಗೆ ತಿಳಿದಿರುವ ಕಥೆ. […]