ಜಾಲಾಪರಾಧಗಳಿಗೆ ಕಡಿವಾಣ ಹಿಂದಿನ ಸಂಚಿಕೆಗಳಲ್ಲಿ ಯಾವೆಲ್ಲ ರೀತಿಯಲ್ಲಿ ಜಾಲಾಪರಾಧಗಳು ನಡೆಯುತ್ತವೆ ಎಂದು ಓದಿದಿರಿ. ಯಾವೆಲ್ಲ ರೀತಿಯಲ್ಲಿ ತೊಂದರೆಗೊಳಗಾಗುತ್ತೀರಿ ಎಂದೂ ಓದಿದಿರಿ. ಜಾಲಾಪರಾಧಗಳಲ್ಲಿ ಬಹುದೊಡ್ಡ ಭಾಗ ಹಣಕಾಸಿಗೆ ಸಂಬಂದಪಟ್ಟದ್ದು. “ನಿಮ್ಮ ಬ್ಯಾಂಕಿನಿಂದ ಫೋನ್ ಮಾಡುತ್ತಿದ್ದೇನೆ. ನಿಮ್ಮ ಅಕೌಂಟ್ ಅನ್ನು ನಮ್ಮ ಕಂಪ್ಯೂಟರಿನಲ್ಲಿ ಅಪ್‌ಡೇಟ್ ಮಾಡುತ್ತಿದ್ದೇವೆ. ನಿಮ್ಮ ಫೋನಿಗೆ ಒಂದು ಓಟಿಪಿ ಬಂದಿರುತ್ತದೆ. ಅದನ್ನು ನನಗೆ ಓದಿ ಹೇಳಿ.” ಎಂದು ಫೋನ್ ಬಂದಿರುತ್ತದೆ. ಅದನ್ನು ನಂಬಿ ಓಟಿಪಿ ಹೇಳಿದರೆ ಬ್ಯಾಂಕಿನ ಖಾತೆಯಿಂದ ಹಣ ಹೋಗಿರುತ್ತದೆ. ಇನ್ನೊಂದು ಸಾಮಾನ್ಯ ದರೋಡೆಯ ವಿಧಾನವೆಂದರೆ […]