ಶಿಕ್ಷಣದ ಜೊತೆ ಮನರಂಜನೆ ಸೇರಿದಾಗ ಮಾಧ್ಯಮಿಕ ಶಾಲೆಯ ಎಂಟನೆಯ ತರಗತಿ. ಖಗೋಳಶಾಸ್ತ್ರದ ಪಾಠ ನಡೆಯುತ್ತಿದೆ. ಅಧ್ಯಾಪಕರು ಸೌರವ್ಯೂಹದ ಬಗ್ಗೆ ಪಾಠ ಮಾಡುತ್ತಿದ್ದಾರೆ. ಪ್ಲೂಟೋ ಮತ್ತು ನೆಪ್ಚೂನ್‌ಗಳು ಸೂರ್ಯನ ಸುತ್ತುವ ಕಕ್ಷೆಗಳ ವೈಚಿತ್ರ್ಯವನ್ನು ವಿವರಿಸುತ್ತಿದ್ದಾರೆ. ೧೯೭೯ರಿಂದ ೧೯೯೯ರ ತನಕ ಪ್ಲೂಟೋವು ಭೂಮಿಗೆ ನೆಪ್ಚೂನ್‌ಗಿಂತ ಸಮೀಪವಾಗಿತ್ತು. ಈಗ ನೆಪ್ಚೂನ್ ಹತ್ತಿರ ಬಂದಿದೆ. ಇದಕ್ಕೆ ಕಾರಣವನ್ನು ವಿವರಿಸುತ್ತಿದ್ದಂತೆ ಚೂಟಿ ಹುಡುಗನೊಬ್ಬನಿಂದ ಪ್ರಶ್ನೆ ಬಂತು “ಹಾಗಾದರೆ ಅವುಗಳು ಒಂದಕ್ಕೊಂದು ಪರಸ್ಪರ ಢಿಕ್ಕಿ ಹೊಡೆಯುವುದಿಲ್ಲವೇ?”. ಅದು ಅಸಾಧ್ಯ ಎಂಬುದನ್ನು ವಿವರಿಸಲು ಅಧ್ಯಾಪಕರು ಶತಾಯಗತಾಯ ಪ್ರಯತ್ನಿಸಿದರು. […]
Tag: ಶಿಕ್ಷಣ
ಅರಿವಿನ ಕೌಶಲ್ಯ ಮತ್ತು ವಿಕಿಪೀಡಿಯ ಸಂಪಾದನೆ
“ನನ್ನ ಮಗನಿಗೆ 85% ಅಂಕಗಳಿದ್ದವು. ಅವನ ಸಹಪಾಠಿಗೆ ಕೇವಲ 65% ಅಂಕಗಳಿದ್ದವು. ಆದರೆ ಸಾಫ್ಟ್‌ವೇರ್ ಕಂಪೆನಿಯಲ್ಲಿ ಅವನಿಗೆ ಕೆಲಸ ಸಿಕ್ಕಿತು. ನನ್ನ ಮಗನಿಗೆ ಸಿಗಲಿಲ್ಲ” -ಈ ರೀತಿಯ ಮಾತುಗಳನ್ನು ಆಗಾಗ ಕೇಳುತ್ತೇವೆ. ಇಲ್ಲಿ ಏನಾಗಿರುತ್ತದೆ ಎಂದರೆ 85% ಅಂಕ ತೆಗೆದವನು ಪರೀಕ್ಷೆಗೋಸ್ಕರ ಓದಿರುತ್ತಾನೆ. ನಮ್ಮ ಪರೀಕ್ಷೆ ಪದ್ಧತಿಗಳೂ ಅಷ್ಟೆ. ಆಲೋಚನಾಶಕ್ತಿಯನ್ನು ಪರೀಕ್ಷಿಸುವುದಿಲ್ಲ. ಪಾಠಗಳನ್ನು ಎಷ್ಟು ಬಾಯಿಪಾಠ ಮಾಡಿದ್ದಾನೆ ಎಂದಷ್ಟೆ ಪರೀಕ್ಷಿಸುತ್ತವೆ. ಆದರೆ ಕಂಪೆನಿಗಳಿಗೆ ನಡೆದಾಡುವ ವಿಶ್ವಕೋಶಗಳು ಬೇಡ. ಅವರಿಗೆ ತರ್ಕಬದ್ಧವಾಗಿ ಆಲೋಚಿಸಿ ಸಮಸ್ಯೆಗಳನ್ನು ಪರಿಹರಿಸುವವರು ಬೇಕು. ಇದಕ್ಕೆ […]