ಕಾರು ಅಥವಾ ಯಾವುದೇ ವಾಹನ ಚಲಾಯಿಸಲು ಚಾಲಕನೊಬ್ಬನಿರಲೇಬೇಕಲ್ಲ? ಹಾಗೆಂದು ನೀವಂದುಕೊಂಡಿದ್ದರೆ ಅದು ಬದಲಾಗುವ ಕಾಲ ಬರುತ್ತಿದೆ ಎನ್ನಬಹುದು. ಈಗ ಚಾಲಕನಿಲ್ಲದೆಯೂ ಕಾರು ತನ್ನಷ್ಟಕ್ಕೇ ಚಲಿಸಬಲ್ಲುದು. ಅರ್ಥಾತ್ ಚಾಲಕನಿಲ್ಲದೆಯೇ ಸ್ವಯಂಚಾಲಿತವಾಗಿ ಚಲಿಸಬಲ್ಲ ಕಾರುಗಳು ತಯಾರಾಗಿವೆ. ಅವು ಇನ್ನೂ ಭಾರತಕ್ಕೆ ಪ್ರವೇಶಿಸಿಲ್ಲ. ಈ ಕಾರುಗಳು ಹೇಗಿವೆ? ಅವುಗಳಲ್ಲಿ ಎಷ್ಟು ನಮೂನೆಗಳಿವೆ. ಅವುಗಳನ್ನು ಯಾರು ತಯಾರಿಸುತ್ತಿದ್ದಾರೆ? ಈ ಪ್ರಶ್ನೆಗಳಿಗೆ ಉತ್ತರವನ್ನು ಈ ಸಂಚಿಕೆಯಲ್ಲಿ ಕಂಡುಕೊಳ್ಳೋಣ. ಚಾಲಕರಹಿತ ಕಾರು, ಸ್ವಯಂಚಾಲಿತ ಕಾರು, ತಾನೇ ನಡೆಸಿಕೊಂಡು ಹೋಗುವ ಕಾರು, ರೋಬೋಟಿಕ್ ಕಾರು ಎಂದೆಲ್ಲ ಕರೆಯಲ್ಪಡುವ […]
Tag: ವಾಹನ
ಜಲಜನಕ ಚಾಲಿತ ವಾಹನಗಳು
ವಾಹನಗಳಿಗೆ ಇಂಧನ ಒದಗಿಸುವುದು ದೊಡ್ಡ ಸಮಸ್ಯೆ. ಪೆಟ್ರೋಲ್ ಮತ್ತು ಡೀಸಿಲ್ ಇಂಜಿನ್‌ಗಳ ತೊಂದರೆ ಏನು ಎಂದು ಎಲ್ಲರಿಗೂ ಗೊತ್ತು. ಅವು ವಾತಾವರಣವನ್ನು ಮಲಿನಗೊಳಿಸುವುದರಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತವೆ. ಸಾಲದುದಕ್ಕೆ ಇವುಗಳ ನಿಕ್ಷೇಪ ಇನ್ನು ಕೆಲವೇ ದಶಕಗಳಲ್ಲಿ ಬಹುತೇಕ ಖಾಲಿಯಾಗುತ್ತದೆ. ಆದುದರಿಂದ ಇವುಗಳಿಗೆ ಬದಲಿ ಇಂಧನವನ್ನು ಜಗತ್ತಿನ ಎಲ್ಲ ಕಡೆ ವಿಜ್ಞಾನಿಗಳು ಹುಡುಕುತ್ತಲೇ ಇದ್ದಾರೆ. ಒಂದು ಪ್ರಮುಖ ಪರಿಹಾರ ಎಂದರೆ ವಿದ್ಯುತ್ ಚಾಲಿತ ವಾಹನಗಳು. ಇವುಗಳ ಬಗ್ಗೆ ಇದೇ ಅಂಕಣದಲ್ಲಿ ಬರೆಯಲಾಗಿತ್ತು. ವಿದ್ಯುತ್ ಚಾಲಿತ ವಾಹನಗಳ ಪ್ರಮುಖ ಸಮಸ್ಯೆ […]