ಸ್ವಂತೀಪ್ರಿಯರಿಗೆ ಇನ್ನೊಂದು ಕ್ಯಾಮೆರ ಫೋನ್ ವಿವೊದವರ ವಿ ಶ್ರೇಣಿಯ ಫೋನ್‌ಗಳು ಫೋನ್ ಎನ್ನುವುದಕ್ಕಿಂತಲೂ ಕ್ಯಾಮೆರಗಳು ಎನ್ನುವುದೇ ಹೆಚ್ಚು ಸೂಕ್ತ. ಇವುಗಳಿಗೆ ಫೋನಿನ ಜೊತೆ ಕ್ಯಾಮೆರ ಎನ್ನುವುದಕ್ಕಿಂತ ಅಥವಾ ಕ್ಯಾಮೆರ ಜೊತೆ ಫೋನ್ ಎನ್ನಬಹುದು. ಗ್ಯಾಜೆಟ್‌ಲೋಕದಲ್ಲಿ ಹಲವು ವಿವೊ ಫೋನ್‌ಗಳ ವಿಮರ್ಶೆ ಮಾಡಲಾಗಿತ್ತು. ಈ ಸಂಚಿಕೆಯಲ್ಲಿ ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ವಿವೊ ವಿ19 ಫೋನಿನ ಕ್ಯಾಮೆರ ಕಡೆ ಗಮನ ಹರಿಸೋಣ. ಗುಣವೈಶಿಷ್ಟ್ಯಗಳು ಪ್ರಾಥಮಿಕ : 48MP+8MP+2MP+2MP (MP = ಮೆಗಾಪಿಕ್ಸೆಲ್), f/1.79 + f/2.2 (wide-angle) […]