ಮಾಹಿತಿ ಕಳ್ಳರಿದ್ದಾರೆ, ಎಚ್ಚರಿಕೆ ನೀವು ಯಾವುದಾದರೂ ಸೂಪರ್ ಮಾರ್ಕೆಟ್ಟಿಗೆ ಹೋದಾಗ ಅಲ್ಲಿ ಒಂದು ಪೆಟ್ಟಿಗೆ ಇಟ್ಟು ಇದರಲ್ಲಿ ನಿಮ್ಮ ಹೆಸರು, ವಿಳಾಸ, ಫೋನ್ ಸಂಖ್ಯೆ ನೀಡಿ, ಅದರಲ್ಲಿ ಕೆಲವನ್ನು ಹೆಕ್ಕಿ ಗೆದ್ದವರಿಗೆ ವಿಶೇಷ ಬಹುಮಾನ ನೀಡುತ್ತೇವೆ ಎಂದು ಜಾಹೀರಾತು ನೀಡಿದ್ದನ್ನು ನಂಬಿ ನಿಮ್ಮ ಮಾಹಿತಿ ನೀಡಿದ್ದೀರಾ? ನಿಮಗೆ ಬಹುಮಾನ ಅಂತೂ ಬಂದಿರುವುದಿಲ್ಲ. ಆದರೆ ಅನಾವಶ್ಯಕ ಕಿರಿಕಿರಿ ಫೋನ್ ಕರೆಗಳು ಬರಲು ಪ್ರಾರಂಭವಾಗಿರುತ್ತದೆ. ಇವೆಲ್ಲ ಜನರ ವೈಯಕ್ತಿಕ ಮಾಹಿತಿ ಸಂಗ್ರಹಿಸುವ ಹಳೆಯ ವಿಧಾನಗಳಾದವು. ಈಗ ಎಲ್ಲವೂ ಆನ್‌ಲೈನ್. ನಿಮ್ಮ […]
Tag: ಟೆಕ್ಕಿರಣ
ಸ್ಟೆಗನೋಗ್ರಫಿ
ಚಿತ್ರದೊಳಗೆ ಗುಪ್ತ ಪತ್ರ ಗುಪ್ತ ಸಂದೇಶಗಳನ್ನು ಒಬ್ಬರಿಂದೊಬ್ಬರಿಗೆ ಕಳುಹಿಸುವುದು ಬಹು ಪುರಾತನ ವಿದ್ಯೆ. ಪುರಾಣಗಳಲ್ಲೇ ಇದರ ಉಲ್ಲೇಖಗಳಿವೆ. ಯುದ್ಧಕಾಲದಲ್ಲಿ ಸೈನಿಕರು ತಮ್ಮೊಳಗೆ, ಬೇಹುಗಾರಿಕೆ ಮಾಡುವವರು ತಮ್ಮೊಳಗೆ, ದೇಶದಿಂದ ದೇಶಕ್ಕೆ, ಹೀಗೆ ಹಲವು ರೀತಿಯಲ್ಲಿ ಗುಪ್ತ ಸಂದೇಶಗಳನ್ನು ಕಳುಹಿಸಲಾಗುತ್ತಿತ್ತು. ಈಗಲೂ ಕಳುಹಿಲಾಗುತ್ತಿದೆ. ಇಂತಹ ಗುಪ್ತ ಸಂದೇಶಗಳಲ್ಲಿ ಹಲವು ನಮೂನೆ. ಪದದಲ್ಲಿಯ ಅಕ್ಷರಗಳನ್ನು ಅದಲುಬದಲು ಮಾಡಿ ಮಾತನಾಡುವುದು ತುಂಬ ಸರಳವಾದ ಒಂದು ವಿಧಾನ. ಇದನ್ನು ಬಹುತೇಕ ಮಂದಿ ಚಿಕ್ಕವರಾಗಿದ್ದಾಗ ಮಾಡಿರುತ್ತೀರಿ. ಅಕ್ಷರಗಳ ಬದಲಿಗೆ ಅಂಕಿಗಳನ್ನು ಬಳಸುವುದು ಕೂಡ ಒಂದು ವಿಧಾನ. […]
ಚತುರ ಮನೆ
ಮನೆಯೊಳಗೆ ಮನೆಯೊಡೆಯನಿಲ್ಲ ಎಂಬ ಸಾಲು ಕೇಳಿರಬಹುದು. ಮನೆಯ ಯಜಮಾನ ಎಲ್ಲಿಗೋ ಹೋಗಿ ಕಸ ಗುಡಿಸದೆ ಮನೆಯೆಲ್ಲ ಗಲೀಜಾದಾಗ ಈ ಸಾಲಿನ ಬಳಕೆಯಾಗುತ್ತದೆ. ಈಗಿನ ಆಧುನಿಕ ತಂತ್ರಜ್ಞಾನದ ಕಾಲದಲ್ಲಿ ಮನೆಯೊಳಗಡೆ ಮನೆಯೊಡೆಯನಿಲ್ಲದಿದ್ದರೂ ಮನೆಯನ್ನು ಸದಾ ಸ್ವಚ್ಛವಾಗಿಟ್ಟು, ರಾತ್ರಿ ದೀಪ ಹಚ್ಚಿ, ಹಗಲು ದೀಪ ಆರಿಸಿ, ಮನೆಯೊಳಗೆ ಮನೆಯೊಡೆಯನಿದ್ದಾನೆ ಎಂಬ ಭಾವನೆ ಮೂಡುವಂತೆ ಮಾಡಬಲ್ಲ ಚತುರ ಮನೆಗಳಿವೆ. ಇವುಗಳನ್ನು ಇಂಗ್ಲಿಷಿನಲ್ಲಿ smart home ಎನ್ನುತ್ತಾರೆ. ಚತುರ ಮನೆ ಅಂದರೆ ಏನು? ಬನ್ನಿ ಈ ಸಂಚಿಕೆಯಲ್ಲಿ ಅದನ್ನು ತಿಳಿದುಕೊಳ್ಳೋಣ. ಚತುರ ಮನೆ […]
ಸಾಲ ನೀಡುವ ಆಪ್‌ಗಳ ಜಾಲಕ್ಕೆ ಬೀಳದಿರಿ
ಯಾವುದೇ ಕಿರುತಂತ್ರಾಂಶ (ಆಪ್) ತೆರೆದರೂ ಇದ್ದಕ್ಕಿದ್ದಂತೆ ಯಾವುದೋ ಸಾಲ ನೀಡುವ ಕಿರುತಂತ್ರಾಂಶದ ಜಾಹೀರಾತು ಕಂಡುಬರುವುದನ್ನು ನೀವು ಗಮನಿಸಿದ್ದೀರಾ? ಬಹಳ ಆಕರ್ಷಕ ಭಾಷೆಯಲ್ಲಿ ಅವು ಸೆಳೆಯುತ್ತವೆ. ಒಂದು ಜಾಹೀರಾತು ನಾನು ಗಮನಿಸಿದ್ದು ಹೀಗಿತ್ತು – ಈ ಜಾಹೀರಾತನ್ನು ಸ್ಕಿಪ್ ಮಾಡಲು ಪ್ರಯತ್ನಿಸುತ್ತಿದ್ದೀರಾ? ಅದು ಸಾಧ್ಯವಿಲ್ಲ. ಆದರೆ ಸಾಲಕ್ಕಾಗಿ ಓಡಾಡುವುದನ್ನು ಸ್ಕಿಪ್ ಮಾಡಬಹುದು. ಅದಕ್ಕಾಗಿ ಈ ಆಪ್ ಅನ್ನು ಇನ್‌ಸ್ಟಾಲ್ ಮಾಡಿ – ಎಂದು ಅದು ಹೇಳುತ್ತಿತ್ತು. ನಿಮ್ಮ ಆಸ್ತಿ, ಸಂಪಾದನೆ ಬಗ್ಗೆ ಹೆಚ್ಚಿಗೆ ದಾಖಲೆಗಳನ್ನು ಕೇಳದೆ ಸಾಲ ನೀಡುವ […]
ಘನಸ್ಥಿತಿಯ ಬ್ಯಾಟರಿ
ಭಾರಿ ಬ್ಯಾಟರಿ ಬ್ಯಾಟರಿಗಳು ಎಲ್ಲ ವಿದ್ಯುತ್ ಚಾಲಿತ ಸಾಧನಗಳಿಗೂ ಬೇಕು. ಬ್ಯಾಟರಿಗಳಲ್ಲಿ ಹಲವಾರು ನಮೂನೆಗಳಿವೆ. ಬ್ಯಾಟರಿಯನ್ನು ಬ್ಯಾಟರಿ ಸೆಲ್ ಎನ್ನುವುದೇ ಸರಿಯಾದ ವೈಜ್ಞಾನಿಕ ವಿಧಾನ. ಬ್ಯಾಟರಿ ಸೆಲ್‌ಗಳ ಜೋಡಣೆಯೇ ಬ್ಯಾಟರಿ. ಆದರೆ ಬಳಕೆಯಲ್ಲಿ ಬ್ಯಾಟರಿ ಎಂದೇ ಬಂದುಬಿಟ್ಟಿದೆ. ಇರಲಿ. ಬ್ಯಾಟರಿಯ ಪ್ರಮುಖ ಅಂಗಗಳು ಮೂರು -ಋಣ ಮತ್ತು ಧನ ಇಲೆಕ್ಟ್ರೋಡ್‌ಗಳು ಮತ್ತು ಅವುಗಳ ಮಧ್ಯದಲ್ಲಿರುವ ದ್ರಾವಣ ಇಲೆಕ್ಟ್ರೋಲೈಟ್. ಲಿತಿಯಂ ಬ್ಯಾಟರಿಯಿರಲಿ, ಲೆಡ್ ಆಸಿಡ್ ಬ್ಯಾಟರಿಯಿರಲಿ, ಈ ಇಲೆಕ್ಟ್ರೋಲೈಟ್ ಸಾಮಾನ್ಯವಾಗಿ ದ್ರವವಾಗಿರುತ್ತದೆ. ನಿಮ್ಮ ಟಾರ್ಚ್‌ಗಳಲ್ಲಿ ಬಳಸುವ ಬ್ಯಾಟರಿ ಮಾತ್ರ […]
ಸತ್ತ ಜೇಡನಿಂದ ರೋಬೋಟ್
ಜೇಮ್ಸ್ ಬಾಂಡ್ ಸಿನಿಮಾವೊಂದರಲ್ಲಿ ಒಂದು ದೃಶ್ಯ. ಜೇಮ್ಸ್ ಬಾಂಡ್ ಮಲಗಿರುತ್ತಾನೆ. ಮೇಲಿನಿಂದ ಒಂದು ಜೇಡವನ್ನು ಆತನ ಮೇಲಕ್ಕೆ ನಿಧಾನವಾಗಿ ಇಳಿಸುತ್ತಾರೆ. ಅದು ಭಯಂಕರ ವಿಷಪೂರಿತ ಜೇಡ ಆಗಿರುತ್ತದೆ. ಜೇಮ್ಸ್ ಬಾಂಡ್ ಎಂದಿನಂತೆ ಸಾಯದೆ ಬಚಾವಾಗುತ್ತಾನೆ. ಆ ಸಿನಿಮಾದಲ್ಲಿ ಜೇಡವನ್ನು ದೂರ ನಿಯಂತ್ರಣದ ಮೂಲಕ ಕಳುಹಿಸಿರಲಿಲ್ಲ. ಬದಲಿಗೆ ಮೇಲಿನಿಂದ ಒಂದು ದಾರದ ಮೂಲಕ ಕಳುಹಿಸಿರುತ್ತಾರೆ. ಈಗ ಆ ವಿಷಯ ಯಾಕೆ ಅಂತೀರಾ? ನಾನೀಗ ಹೇಳಹೊರಟಿರುವುದು ಸತ್ತ ಜೇಡವನ್ನು ರೋಬೋಟ್ ಆಗಿ ಪರಿವರ್ತಿಸುವ ಬಗ್ಗೆ. ಅಮೆರಿಕಾದ ರೈಸ್ ವಿಶ್ವ ವಿದ್ಯಾಲಯದ […]
ಡಿಜಿಟಲ್ ಜಗತ್ತಿನ ಮುಕ್ತ ಮಾರುಕಟ್ಟೆ
ಅಮೆಝಾನ್, ಫ್ಲಿಪ್‌ಕಾರ್ಟ್ ಎಲ್ಲರಿಗೂ ಗೊತ್ತು. ಈ ಎರಡು ಕಂಪೆನಿಗಳು ಜಾಲಮಳಿಗೆಗಗಳ ಕ್ಷೇತ್ರವನ್ನು ಬಹುಮಟ್ಟಿಗೆ ಸಂಪೂರ್ಣವಾಗಿ ಆಕ್ರಮಿಸಿವೆ ಎನ್ನಬಹುದು. ಸಣ್ಣಪುಟ್ಟ ಜಾಲಮಳಿಗೆಗಳು ಯಾವಾಗಲೋ ಬಾಗಿಲು ಹಾಕಿವೆ. ಅದರಿಂದ ನಮಗೇನು ಎನ್ನುತ್ತೀರಾ? ಈ ಎರಡೂ ಕಂಪೆನಿಗಳ ಒಡೆತನ ಭಾರತೀಯವಲ್ಲ. ಭಾರತದ ಅಮೆಝಾನ್‌ನ ಒಡೆತನ ಅಮೆರಿಕದ ಅಮೆಝಾನ್ ಕಂಪೆನಿಯದು. ಫ್ಲಿಪ್‌ಕಾರ್ಟ್ ಮೊದಲು ಭಾರತೀಯವಾಗಿದ್ದರೂ ಈಗ ಅದರ ಒಡೆತನ ಭಾರತೀಯರದ್ದಲ್ಲ. ಮಾಹಿತಿಯು ಈಗ ಹೊಸ ಎಣ್ಣೆ ಎಂಬ ಮಾತಿದೆ. ಅಂದರೆ ಈ ಜಾಲಮಳಿಗೆಗಗಳು ತಮ್ಮ ಲಕ್ಷಾಂತರ ಗ್ರಾಹಕರ ಮಾಹಿತಿಗಳನ್ನು ಸಂಗ್ರಹಿಸಿಟ್ಟುಕೊಂಡಿವೆ. ಈ ಮಾಹಿತಿಯ […]
ವೇಪರ್‌ವೇರ್
ಆವಿಯಾದ ಯಂತ್ರಾಂಶ – ತಂತ್ರಾಂಶ ಅತಿ ಕಡಿಮೆ ಬೆಲೆಗೆ ಅತಿ ಹೆಚ್ಚು ಗುಣವೈಶಿಷ್ಟ್ಯಗಳನ್ನು ಒಳಗೊಂಡ ಒಂದು ಹೊಸ ಸಾಧನವನ್ನು ಅಥವಾ ಗ್ಯಾಜೆಟ್ ಅನ್ನು ಯಾವುದೋ ಒಂದು ಕಂಪೆನಿ ಘೋಷಿಸುತ್ತದೆ. ಎಲ್ಲರೂ ಅದಕ್ಕೆ ಕಾಯುತ್ತಿರುತ್ತಾರೆ. ಕೆಲವು ಸಂದರ್ಭಗಳಲ್ಲಿ ಮುಂಗಡ ಬುಕಿಂಗ್ ಕೂಡ ಆಗಿರುತ್ತದೆ. ಅಂತಿಮವಾಗಿ ಆ ಉತ್ಪನ್ನ ಮಾರುಕಟ್ಟೆಗೆ ಬರುವುದೇ ಇಲ್ಲ. ಇಂತಹ ಹಲವು ಘಟನೆಗಳನ್ನು ಕಂಡಿರಬಹುದು, ಕೇಳಿರಬಹುದು ಅಥವಾ ಸ್ವತಃ ಅನುಭವಿಸಿರಬಹುದು. ಮಾಹಿತಿ ತಂತ್ರಜ್ಞಾನ ಕೇತ್ರದಲ್ಲಿ ಇಂತಹವುಗಳಿಗೆ vapourware ಎಂಬ ಹೆಸರಿದೆ. vapour ಅಂದರೆ ಆವಿ. ನೀಡಲು […]
ದುರಸ್ತಿಯ ಹಕ್ಕು
ನಿಮ್ಮಲ್ಲಿ ಐಫೋನ್ ಇದೆಯೆಂದಿಟ್ಟುಕೊಳ್ಳಿ. ಅದರ ಬ್ಯಾಟರಿಯ ಆಯುಸ್ಸು ಮುಗಿದಾಗ ಏನು ಮಾಡುತ್ತೀರಿ? ಐಫೋನ್ ಮಾತ್ರವಲ್ಲ ಈಗಿನ ಯಾವುದೇ ಫೋನಿನ ಬ್ಯಾಟರಿಯನ್ನು ನಾವೇ ಬದಲಿಸುವಂತಿಲ್ಲ ಎಂಬುದನ್ನು ಗಮನಿಸಿದ್ದೀರಾ? ಒಂದು ಕಾಲದಲ್ಲಿ ಫೋನ್ ಬಿಚ್ಚಿ ನಾವೇ ಬ್ಯಾಟರಿ ಬದಲಿಸಬಹುದಿತ್ತು. ಐಫೋನ್ ಹೊರತಾಗಿ ಬೇರೆ ಯಾವುದಾದರೂ ಫೋನ್ ಆದಲ್ಲಿ ಅದರ ಗ್ಯಾರಂಟಿ ಸಮಯ ಕಳೆದ ನಂತರ ಯಾವುದಾದರೂ ಅಂಗಡಿಗೆ ಹೋಗಿ ಅವರ ಮೂಲಕ ಬ್ಯಾಟರಿ ಬದಲಿಸಬಹುದು. ಆದರೆ ಐಫೋನ್‌ಗೆ ಹಾಗಲ್ಲ. ಅವರ ಸರ್ವಿಸ್ ಸೆಂಟರಿಗೇ ಹೋಗಿ ಅವರ ಮೂಲಕವೇ ಮಾಡಿಸಬೇಕು. ನೀವು […]
ಅಂತರಜಾಲದಲ್ಲೊಂದು ಕತ್ತಲ ಲೋಕ
ನೀವು ಬಳಸುವ ಅಂತರಜಾಲದಲ್ಲಿ ನಿಮ್ಮ ಕಣ್ಣಿಗೆ ಬೀಳದ ಒಂದು ಭೂಗತ ಜಗತ್ತಿದೆ. ಅದರಲ್ಲಿ ಬಹುತೇಕ ಕ್ರಿಮಿನಲ್ ಚಟುವಟಿಕೆಗಳೇ ನಡೆಯುತ್ತಿವೆ. ಅದು ನಿಮ್ಮ ಮಾಮೂಲಿ ಶೋಧಕ ತಂತ್ರಾಂಶಗಳ ಕಣ್ಣಿಗೆ ಬೀಳುವುದಿಲ್ಲ. ಬನ್ನಿ. ಅಂತರಜಾಲದಲ್ಲಿರುವ ಕತ್ತಲ ಲೋಕವನ್ನು ತಿಳಿಯೋಣ. ಅಂತರಜಾಲದಲ್ಲಿ ನೀವು ಏನು ಮಾಡಿದರೂ ಗೂಗ್ಲ್‌ಗೆ ಗೊತ್ತಾಗುತ್ತದೆ. ಅಂದರೆ ಬಹುತೇಕ ಎಲ್ಲ ಕೆಲಸಗಳೂ ಅದಕ್ಕೆ ಗೊತ್ತಾಗುತ್ತದೆ. ಅದಕ್ಕೆ ಮಾತ್ರವಲ್ಲ. ಫೇಸ್‌ಬುಕ್ ಕೂಡ ನಿಮ್ಮನ್ನು ಅಂತರಜಾಲದಲ್ಲಿ ಹಿಂಬಾಲಿಸುತ್ತದೆ. ನೀವು ಸಿಗ್ನಲ್‌ಗೆ ಕಾಯುತ್ತಿರುವಾಗ ನಿಮ್ಮ ವಾಹನವನ್ನು ಯಾವುದೋ ಬಾರ್ ಮುಂದೆ ಎರಡು ನಿಮಿಷ […]