ಉಪಗ್ರಹ ಮೂಲಕ ಅಂತರಜಾಲ ಸಂಪರ್ಕ ಕೊರೊನಾದಿಂದಾಗಿ ಜೀವನದಲ್ಲಿ, ಜೀವನಶೈಲಿಯಲ್ಲಿ, ಹಲವು ಏರುಪೇರುಗಳಾಗಿವೆ. ಅವುಗಳಲ್ಲಿ ಒಂದು ಶಿಕ್ಷಣ. ಶಾಲಾಪಾಠಗಳೆಲ್ಲ ಆನ್‌ಲೈನ್ ಆಗಿವೆ. ಇದರಿಂದಾಗಿ ಹಳ್ಳಿಗಾಡಿನಲ್ಲಿರುವವರಿಗೆ ಬಹು ದೊಡ್ಡ ತೊಂದರೆ ಆಗಿದೆ. ನಿಮಗೆಲ್ಲ ತಿಳಿದೇ ಇರುವಂತೆ ಭಾರತದ ಹಳ್ಳಿಗಳಲ್ಲಿ ಅಂತರಜಾಲ ಸಂಪರ್ಕ ಸಮರ್ಪಕವಾಗಿಲ್ಲ. ಬ್ರಾಡ್‌ಬ್ಯಾಂಡ್ ಎಲ್ಲ ಮನೆಗಳಿಗೆ ಲಭ್ಯವಿಲ್ಲ. ಮೊಬೈಲ್ ಸಿಗ್ನಲ್ ಕೂಡ ಎಲ್ಲ ಕಡೆ ಸರಿಯಾಗಿ ದೊರೆಯುವುದಿಲ್ಲ. ಕೆಲವು ಮಕ್ಕಳು ಮೊಬೈಲ್ ಸಿಗ್ನಲ್‌ಗಾಗಿ ಗುಡ್ಡದ ತುದಿಗೆ ಹೋಗುವುದು, ಅಲ್ಲಿ ಸಣ್ಣ ಜೋಪಡಿ ಹಾಕಿಕೊಂಡು, ಅದರಲ್ಲಿ ಕುಳಿತು ಆನ್‌ಲೈನ್ ತರಗತಿ […]